ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 49 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್ ಬರೆದ ಮೊದಲ ಏಷ್ಯಾ ಪ್ಲೇಯರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತಿ ವೇಗವಾಗಿ 1000 ರನ್ಗಳಿಕೆ ಮಾಡಿರುವ ಏಷ್ಯಾದ ಮೊದಲ ಓಪನರ್ ಎಂಬ ಗೌರವ ಇದೀಗ ರೋಹಿತ್ ಪಾಲಾಗಿದೆ. ಟೆಸ್ಟ್ ಕ್ರಿಕೆಟ್ನ 17 ಇನ್ನಿಂಗ್ಸ್ಗಳಿಂದ ಅವರು ಈ ಸಾಧನೆ ನಿರ್ಮಾಣ ಮಾಡಿದ್ದಾರೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಆರಂಭಿಕ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಟಿ-20 ಕ್ರಿಕೆಟ್ನಲ್ಲಿ ಸಿಕ್ಸರ್‌ಗಳ ಸೆಂಚುರಿ: ಕಾಂಗರೂ ಪರ ಈ ದಾಖಲೆ ಬರೆದ ಮೊದಲ ಪ್ಲೇಯರ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಡೇವಿಡ್ ವಾರ್ನರ್ 948 ರನ್ ಹಾಗೂ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ 848 ರನ್ಗಳಿಕೆ ಮಾಡಿ ನಂತರದ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ, ಟೀಂ ಇಂಡಿಯಾ ಟೆಸ್ಟ್ ಉಪನಾಯಕ ರಹಾನೆ 1068 ರನ್ಗಳಿಕೆ ಮಾಡಿರುವ ಪ್ಲೇಯರ್ ಆಗಿದ್ದು, ಉಳಿದಂತೆ ಭಾರತದ ಯಾವುದೇ ಪ್ಲೇಯರ್ ಸಾವಿರ ರನ್ ಗಡಿ ದಾಟಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತಿ ಹೆಚ್ಚು ರನ್ಗಳಿಕೆ
- ಲಾಬುಶೇನ್ 1675 ರನ್
- ಸ್ಟೀವ್ ಸ್ಮಿತ್ 1341 ರನ್
- ಜೊ ರೂಟ್ 1630 ರನ್
- ಬೆನ್ ಸ್ಟೋಕ್ಸ್ 1301 ರನ್ ಗಳಿಕೆ
ಈ ಹಿಂದೆ ಕನ್ನಡಿಗ ಮಯಾಂಕ್ ಅಗರವಾಲ್ 19 ಇನ್ನಿಂಗ್ಸ್ಗಳಲ್ಲಿ ಸಾಧನೆ ಮಾಡಿದ್ದರು. ಜತೆಗೆ ವಿನೋದ್ ಕಾಂಬ್ಳೆ 14 ಇನ್ನಿಂಗ್ಸ್ ಹಾಗೂ ಚೇತೇಶ್ವರ್ ಪೂಜಾರಾ 18 ಇನ್ನಿಂಗ್ಸ್ಗಳಲ್ಲಿ ಈ ರೆಕಾರ್ಡ್ ನಿರ್ಮಾಣ ಮಾಡಿದ್ದಾರೆ.