ETV Bharat / sports

ಕಿರಿಯ ವಿಶ್ವಕಪ್ ಫೈನಲ್‌: 5 ಬಾರಿ 50 ಕ್ಕಿಂತ ಹೆಚ್ಚು ರನ್​​ ಸಿಡಿಸಿ 'ಯಶಸ್ವಿ' ದಾಖಲೆ

author img

By

Published : Feb 9, 2020, 5:03 PM IST

ಬಾಂಗ್ಲಾದೇಶದ ವಿರುದ್ಧದ ಫೈನಲ್​ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಅರ್ಧಶತಕ ಸಿಡಿಸಿದ್ದು 2020ರ ವಿಶ್ವಕಪ್​ನಲ್ಲಿ ಸತತ ನಾಲ್ಕು ಬಾರಿ 50ಕ್ಕಿಂತ ಹೆಚ್ಚು ರನ್​ ಹಾಗೂ ಒಟ್ಟಾರೆ 5ನೇ ಅರ್ಧಶತಕದ ಸಾಧನೆ ಮಾಡಿದರು.

U19 world cup
ಯಶಸ್ವಿ ಜೈಸ್ವಾಲ್​ ಅರ್ಧಶತಕ

ಪಾಟ್‌ಶೆಫ್‌ಸ್ಟ್ರೂಮ್‌: ಅಂಡರ್​ 19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಭಾರತದ ಯಶಸ್ವಿ ಜೈಸ್ವಾಲ್​ ಸತತ 4ನೇ ಬಾರಿಗೆ ಅರ್ಧಶತಕ ಸಿಡಿಸಿದ ವಿಶ್ವದ 4ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಯಶಸ್ವಿ ಜೈಸ್ವಾಲ್​ ಈ ವಿಶ್ವಕಪ್​ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 59, ಜಪಾನ್​ ವಿರುದ್ಧ ಔಟಾಗದೆ 29, ನ್ಯೂಜಿಲ್ಯಾಂಡ್​ ವಿರುದ್ಧದ ಔಟಾಗದೆ 57, ಆಸ್ಟ್ರೇಲಿಯಾ ವಿರುದ್ಧ 62, ಪಾಕಿಸ್ತಾನ ವಿರುದ್ಧ ಔಟಾಗದೆ 105 ಹಾಗೂ ಫೈನಲ್​ ಪಂದ್ಯದಲ್ಲಿ 88 ಸಿಡಿಸಿದ್ದಾರೆ.

ವಿಶ್ವಕಪ್​ನಲ್ಲಿ ಸತತ 4 ಅರ್ಧಶತಕ ಸಿಡಿಸಿದವರಿವರು:

ಮೆಹೆದಿ ಹಸನ್​ ಮಿರಾಜ್ ​(2016)- ಬಾಂಗ್ಲಾದೇಶ
ಶುಬ್ಮನ್​ ಗಿಲ್​ (2018) - ಭಾರತ
ನಯೀಮ್​ ಯಂಗ್​ (2018) ಹಾಗೂ (2020) - ವೆಸ್ಟ್​ ಇಂಡೀಸ್​
ಯಶಸ್ವಿ ಜೈಸ್ವಾಲ್​ (2020)- ಭಾರತ

ವಿಶ್ವಕಪ್​ನಲ್ಲಿ 5 ಬಾರಿ ಅರ್ಧಶತಕ/ ಅದಕ್ಕಿಂತ ಹೆಚ್ಚು ರನ್​ಗಳಿಸಿದವರು:

ಬ್ರೆಟ್​ ವಿಲಿಯಮ್ಸ್ ​(1988) - ಆಸ್ಟ್ರೇಲಿಯಾ
ಸರ್ಫರಾಜ್​ ಖಾನ್​ (2016) - ಭಾರತ
ಯಶಸ್ವಿ ಜೈಸ್ವಾಲ್​ (2020) - ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.