ಹೈದರಾಬಾದ್: ಮೈದಾನದಲ್ಲಿ ಅತ್ಯಂತ ಚುರುಕಿನ ಫೀಲ್ಡಿಂಗ್, ಬ್ಯಾಟ್ ಹಿಡಿದು ಬಂದರೆ ಸಿಕ್ಸರ್ ಮೇಲೆ ಸಿಕ್ಸರ್, ಪಾರ್ಟ್ ಟೈಂ ಬೌಲರ್ ಆಗಿಯೂ ವಿಕೆಟ್ ಕೀಳುವ ಚಾಕಚಕ್ಯತೆ... ಈ ಆಲ್ರೌಂಡರ್ ಹೆಸರು ಯುವರಾಜ್ ಸಿಂಗ್. ಕ್ರಿಕೆಟ್ ಪ್ರೇಮಿಗಳ ಪ್ರೀತಿಯ ಯುವಿಗೆ ಇಂದು 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್ರೌಂಡರ್ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಹೆಸರು ಯುವರಾಜ್ ಸಿಂಗ್. ಯಾವುದೇ ಮೈದಾನವಾದರೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲ ಯುವಿ, ಫೀಲ್ಡಿಂಗ್ನಲ್ಲಿ ಟೀಂ ಇಂಡಿಯಾದ ಹಲವು ಹಾಲಿ ಆಟಗಾರರಿಗೆ ಮಾದರಿ.
ಟೀಂ ಇಂಡಿಯಾದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಯುವರಾಜ್ ಸಿಂಗ್, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಮಾತ್ರ ಅಷ್ಟೊಂದು ಮಿಂಚು ಹರಿಸಿಲ್ಲ. 2019ರ ವಿಶ್ವಕಪ್ ಆಡುವ ಮಹದಾಸೆ ಹೊಂದಿದ್ದ 'ಪಂಜಾಬ್ ಕಾ ಪುತ್ತರ್', ಅದು ಈಡೇರದೆ ಎಲ್ಲ ಮಾದರಿಗೂ ವಿದಾಯ ಘೋಷಿಸಿದರು. ಮಹಾಮಾರಿ ಕ್ಯಾನ್ಸರ್ ಹಿಮ್ಮೆಟ್ಟಿಸಿ ಮರು ಹುಟ್ಟು ಪಡೆದ ಯುವಿ ನಂತರ ಮೈದಾನದಲ್ಲಿ ಕೊಂಚ ಮಂಕಾಗಿದ್ದರು. ಇದೇ ಕಾರಣದಿಂದ ತಂಡಕ್ಕೂ ಬೇಡವಾದರು.
ಭಾರತದ ಪರ ಯುವರಾಜ್ ಸಿಂಗ್ 304 ಏಕದಿನ(8701 ರನ್), 58 ಟಿ-20(1177 ರನ್) ಹಾಗೂ 40 ಟೆಸ್ಟ್(1900 ರನ್) ಪಂದ್ಯವನ್ನಾಡಿದ್ದಾರೆ. ಭಾರತ ತಂಡಕ್ಕೆ 2011ರ ವಿಶ್ವಕಪ್ ಗೆಲುವು ಸೇರಿದಂತೆ ಹಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವಿ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ...
ಯುವರಾಜ್ ಸಿಂಗ್ ಬ್ಯಾಟಿಂಗ್ ಶೈಲಿ - ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ವೇಗದ ಬೌಲರ್ ಆಗಿದ್ದ ಯುವಿ ತಂದೆ ಟೀಂ ಇಂಡಿಯಾ ಪರ ಏಕೈಕ ಟೆಸ್ಟ್ ಹಾಗೂ 6 ಏಕದಿನ ಪಂದ್ಯ ಆಡಿದ್ದರು.
- ಬಾಲ್ಯದ ದಿನದಲ್ಲಿ ಯುವರಾಜ್ ಕ್ರಿಕೆಟ್ನಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ರೋಲರ್ ಸ್ಕೇಟಿಂಗ್ನಲ್ಲಿ U-14 ವಿಭಾಗದಲ್ಲಿ ಯುವರಾಜ್ ಭಾರತನ್ನು ಪ್ರತಿನಿಧಿಸಿದ್ದರು. ಆದರೆ ತಂದೆಯ ಒತ್ತಾಸೆಗೆ ಕ್ರಿಕೆಟ್ ಬ್ಯಾಟ್ ಹಿಡಿದರು.
ಸತತ ಆರು ಸಿಕ್ಸರ್ ಸಿಡಿಸಿದ ಕ್ಷಣ - ಯುವರಾಜ್ ಸಿಂಗ್ ತಂದೆ ಸ್ವತಃ ಓರ್ವ ಕ್ರಿಕೆಟಿಗರಾಗಿದ್ದರಿಂದ ತಮ್ಮ ಮಗನಿಗೆ ನವಜೋತ್ ಸಿಂಗ್ ಸಿಧು ಬಳಿ ತರಬೇತಿ ಕೊಡಿಸಿದ್ದರು. ಬ್ಯಾಟಿಂಗ್ನಲ್ಲಿ ಕಳಪೆಯಾಗಿದ್ದ ಯುವಿಯನ್ನು ಬಿಗ್ ಹಿಟ್ಟರ್ ಮಾಡಿದ್ದೇ ಸಿಧು..!
