ಮುಂಬೈ: 2011ರಲ್ಲಿ ಶ್ವಾಸಕೋಶ ಕ್ಯಾನ್ಸರ್ ಹೋರಾಟದಲ್ಲಿ ಗೆದ್ದುಬಂದಿದ್ದ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಬಾಲಿವುಡ್ ಹಿರಿಯ ನಟ ಸಂಜಯ್ ದತ್ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾದ ಬೆನ್ನಲ್ಲೇ ಬೇಗ ಗುಣಮುಖರಾಗುವಂತೆ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದಾರೆ.
ವರದಿಗಳ ಪ್ರಕಾರ ಸಂಜಯ್ ದತ್, ಚಿಕಿತ್ಸೆಗಾಗಿ ಅಮರಿಕಕ್ಕೆ ತೆರಳಬಹುದೆಂದು ನಿರೀಕ್ಷಿಸಲಾಗಿದೆ. ಇದೇ ರೋಗದ ವಿರುದ್ಧ ಹೋರಾಡಿ ಗುಣಮುಖರಾಗಿರುವ ಯುವರಾಜ್ ಸಿಂಗ್ ಅವರು ಬಾಲಿವುಡ್ ಹಿರಿಯ ನಟನಿಗೆ ಟ್ವಿಟ್ಟರ್ ಮೂಲಕ ವಿಶೇಷ ಸಂದೇಶ ಕಳುಹಿಸಿದ್ದಾರೆ.
-
You are, have and always will be a fighter @duttsanjay. I know the pain it causes but I also know you are strong and will see this tough phase through. My prayers and best wishes for your speedy recovery.
— Yuvraj Singh (@YUVSTRONG12) August 11, 2020 " class="align-text-top noRightClick twitterSection" data="
">You are, have and always will be a fighter @duttsanjay. I know the pain it causes but I also know you are strong and will see this tough phase through. My prayers and best wishes for your speedy recovery.
— Yuvraj Singh (@YUVSTRONG12) August 11, 2020You are, have and always will be a fighter @duttsanjay. I know the pain it causes but I also know you are strong and will see this tough phase through. My prayers and best wishes for your speedy recovery.
— Yuvraj Singh (@YUVSTRONG12) August 11, 2020
"ನೀವೊಬ್ಬ ಫೈಟರ್ ಸಂಜಯ್ ದತ್, ಸದಾ ಹೋರಾಡುವ ಗುಣ ಹೊಂದಿದ್ದೀರಿ. ನನಗೆ ಆ ನೋವು ಏನೆಂದು ಚೆನ್ನಾಗಿ ತಿಳಿದಿದೆ. ಆದರೆ ನೀವು ತುಂಬಾ ಬಲಶಾಲಿಯಾಗಿದ್ದೀರಿ, ಅದನ್ನು ನಾವು ಈ ಕಠಿಣ ಸಂದರ್ಭದಲ್ಲಿ ನೋಡ ಬಯಸಿದ್ದೇವೆ. ನೀವು ಬೇಗ ಗುಣಮುಖರಾಗಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಯುವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
61 ವರ್ಷದ ಸಂಜಯ್ದತ್ಗೆ ಕ್ಯಾನ್ಸರ್ ಇರಬಹುದು ಎಂಬ ಸುದ್ದಿ ಹರಡುತ್ತಿದ್ದಂತೆ, ದತ್ ಸಾಮಾಜಿಕ ಜಾಲತಾಣದ ಮೂಲಕ, ತಾನು ಅನಾರೋಗ್ಯದ ಸಮಸ್ಯೆಯಿಂದ ಕೆಲವು ಸಮಯ ತಮ್ಮ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರು ನನ್ನ ಜೊತೆಯಿದ್ದಾರೆ. ಸುಖಾಸುಮ್ಮನೆ ಹಬ್ಬುವ ಊಹಾಪೋಹಗಳಿಂದ ಚಿಂತಿಸಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಮನವಿ ಮಾಡಿಕೊಂಡಿದ್ದರು.