ಹೈದರಾಬಾದ್: ಜೂನ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ಗೆ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಲಗ್ಗೆ ಹಾಕಿದ್ದು, ಇದೀಗ ಭಾರತ-ಇಂಗ್ಲೆಂಡ್ ನಡುವೆ ಸೆಣಸಾಟ ಶುರುವಾಗಲಿದೆ.
-
All to play for in the upcoming India v England series with three teams able to meet New Zealand in the final of the inaugural ICC World Test Championship!
— ICC (@ICC) February 2, 2021 " class="align-text-top noRightClick twitterSection" data="
Here's the breakdown, assuming a full 4-Test series with no ties and no further matches involving NZ or Australia 👇 #WTC21 pic.twitter.com/TTZFkPd1Ex
">All to play for in the upcoming India v England series with three teams able to meet New Zealand in the final of the inaugural ICC World Test Championship!
— ICC (@ICC) February 2, 2021
Here's the breakdown, assuming a full 4-Test series with no ties and no further matches involving NZ or Australia 👇 #WTC21 pic.twitter.com/TTZFkPd1ExAll to play for in the upcoming India v England series with three teams able to meet New Zealand in the final of the inaugural ICC World Test Championship!
— ICC (@ICC) February 2, 2021
Here's the breakdown, assuming a full 4-Test series with no ties and no further matches involving NZ or Australia 👇 #WTC21 pic.twitter.com/TTZFkPd1Ex
ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಬೇಕಾಗಿದ್ದ ಟೆಸ್ಟ್ ಸರಣಿ ಮುಂದೂಡಿಕೆಯಾಗಿರುವ ಕಾರಣ ನ್ಯೂಜಿಲ್ಯಾಂಡ್ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದು, ಇದೀಗ ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿದೆ.
ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 71.7 ಅಂಕ, ನ್ಯೂಜಿಲ್ಯಾಂಡ್ 70.0, ಆಸ್ಟ್ರೇಲಿಯಾ 69.2 ಅಂಕ ಹಾಗೂ ಇಂಗ್ಲೆಂಡ್ 68.7 ಅಂಕ ಹೊಂದಿದ್ದು, ಇಂಗ್ಲೆಂಡ್ ತಂಡ ಭಾರತಕ್ಕಿಂತಲೂ 18 ಅಂಕ ಕಡಿಮೆ ಹೊಂದಿದೆ.
ಇದನ್ನೂ ಓದಿ: ಕಾಂಗರೂ ವಿರುದ್ಧ ಐತಿಹಾಸಿಕ ಗೆಲುವು.. ರಾಜ್ಯಸಭೆಯಲ್ಲೂ ಟೀಂ ಇಂಡಿಯಾ ಗುಣಗಾನ!
ಇದೀಗ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಗೆಲುವು ಸಾಧಿಸಿದ್ರೂ ನೇರವಾಗಿ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದೆ. ಅದೇ ರೀತಿ ಕೊಹ್ಲಿ ಪಡೆ ಫೈನಲ್ಗೆ ಪ್ರವೇಶ ಪಡೆದುಕೊಳ್ಳಬೇಕೆಂದರೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಗೆಲುವಿನ ಲೆಕ್ಕಾಚಾರ ಹೀಗಿದೆ
ಟೀಂ ಇಂಡಿಯಾ :2-0, 2-1, 3-0, 3-1 or 4-0.
ಇಂಗ್ಲೆಂಡ್ :3-0, 3-1 or 4-0
ಒಂದು ವೇಳೆ ಉಭಯ ತಂಡಗಳು ಯಾವುದೇ ಗೆಲುವು ದಾಖಲು ಮಾಡದೇ ಎಲ್ಲ ಟೆಸ್ಟ್ ಪಂದ್ಯಗಳು ಡ್ರಾ ಆದರೆ, ಆಸ್ಟ್ರೇಲಿಯಾ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದೆ. ಜತೆಗೆ ಇಂಗ್ಲೆಂಡ್ 1-0, 2-0 or 2-1 ಅಂತರದಲ್ಲಿ ಗೆಲುವು ದಾಖಲು ಮಾಡಿದರೂ ಆಸ್ಟ್ರೇಲಿಯಾ ತಂಡ ಫೈನಲ್ಗೆ ಲಗ್ಗೆ ಹಾಕಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಜೂನ್ 18ರಿಂದ 22ರವರೆಗೆ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಇಂಡಿಯಾ ಫೈನಲ್ಗೆ ಹೋಗುವುದು ಹೇಗೆ!?
ಫೈನಲ್ಗೆ ಪ್ರವೇಶ ಪಡೆದುಕೊಳ್ಳಬೇಕಾದರೆ ಭಾರತಕ್ಕೆ 70 ಅಂಕಗಳ ಅವಶ್ಯಕತೆ ಇದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಗೆಲುವು ದಾಖಲು ಮಾಡಬೇಕಾಗಿದೆ. ಆಥವಾ 3-0 or 3-1 or 4-0 ಸರಣಿ ಕೈವಶ ಮಾಡಿಕೊಳ್ಳಬೇಕು.