ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಕೇವಲ 4 ರನ್ಗಳಿಸಿ ವೈಫಲ್ಯ ಅನುಭವಿಸಿರುವ ಯುವ ಆಟಗಾರ ಪೃಥ್ವಿ ಶಾ ತಮ್ಮ ವಿರುದ್ಧದ ಟೀಕೆಗೆ ತಿರುಗೇಟು ನೀಡಿದ್ದಾರೆ.
ಶಾ ಮೊದಲ ಇನ್ನಿಂಗ್ಸ್ನಲ್ಲಿ ಡಕ್ಔಟ್ ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ 4 ರನ್ಗಳಿಸಿ ಔಟ್ ಆಗಿದ್ದರು. ಎರಡೂ ಇನ್ನಿಂಗ್ಸ್ನಲ್ಲಿ ಬೌಲ್ಡ್ ಆಗಿದ್ದಕ್ಕೆ ಸುನೀಲ್ ಗವಾಸ್ಕರ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಶಾ ತಂತ್ರಗಾರಿಕೆಯನ್ನು ಟೀಕಿಸಿದ್ದರು.
21 ವರ್ಷದ ಆಟಗಾರ ಮೊದಲನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪೃಥ್ವಿ ಶಾ ಎರಡೂ ಅಭ್ಯಾಸ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. 4 ಇನ್ನಿಂಗ್ಸ್ಗಳಿಂದ 63 ರನ್ಗಳಿಸಿದ್ದರು. ಈಗಾಗಲೆ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಅವರ ಬದಲು ಮತ್ತೊಬ್ಬ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ರನ್ನು ಎರಡನೇ ಟೆಸ್ಟ್ನಲ್ಲಿ ಆಡಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.
ಆದರೆ ತಮ್ಮ ಟೀಕೆಗೆ ತಿರುಗೇಟು ನೀಡಿರುವ ಶಾ, "ನೀವು ಯಾವುದಾದರೊಂದು ಕೆಲಸವನ್ನು ನೀವು ಮಾಡಲು ಪ್ರಯತ್ನಿಸುವಾಗ ಜನರು ನಮ್ಮನ್ನು ಪ್ರೇರೇಪಿಸುವುದಿಲ್ಲ, ಇದರರ್ಥ ನಿಮ್ಮಿಂದ ಆ ಕೆಲಸ ಸಾಧ್ಯವಾಗುತ್ತದೆ, ಆದರೆ ಅವರಿಂದ ಸಾಧ್ಯವಾಗುವುದಿಲ್ಲ" ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂದೇಶ ಬರೆದುಕೊಂಡಿದ್ದಾರೆ.