ಜಮೈಕಾ: ಅಮೆರಿಕದಲ್ಲಿ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಸಾವನ್ನು ಫುಟ್ಬಾಲ್ ಆಟಗಾರರು, ಕ್ರಿಕೆಟಿಗರು ಹಾಗೂ ಸೆಲೆಬ್ರೆಟಿಗಳು ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್, ವರ್ಣ ತಾರತಮ್ಯ ನೀತಿ ಫುಟ್ಬಾಲ್ನಲ್ಲಿ ಮಾತ್ರವಲ್ಲದೆ ಕ್ರಿಕೆಟ್‌ನಲ್ಲೂ ಇದೆ ಎಂದು ಆರೋಪಿಸಿದ್ದಾರೆ.
ಎಲ್ಲಾ ಜೀವಿಗಳಂತೆ ಕಪ್ಪು ಜನರ ಜೀವಕ್ಕೂ ಮೌಲ್ಯವಿದೆ. ವರ್ಣದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಲ್ಲಿಸಿ. ಕಪ್ಪು ಜನಾಂಗದವರನ್ನು ಮೂರ್ಖರನ್ನಾಗಿಸಬೇಡಿ. ಇನ್ನು ಕರಿಯರು ಕೂಡ ತಮ್ಮ ವರ್ಣದವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
-
✊🏿🇯🇲✊🏿 pic.twitter.com/kyJP7GxnlK
— Chris Gayle (@henrygayle) June 1, 2020 " class="align-text-top noRightClick twitterSection" data="
">✊🏿🇯🇲✊🏿 pic.twitter.com/kyJP7GxnlK
— Chris Gayle (@henrygayle) June 1, 2020✊🏿🇯🇲✊🏿 pic.twitter.com/kyJP7GxnlK
— Chris Gayle (@henrygayle) June 1, 2020
"ನಾನು ವಿಶ್ವದಾದ್ಯಂತ ಪ್ರಯಾಣಿಸಿದ್ದೇನೆ. ಕಪ್ಪಗಿರುವ ಕಾರಣ ನಾನು ಹಲವಾರು ಜನಾಂಗೀಯ ನಿಂದನೆಗಳನ್ನು ಅನುಭವಿಸಿದ್ದೇನೆ. ನಂಬಿ, ನನ್ನ ವಿರುದ್ಧ ಜನಾಂಗೀಯವಾಗಿ ನಿಂದಿಸಿದವರ ಪಟ್ಟಿ ತುಂಬಾ ದೊಡ್ಡದಿದೆ,"
ವರ್ಣಭೇದ ನೀತಿ ಕೇವಲ ಫುಟ್ಬಾಲ್ನಲ್ಲಿ ಮಾತ್ರವಲ್ಲ. ಕ್ರಿಕೆಟ್‌ನಲ್ಲೂ ಇದೆ. ತಂಡಗಳಲ್ಲಿಯೂ ನಾನೊಬ್ಬ ಕರಿಯ ಆಟಗಾರನಾಗಿ ನನಗೆ ತಿಳಿದಿರುವ ಹಾಗೆ ಕೊನೆಯ ಆದ್ಯತೆ ನೀಡಲಾಗುತ್ತದೆ. ಕಪ್ಪು ಎಂದರೆ ಬಲಿಷ್ಠ, ಕಪ್ಪು ಎಂದರೆ ಗೌರವ ಎಂದು ಯೂನಿವರ್ಸ್ ಬಾಸ್ ಟ್ವೀಟ್ ಮಾಡಿದ್ದಾರೆ.
ಕ್ರಿಸ್ ಗೇಲ್ ಮಾತ್ರವಲ್ಲದೆ, ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಶ್ಫೋರ್ಡ್, ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್, ಬ್ಯಾಸ್ಕೆಟ್ ಬಾಲ್ ಲೆಜೆಂಡ್ ಮಕಲ್ ಜೊರ್ಡಾನ್ ಅವರು ಫ್ಲಾಯ್ಡ್ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.