- U-19 ವಿಭಾಗದಲ್ಲಿ ಕೂಚ್-ಬೇಹರ್ ಟ್ರೋಫಿಯಲ್ಲಿ 358 ರನ್ ಸಿಡಿಸುವ ಮೂಲಕ ಯುವಿ ಮುನ್ನೆಲೆಗೆ ಬಂದಿದ್ದರು.
ಅದ್ಭುತ ಫೀಲ್ಡರ್ ಯುವರಾಜ್ ಸಿಂಗ್ - ಕ್ರಿಕೆಟ್ ಇತಿಹಾಸದಲ್ಲಿ ಮೂರು ವಿವಿಧ ವಿಶ್ವಕಪ್ ಗೆದ್ದ ವಿಶೇಷ ದಾಖಲೆ ಯುವಿ ಹೆಸರಲ್ಲಿದೆ. 2000ದಲ್ಲಿ ಐಸಿಸಿ U-19, 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಭಾರತ ಗೆದ್ದಾಗ ಯುವರಾಜ್ ಸಿಂಗ್ ಟೀಂ ಇಂಡಿಯಾದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
- 2007ರ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಎಲ್ಲ ಆರು ಎಸೆತಗಳನ್ನು ಸಿಕ್ಸರ್ಗಟ್ಟಿದ್ದು ಇಂದಿಗೂ ವಿಶ್ವದಾಖಲೆ.
ಕೂಲ್ ಕ್ಯಾಪ್ಟನ್ ಧೋನಿ ಜತೆಗೆ ಯುವರಾಜ್ ಸಿಂಗ್ - 2011ರ ಏಕದಿನ ವಿಶ್ವಕಪ್ನಲ್ಲಿ 300ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಕಿತ್ತು ಆಲ್ರೌಂಡ್ ಪ್ರದರ್ಶನ ನೀಡಿದ್ದರು. ಇದರ ಪರಿಣಾಮವೇ ಭಾರತಕ್ಕೆ ವಿಶ್ವಕಪ್ ಗೆಲುವು ಸುಗಮವಾಗಿತ್ತು.
- 2014 ಐಪಿಎಲ್ನಲ್ಲಿ ಆರ್ಸಿಬಿ ₹14 ಕೋಟಿ ಹಾಗೂ 2015ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ₹16 ಕೋಟಿಗೆ ಯುವರಾಜ್ ಸಿಂಗ್ ಖರೀದಿ ಮಾಡಿತ್ತು.
ಗಂಗೂಲಿ ಜೊತೆ ಯುವರಾಜ್ ಸಿಂಗ್

Intro:Body:
ಹೈದರಾಬಾದ್: ಮೈದಾನದಲ್ಲಿ ಅತ್ಯಂತ ಚುರುಕಿನ ಫೀಲ್ಡಿಂಗ್, ಬ್ಯಾಟ್ ಹಿಡಿದು ಬಂದರೆ ಸಿಕ್ಸರ್ ಮೇಲೆ ಸಿಕ್ಸರ್, ಪಾರ್ಟ್ಟೈಂ ಬೌಲರ್ ಆಗಿಯೂ ವಿಕೆಟ್ ಕೀಳುವ ಚಾಕಚಕ್ಯತೆ... ಈ ಆಲ್ರೌಂಡರ್ ಹೆಸರು ಯುವರಾಜ್ ಸಿಂಗ್. ಕ್ರಿಕೆಟ್ ಪ್ರೇಮಿಗಳ ಪ್ರೀತಿಯ ಯುವಿಗೆ ಇಂದು 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್ರೌಂಡರ್ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಹೆಸರು ಯುವರಾಜ್ ಸಿಂಗ್. ಯಾವುದೇ ಮೈದಾನವಾದರೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲ ಯುವಿ, ಫೀಲ್ಡಿಂಗ್ನಲ್ಲಿ ಟೀಂ ಇಂಡಿಯಾದ ಹಾಲಿ ಆಟಗಾರರಿಗೆ ಮಾದರಿ.
ಟೀಂ ಇಂಡಿಯಾದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಯುವರಾಜ್ ಸಿಂಗ್ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಮಾತ್ರ ಅಷ್ಟೊಂದು ಮಿಂಚು ಹರಿಸಿಲ್ಲ. 2019ರ ವಿಶ್ವಕಪ್ ಆಡುವ ಮಹದಾಸೆ ಹೊಂದಿದ್ದ ಪಂಜಾಬ್ ಕಾ ಪುತ್ತರ್, ಅದು ಈಡೇರದೆ ಎಲ್ಲ ಮಾದರಿಗೂ ವಿದಾಯ ಘೋಷಿಸಿದರು.
