ETV Bharat / sports

ಕಿಂಗ್ಸ್​ ಇಲೆವೆನ್​ ಪಂಜಾಬ್​ ಮಣಿಸಿ ಸೇಡು ತೀರಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್​​! - ವಿಶ್ವಕಪ್​

ಕಿಂಗ್ಸ್​ ಇಲೆವೆನ್​ ನೀಡಿದ್ದ 164 ರನ್​ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್​ ಕಳೆದುಕೊಂಡು ಚೇಸ್​ ಮಾಡುವ ಮೂಲಕ ಟೂರ್ನಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನ ಭದ್ರಪಡಿಸಿಕೊಂಡಿದೆ.

ಡೆಲ್ಲಿ
author img

By

Published : Apr 21, 2019, 3:39 AM IST

ನವದೆಹಲಿ: ಶಿಖರ್​ ಧವನ್​ ಹಾಗೂ ನಾಯಕ ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​​​ ತಂಡವು ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ 5 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಪಂಜಾಬ್​ ನೀಡಿದ 164 ರನ್​ಗಳ ಗುರಿಯನ್ನು 19.4 ಓವರ್​ಗಳಲ್ಲಿ ತಲುಪುವ ಮೂಲಕ 12ನೇ ಆವೃತ್ತಿಯಲ್ಲಿ 6ನೇ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಮುಂದುವರೆದಿದೆ.

164 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಟಗಾರ ಧವನ್​ (56) ಆಕರ್ಷಕ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಧವನ್​ ಮಾಡಿದ ಆತುರಕ್ಕೆ ಪೃಥ್ವಿ ಶಾ ರನೌಟ್​ಗೆ ಬಲಿಯಾದರು. ಆದರೆ ಈ ವೇಳೆ​ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್​ (58) ಧವನ್​​ ಜೊತೆ 92 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು.

ಈ ಹಂತದಲ್ಲಿ ಧವನ್​ 56 ರನ್​ಗಳಿಸಿ ಔಟಾದರೆ, ಪಂತ್​ 6, ಇಂಗ್ರಾಮ್​ 19, ಅಕ್ಷರ್​ ಪಟೇಲ್​ 1 ರನ್​ ಗಳಿಸಿ ಗೆಲುವಿನ ಸನಿಹದಲ್ಲಿದ್ದಾಗ ವಿಕೆಟ್​ ಒಪ್ಪಿಸಿ ಗೆಲುವನ್ನು ಕೊನೆಯ ಓವರ್​ತನಕ ಹೋಗುವಂತೆ ಮಾಡಿದರು. ಆದರೆ ಅಯ್ಯರ್ ಔಟಾಗದೆ 58​ ಹಾಗೂ ರುದರ್​ಫರ್ಡ್​ ಔಟಾಗದೆ 2 ರನ್​ ಗಳಿಸಿ ವಿಕೆಟ್​ ನೀಡದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್​ ಪರ ಶಮಿ 1, ಹಾರ್ಡಸ್​ ವಿಜೋನ್​ 2 ವಿಕೆಟ್​ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ತಂಡ ಕ್ರಿಸ್​ ಗೇಲ್​ ಅಬ್ಬರದ ಅರ್ಧಶತಕ (37 ಎಸೆತಗಳಲ್ಲಿ 69), ಮಂದೀಪ್​ ಸಿಂಗ್​ 30 ರನ್​ ಹಾಗೂ ಹರಪ್ರೀತ್​​ ಬ್ರಾತ್​ ಗಳಿಸಿದ 20 ರನ್​ಗಳ ನೆರವಿನಿಂದ 7 ವಿಕೆಟ್​ ನಷ್ಟಕ್ಕೆ 163 ರನ್​ ಪೇರಿಸಿತ್ತು. ಡೆಲ್ಲಿ ಪರ ಸಂದೀಪ್​ ಲಾಮಿಚ್ಚನ್​ 3, ರಬಾಡಾ ಹಾಗೂ ಅಕ್ಷರ್​ ಪಟೇಲ್​ ತಲಾ 2 ವಿಕೆಟ್​ ಕಬಳಿಸಿದರು. ಇನ್ನು ಈ ಗೆಲುವಿನಿಂದ ಡೆಲ್ಲಿ 12 ಪಾಯಿಂಟ್ಸ್​ ಪಡೆದಿದ್ದು, ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

Intro:Body:

ಭಾರತೀಯ ಕ್ರಿಕೆಟ್​​ ಅಭಿಮಾನಿಗಳಿಗೆ ಈ ಬಾರಿ ಡಬಲ್​​ ಧಮಾಕಾ​​​.. ಐಪಿಎಲ್ ಸೀಸನ್​​ ಮುಗಿಯುತ್ತಿದ್ದಂತೆ ತಕ್ಷಣವೇ ವಿಶ್ವಕಪ್​​ ಮಹಾ ಸಮರ ಆರಂಭವಾಗಲಿದೆ. ಕ್ರೀಡಾಭಿಮಾನಿಗಳು ಈ ಮಹಾಟೂರ್ನಿ ವೀಕ್ಷಣೆಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರ ಜತೆಗೆ ವಿಶ್ವಕಪ್‌ ಮಹಾಸಮರಕ್ಕೆ ತೆರಳಲು ಟೀಂ ಇಂಡಿಯಾ ಸಿದ್ಧವಾಗಿದೆ. ಹಾಗಾಂದ್ರೆ ಮಹಾಟೂರ್ನಿಯಲ್ಲಿ ಅಬ್ಬರಿಸುವ ಕೊಹ್ಲಿ ಸೇನಾನಿಗಳ ಬಗ್ಗೆ ನಿಮಗೇಷ್ಟು ಗೊತ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.