ETV Bharat / sports

ನಶೀಮ್​ ಶಾ ಹ್ಯಾಟ್ರಿಕ್​, ಬಾಬರ್​ ಶತಕದ ಬಲ: ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್​ ಜಯ ಸಾಧಿಸಿದ ಪಾಕಿಸ್ತಾನ - ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ ಇನ್ನಿಂಗ್ಸ್​ ಜಯ

212 ರನ್​ಗಳ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 168 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್​ ಹಾಗೂ 44 ರನ್​ಗಳಿಂದ ಸೋಲುಕಂಡಿದೆ.

Pakistan vs Bangladesh
ಹ್ಯಾಟ್ರಿಕ್​ ವಿಕೆಟ್​ ಪಡೆದ ನಶೀಮ್​ ಶಾ
author img

By

Published : Feb 10, 2020, 2:21 PM IST

ರಾವಲ್ಪಿಂಡಿ: ತವರಿನ ಲಾಭ ಪಡೆದ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು ಇನ್ನಿಂಗ್ಸ್​ ಹಾಗೂ 44 ರನ್​ಗಳಿಂದ ಜಯಗಳಿಸಿದೆ.

212 ರನ್​ಗಳ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 168 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್​ ಹಾಗೂ 44 ರನ್​ಗಳಿಂದ ಸೋಲುಕಂಡಿದೆ.

ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ತಂಡ ಶಾಹೀನ್​ ಅಫ್ರಿದಿ(4) ಯಾಸಿರ್​ ಶಾ(2) ಅಬ್ಬಾಸ್​(2) ದಾಳಿಗೆ ಸಿಲುಕಿ ಮೊದಲ ಇನ್ನಿಂಗ್ಸ್​ನಲ್ಲಿ 233ಕ್ಕೆ ಆಲೌಟ್​ ಆಯಿತು. ​ಮೊಹಮ್ಮದ್​ ಮಿಥುನ್​(63) ಏಕೈಕ ಅರ್ಧಶತಕ ಸಿಡಿಸಿದರು.

ಇದಕ್ಕುತ್ತರವಾಗಿ ಪಾಕಿಸ್ತಾನ 445 ರನ್​ಗಳಿಸಿ 212 ರನ್​ಗಳ ಮುನ್ನಡೆ ಪಡೆಯಿತು. ಬಾಬರ್​ ಅಜಮ್​ 143, ಶಾನ್ ಮಸೂದ್​ 100, ಅಸಾದ್​ ಶಫಿಕ್​ 65, ಹ್ಯಾರಿಸ್​ ಸೊಹೈಲ್​ 75 ರನ್​ಗಳಿಸಿದ್ದರು.

Pakistan vs Bangladesh
ಹ್ಯಾಟ್ರಿಕ್​ ವಿಕೆಟ್​ ಪಡೆದ ನಶೀಮ್​ ಶಾ

ಬಾಂಗ್ಲಾದೇಶದ ಪರ ಅಬು ಜಾಯೇದ್​ 3, ರುಬೆಲ್​ ಹಸನ್​ 3, ತೈಜುಲ್​ ಹೊಸೈನ್​ 2 ಹಾಗೂ ಎಬಾದೊತ್​ ಹೊಸೈನ್​ ಒಂದು ವಿಕೆಟ್​ ಪಡೆದಿದ್ದರು.

212 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾದೇಶ ತಂಡ ಯುವ ಬೌಲರ್​ ನಸೀಮ್ ಶಾ ದಾಳಿಗೆ ತತ್ತರಿಸಿ 168 ರನ್​ಗಳಿಗೆ ಆಲೌಟ್​ ಆಯಿತು. ನಾಯಕ ಮೊಮಿಮುಲ್​ ಹಕ್​ 41 ರನ್​, ತಮೀಮ್​ 34, ನಜ್ಮುಲ್ ಹೊಸೈನ್​​ ಶಂಟೋ 38 ರನ್​ಗಳಿಸಿದರು.

ಪಾಕ್​ನ 16 ವರ್ಷದ ಬೌಲರ್​ ನಶೀಮ್​ ಶಾ ಹ್ಯಾಟ್ರಿಕ್​ ಸಹಿತ 4 ವಿಕೆಟ್​ ಪಡೆದು ಬಾಂಗ್ಲಾ ವಿರುದ್ಧ ಇನ್ನಿಂಗ್ಸ್​ ಜಯಕ್ಕೆ ಕಾರಣರಾದರು. ಅನುಭವಿ ಸ್ಪಿನ್ನರ್​ ಯಾಸಿರ್​ ಶಾ 4 ವಿಕೆಟ್​ ಪಡೆದು ಮಿಂಚಿದರು. ಹ್ಯಾಟ್ರಿಕ್​ ವಿಕೆಟ್​ ಪಡೆದ ವಿಶ್ವದ ಕಿರಿಯ ಬೌಲರ್​ ಎನಿಸಿಕೊಂಡ ನಶೀಮ್​ ಶಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಟೆಸ್ಟ್​ ಸರಣಿಯ ಎರಡನೇ ಟಿ20 ಪಂದ್ಯ ಏಪ್ರಿಲ್​ 5 ರಿಂದ ಆರಂಭವಾಗಲಿದೆ. ಇದರ ಮಧ್ಯೆ ಇತ್ತಂಡಗಳ ನಡುವೆ ಏಕೈಕ ಏಕದಿನ ಪಂದ್ಯ ಏಪ್ರಿಲ್​ 3 ರಂದು ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.