ಭಾರತದ ಪರ ಯುವರಾಜ್ ಸಿಂಗ್ 304 ಏಕದಿನ(8701 ರನ್), 58 ಟಿ20(1177 ರನ್) ಹಾಗೂ 40 ಟೆಸ್ಟ್(1900 ರನ್) ಪಂದ್ಯವನ್ನಾಡಿದ್ದಾರೆ. ಭಾರತ ತಂಡಕ್ಕೆ 2011ರ ವಿಶ್ವಕಪ್ ಗೆಲುವು ಸೇರಿದಂತೆ ಹಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವಿ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ...
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ವೇಗದ ಬೌಲರ್ ಆಗಿದ್ದ ಯುವಿ ತಂದೆ ಟೀಂ ಇಂಡಿಯಾ ಪರ ಏಕೈಕ ಟೆಸ್ಟ್ ಹಾಗೂ 6 ಏಕದಿನ ಪಂದ್ಯ ಆಡಿದ್ದರು.
ಬಾಲ್ಯದ ದಿನದಲ್ಲಿ ಯುವರಾಜ್ ಕ್ರಿಕೆಟ್ನಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ರೋಲರ್ ಸ್ಕೇಟಿಂಗ್ನಲ್ಲಿ U-14 ವಿಭಾಗದಲ್ಲಿ ಯುವರಾಜ್ ಭಾರತನ್ನು ಪ್ರತಿನಿಧಿಸಿದ್ದರು. ಆದರೆ ತಂದೆಯ ಒತ್ತಾಸೆಗೆ ಕ್ರಿಕೆಟ್ ಬ್ಯಾಟ್ ಹಿಡಿದರು.
ಯುವರಾಜ್ ಸಿಂಗ್ ತಂದೆ ಸ್ವತಃ ಓರ್ವ ಕ್ರಿಕೆಟಿಗರಾಗಿದ್ದರಿಂದ ತಮ್ಮ ಮಗನಿಗೆ ನವಜೋತ್ ಸಿಂಗ್ ಸಿಧು ಬಳಿ ತರಬೇತಿ ನೀಡಿದ್ದರು. ಬ್ಯಾಟಿಂಗ್ನಲ್ಲಿ ಕಳಪೆಯಾಗಿದ್ದ ಯುವಿಯನ್ನು ಬಿಗ್ ಹಿಟ್ಟರ್ ಮಾಡಿದ್ದೇ ಸಿಧು..!
U-19 ವಿಭಾಗದಲ್ಲಿ ಕೂಚ್-ಬೇಹರ್ ಟ್ರೋಫಿಯಲ್ಲಿ 358 ರನ್ ಸಿಡಿಸುವ ಮೂಲಕ ಯುವಿ ಮುನ್ನೆಲೆಗೆ ಬಂದಿದ್ದರು.
ಕ್ರಿಕೆಟ್ ಇತಿಹಾಸದಲ್ಲಿ ಮೂರು ವಿವಿಧ ವಿಶ್ವಕಪ್ ಗೆದ್ದ ವಿಶೇಷ ದಾಖಲೆ ಯುವಿ ಹೆಸರಲ್ಲಿದೆ. 2000ದಲ್ಲಿ ಐಸಿಸಿ U-19, 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಭಾರತ ಗೆದ್ದಾಗ ಯುವರಾಜ್ ಸಿಂಗ್ ಟೀಂ ಇಂಡಿಯಾದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
2011ರ ಏಕದಿನ ವಿಶ್ವಕಪ್ನಲ್ಲಿ 300ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಕಿತ್ತು ಆಲ್ರೌಂಡ್ ಪ್ರದರ್ಶನ ನೀಡಿದ್ದರು. ಇದರ ಪರಿಣಾಮವೇ ಭಾರತಕ್ಕೆ ವಿಶ್ವಕಪ್ ಗೆಲುವು ಸುಗಮವಾಗಿತ್ತು.
2014 ಐಪಿಎಲ್ನಲ್ಲಿ ಆರ್ಸಿಬಿ ₹14 ಕೋಟಿ ಹಾಗೂ 2015ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ₹16 ಕೋಟಿಗೆ ಯುವರಾಜ್ ಸಿಂಗ್ ಖರೀದಿ ಮಾಡಿತ್ತು.
ತಮ್ಮ ಬಾಲ್ಯದ ದಿನಗಳಲ್ಲಿ ಯುವರಾಜ್ ಮಾತೃಭಾಷೆ ಪಂಜಾಬಿಯ ಚಲನಚಿತ್ರದಲ್ಲಿ ನಟಿಸಿದ್ದರು. ಬಾಲಿವುಡ್ ಸಿನಿಮಾ ಜಂಬೋಗೆ ಯುವಿ ಹಿನ್ನೆಲೆ ಧ್ವನಿ ನೀಡಿದ್ದರು.
Conclusion: