ETV Bharat / sports

ಕ್ಯಾನ್ಸರ್​ಗೆ ಸವಾಲೆಸೆದು ವಿಶ್ವಕಪ್​ ತಂದುಕೊಟ್ಟ ಯುವಿಗೆ ಪ್ರತಿಮೆ ಮೂಲಕ ಗೌರವ - ಪಂಜಾಬ್​ ಕ್ರಿಕೆಟ್​ ಸಂಸ್ಥೆ

ಭಾರತ ತಂಡಕ್ಕೆ 18ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಯುವರಾಜ್ ಸಿಂಗ್​ ಅವರ ಪ್ರತಿಮೆಯನ್ನು ಅವರ ತವರೂರಾದ ಪಂಜಾಬ್​ನ ಫಿರೋಜ್ಪುರ್ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ನಿರ್ಮಿಸಲಾಗಿದೆ.

Yuvraj Singh
Yuvraj Singh
author img

By

Published : Jan 4, 2020, 6:42 PM IST

ಫಿರೋಜ್ಪುರ್(ಪಂಜಾಬ್​): ಭಾರತಕ್ಕೆ ತನ್ನ ಸ್ಫೋಟಕ ಆಟದ ಮೂಲಕ ಟಿ20 ವಿಶ್ವಕಪ್​ ತಂದುಕೊಟ್ಟ ಹಾಗೂ ಕ್ಯಾನ್ಸರ್​ ನೋವಿನಲ್ಲೂ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಯುವರಾಜ್​ ಸಿಂಗ್​ಗೆ ಗೌರವ ಸೂಚಕವಾಗಿ ಪಂಜಾಬ್​ ಕ್ರಿಕೆಟ್​ ಸಂಸ್ಥೆ ಪ್ರತಿಮೆ ನಿರ್ಮಿಸಿದೆ.

ಭಾರತ ತಂಡಕ್ಕೆ 18 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಯುವರಾಜ್ ಸಿಂಗ್​ ಅವರ ಪ್ರತಿಮೆಯನ್ನು ತವರೂರಾದ ಪಂಜಾಬ್​ನ ಫಿರೋಜ್ಪುರ್ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ನಿರ್ಮಿಸಲಾಗಿದೆ.

ಯುವರಾಜ್​ ಸಿಂಗ್​ ಶತಕ ಸಿಡಿಸಿ ಸಂಭ್ರಮಿಸುತ್ತಿರುವ ಸಂದರ್ಭದ ಪ್ರತಿಮೆಯನ್ನು 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕ್ರಿಕೆಟ್ ಕಲಿಯಲು ಬರುವ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲೆಂದು ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಕ್ರೀಡಾಂಗಣದ ಅಧಿಕಾರಿ ತಿಳಿಸಿದ್ದಾರೆ.

ಯುವರಾಜ್​ ಸಿಂಗ್​ ಜೂನ್​ 10 2019ರಂದು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ವಿಶ್ವದ ಕೆಲವು ಟಿ20 ಲೀಗ್​ ಹಾಗೂ ಟಿ10 ಲೀಗ್​ನಲ್ಲಿ ಆಡಲು ಬಿಸಿಸಿಐನಿಂದ ಅನುಮತಿ ಪಡೆದಿರುವುದರಿಂದ ಅವರು 2020ರ ಐಪಿಎಲ್​ನಲ್ಲೂ ಆಡುವಂತಿಲ್ಲ. 2000 ಅಕ್ಟೋಬರ್​ 3 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಭಾರತದ ಪರ​ 40 ಟೆಸ್ಟ್​, 304 ಏಕದಿನ ಹಾಗೂ 58 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು,11 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್​ಗಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.