ಒಂಟಾರಿಯೋ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತದ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ.
ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ-20 ಲೀಗ್ನಲ್ಲಿ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದು, ಕಳೆದೆರಡು ಪಂದ್ಯಗಳಲ್ಲಿ ತಮ್ಮ ನೈಜ ಬ್ಯಾಟಿಂಗ್ಗೆ ಮರಳಿದ್ದರು. ಶನಿವಾರ ನಡೆದ ಬ್ರಂಪ್ಟನ್ ವೋಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್-ಫೀಲ್ಡಿಂಗ್ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದಾರೆ.
-
Stunning catch by @YUVSTRONG12 to dismiss @54simmo.#GT2019 #BWvsTN @TorontoNational @BramptonWolves pic.twitter.com/ih1VzjxMQ5
— GT20 Canada (@GT20Canada) August 4, 2019 " class="align-text-top noRightClick twitterSection" data="
">Stunning catch by @YUVSTRONG12 to dismiss @54simmo.#GT2019 #BWvsTN @TorontoNational @BramptonWolves pic.twitter.com/ih1VzjxMQ5
— GT20 Canada (@GT20Canada) August 4, 2019Stunning catch by @YUVSTRONG12 to dismiss @54simmo.#GT2019 #BWvsTN @TorontoNational @BramptonWolves pic.twitter.com/ih1VzjxMQ5
— GT20 Canada (@GT20Canada) August 4, 2019
ಬ್ರಂಪ್ಟನ್ ತಂಡದ ಆರಂಭಿಕ ಆಟಗಾರ ಲೆಂಡ್ ಸಿಮೋನ್ಸ್ ಅವರ ಅದ್ಭುತ ಕ್ಯಾಚ್ ಹಿಡಿದು ತಾವೂ ಇಂದಿಗೂ ಬೆಸ್ಟ್ ಫೀಲ್ಡರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಎದುರಾಳಿ ನೀಡಿದ್ದ 223 ರನ್ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 51 ರನ್ಗಳಿಸಿದ್ದರು. ಆದರೆ, 20 ಓವರ್ಗಲಲ್ಲಿ 211 ರನ್ಗಳಿಸಿದ ಯುವಿ ನೇತೃತ್ವದ ಟೊರೊಂಟೋ ನ್ಯಾಷನಲ್ಸ್ 11 ರನ್ಗಳಿಂದ ಸೋಲೊಪ್ಪಿಕೊಂಡಿತು.