ನವದೆಹಲಿ : ಜೂನ್ 10 ರಿಂದ 14ರವರೆಗೆ ನಡೆಯಬೇಕಿದ್ದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯ್ಶಿಪ್ ಫೈನಲ್ ಪಂದ್ಯ ಮೂಂದೂಡಿಕೆಯಾಗಿದೆ. ಜೂನ್ 18ರಿಂದ 22ರವರೆಗೆ ನಡೆಯಬಹುದು ಎನ್ನಲಾಗುತ್ತಿದೆ.
ಜೂನ್ 23 ರಿಸರ್ವ್ ಡೇ ಆಗಲಿದ್ದು, ಫೈನಲ್ ಪಂದ್ಯ ನಡೆಯುವ ವೇಳೆ ಮಳೆ ಅಥವಾ ಇನ್ಯಾವುದೇ ಅಡಚಣೆಯಿಂದ 5 ದಿನಗಳಲ್ಲಿ ಯಾವುದಾದರೊಂದು ದಿನ ಆಟ ಸ್ಥಗಿತಗೊಂಡ್ರೆ 23ರವರೆಗೂ ಆಟ ವಿಸ್ತರಿಸಬಹುದಾಗಿದೆ.
2021ರ ಐಪಿಎಲ್ ಫೈನಲ್ ಮತ್ತು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡುವಿನ ಸಾಮಿಪ್ಯ ಗಮನದಲ್ಲಿಟ್ಟುಕೊಂಡು ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಗೆ ಲಭ್ಯವಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ವೇಳಾಪಟ್ಟಿ ಇನ್ನು ಬಿಡುಗಡೆಯಾಗಿಲ್ಲ. ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಕ್ವಾರಂಟೈನ್ ಅಗತ್ಯವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಮುಂದಾಗಿದೆ ಎನ್ನಲಾಗುತ್ತಿದೆ.
ಭಾರತ ತಂಡ ಭಾಗಶಃ ಫೈನಲ್ ಪ್ರವೇಶಿಸುವುದು ಖಚಿತವಾಗಿದೆ. ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ 2-0ಯಲ್ಲಿ ಗೆದ್ದರೆ ಫೈನಲ್ ಪ್ರವೇಶ ಖಚಿತವಾಗಲಿದೆ. ಈ ಸರಣಿ ತವರಿನಲ್ಲಿ ನಡೆಯಲಿರುವುದರಿಂದ ಭಾರತವೇ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾದಲ್ಲಿ 2 ಪಂದ್ಯಗಳ ಸರಣಿಯನ್ನಾಡಬೇಕಿದೆ. ಅದರಲ್ಲಿ ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸಲಿದೆ. ಇಲ್ಲವಾದ್ರೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಲಾರ್ಡ್ಸ್ನಲ್ಲಿ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಸೆಣಸಾಡಲಿವೆ.
ಇದನ್ನು ಓದಿ:ಶ್ರೀಲಂಕಾ ವಿರುದ್ಧ 2-0ಯಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದ ಇಂಗ್ಲೆಂಡ್