ETV Bharat / sports

ದ್ರಾವಿಡ್​, ಲಕ್ಷ್ಮಣ್​, ಸೆಹ್ವಾಗ್​ರಂತೆ ಬೀಳ್ಕೊಡುಗೆ ಇಲ್ಲದೇ ವಿದಾಯ ಹೇಳಿದ ಯುವಿ! - ವಿಶ್ವಕಪ್​

2000ರಲ್ಲಿ ಅಂಡರ್​ 19 ವಿಶ್ವಕಪ್​, 2007ರಲ್ಲಿ ಟಿ -20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ಗಳಲ್ಲಿ ಭಾರತ ವಿಜಯ ಸಾಧಿಸುವುದಕ್ಕೆ ಯುವಿಯ ಪಾತ್ರ ಪ್ರಮುಖವಾಗಿತ್ತು. ಆದರೆ, 19 ವರ್ಷಗಳ ಸೇವೆಗೆ ಬಿಸಿಸಿಐ ವಿದಾಯದ ಪಂದ್ಯಕ್ಕೆ ಅವಕಾಶ ನೀಡದಿರುವುದು ಮಾತ್ರ ಯುವಿ ಅಭಿಮಾನಿಗಳಿಗೆ ಬೇಸರ ಮತ್ತು ಆಕ್ರೋಶ ತಂದಿದೆ.

yuvi
author img

By

Published : Jun 10, 2019, 5:04 PM IST

Updated : Jun 10, 2019, 6:50 PM IST

ಮುಂಬೈ: ಭಾರತ ಕಂಡ ಶ್ರೇಷ್ಠ ಫೀಲ್ಡರ್​, ಎರಡು ದಶಕಗಳ ಕಾಲ ಭಾರತದ ಪಾಲಿಗೆ ಕನಸಾಗಿದ್ದ ವಿಶ್ವಕಪ್​ ಟ್ರೋಫಿಯನ್ನು ಭಾರತದ ಪಾಲಿಗೆ ದೊರೆಕಿಸಿಕೊಟ್ಟಿದ್ದ ಯುವರಾಜ್​ ಸಿಂಗ್​ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಚಾಣಾಕ್ಷ್ಯ ಫೀಲ್ಡಿಂಗ್​, ಸ್ಫೋಟಕ ಬ್ಯಾಟಿಂಗ್​ಗೆ ಹೆಸರಾಗಿದ್ದ ಯುವರಾಜ್​ ಸಿಂಗ್​ ಕ್ಯಾನ್ಸರ್​ ಎಂಬ ಮಾರಕ ರೋಗದ ನಡುವೆಯೂ 2011ರ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

yuvaraj-singh
ಯುವರಾಜ್​ ಸಿಂಗ್​

ಯುವಿಗೆ ಸಿಗಲಿಲ್ಲ ಬೀಳ್ಕೊಡುಗೆ ಭಾಗ್ಯ:

19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಯುವಿಯನ್ನು ಬಿಸಿಸಿಐ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶ ಕಲ್ಲಪಿಸಲಿಲ್ಲ. ದ್ರಾವಿಡ್​ ವಿವಿಎಸ್​ ಲಕ್ಷ್ಮಣ್​, ಗಂಗೂಲಿ, ಸೆಹ್ವಾಗ್​ ಹಾಗೂ ಗಂಭೀರ್​ರಂತಯೇ ಯುವಿ ಕೂಡ ಬೀಳ್ಕೊಡುಗೆ ಪಂದ್ಯವಾಡದೇ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಯುವಿ ಬಿಸಿಸಿಐ ಯೋ ಯೋ ಟೆಸ್ಟ್​ ಪಾಸ್​ ಮಾಡಿದರೆ ಅವಕಾಶ ನೀಡುವುದಾಗಿ ತಿಳಿಸಿತ್ತು ಎಂದು ಯುವಿ ತಿಳಿಸಿದ್ದಾರೆ.

ಐಪಿಎಲ್​ನಲ್ಲೂ ಯುವಿಯ ತಿರಸ್ಕಾರ:

ಐಪಿಎಲ್​ನಲ್ಲಿ ಯುವರಾಜ್​ಸಿಂಗ್​ರನ್ನು ಒಂದು ಕೋಟಿಗೆ ಖರೀದಿಸಿದ್ದ ಯುವಿ ಮುಂಬೈ ಇಂಡಿಯನ್ಸ್​ ಯುವಿಗೆ ಅವಕಾಶ ನೀಡಿದ್ದು ಮಾತ್ರ ಕೇವಲ 3 ಪಂದ್ಯ ಗಳಲ್ಲಿ. ಫೈನಲ್​ನಲ್ಲಾದರೂ ಆಡುವ ಅವಕಾಶ ಪಡೆದು ನಿವೃತ್ತಿ ಘೋಷಿಸಲು ಅವಕಾಶ ನೀಡಬಹುದು ಎಂಬ ನಿರೀಕ್ಷಯಲ್ಲಿದ್ದ ಯುವಿ ಅಭಿಮಾನಿಗಳಿಗೆ ಅಲ್ಲೂ ನಿರಾಸೆಯಾಯಿತು.

2000ರಲ್ಲಿ ಅಂಡರ್​ 19 ವಿಶ್ವಕಪ್​, 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ಗಳಲ್ಲಿ ಭಾರತ ವಿಜಯ ಸಾಧಿಸುವುದಕ್ಕೆ ಯುವಿಯ ಪಾತ್ರ ಪ್ರಮುಖವಾಗಿತ್ತು. ಆದರೆ, 19 ವರ್ಷಗಳ ಸೇವೆಗೆ ಬಿಸಿಸಿಐ ವಿದಾಯದ ಪಂದ್ಯಕ್ಕೆ ಅವಕಾಶ ನೀಡದಿರುವುದು ಮಾತ್ರ ಯುವಿ ಅಭಿಮಾನಿಗಳಿಗೆ ಬೇಸರ ಮತ್ತು ಆಕ್ರೋಶ ತಂದಿದೆ.

Intro:Body:Conclusion:
Last Updated : Jun 10, 2019, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.