ETV Bharat / sports

ಬೇಡಿ ಜೀ ಮನವಿ ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ: ಡಿಡಿಸಿಎ ಅಧ್ಯಕ್ಷ ರೋಹನ್​

ಫಿರೋಜ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕ್ರಿಕೆಟಿಗನ ಬದಲು ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದವರ(ಅರುಣ್ ಜೇಟ್ಲಿ) ಪ್ರತಿಮೆಯನ್ನು ನಿರ್ಮಿಸುವ ನಿರ್ಧಾರ ಕೈಗೊಂಡಿದೆ ಎಂಬ ಕಾರಣಕ್ಕೆ ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್​ ಅಸೋಸಿಯೇಸನ್​ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದಲ್ಲದೆ, ಕೋಟ್ಲಾ ಸ್ಟೇಡಿಯಂನ ಸ್ಟ್ಯಾಂಡ್​ನಿಂದ ತಮ್ಮ ಹೆಸರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.

ಬಿಷನ್​ ಸಿಂಗ್ ಬೇಡಿ
ಬಿಷನ್​ ಸಿಂಗ್ ಬೇಡಿ
author img

By

Published : Dec 28, 2020, 7:41 PM IST

ನವದೆಹಲಿ: ಭಾರತ ಕ್ರಿಕೆಟ್​ನ ಮಾಜಿ ಆಟಗಾರ ಬಿಷನ್​ ಸಿಂಗ್​ ಬೇಡಿಯನ್ನು ಡಿಡಿಸಿಎನ 'ಭೀಷ್ಮ ಪಿತಾಮಹ' ಎಂದು ಕರೆದಿರುವ ಡೆಲ್ಲಿ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷ ರೋಹನ್​ ಜೇಟ್ಲಿ, ಬೇಡಿ ಫಿರೋಜ್​ ಕೋಟ್ಲಾ ಮೈದಾನದಿಂದ ತಮ್ಮ ಹೆಸರನ್ನು ತೆಗೆದುಹಾಕಲು ಸಲ್ಲಿಸಿರುವ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ಫಿರೋಜ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕ್ರಿಕೆಟಿಗನ ಬದಲು ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದವರ(ಅರುಣ್ ಜೇಟ್ಲಿ) ಪ್ರತಿಮೆಯನ್ನು ನಿರ್ಮಿಸುವ ನಿರ್ಧಾರ ಕೈಗೊಂಡಿದೆ ಎಂಬ ಕಾರಣಕ್ಕೆ ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್​ ಅಸೋಸಿಯೇಸನ್​ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದಲ್ಲದೆ, ಕೋಟ್ಲಾ ಸ್ಟೇಡಿಯಂನ ಸ್ಟ್ಯಾಂಡ್​ನಿಂದ ತಮ್ಮ ಹೆಸರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.

ಇತ್ತೀಚೆಗೆ ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೇ ಅಲಂಕರಿಸಿರುವ ಅರುಣ್ ಜೇಟ್ಲಿ ಅವರ ಮಗ ರೋಹನ್ ಜೇಟ್ಲಿ, ಈ ವಿಷಯದ ಬಗ್ಗೆ ಬೇಡಿ ಅವರೊಂದಿಗೆ ವೈಯಕ್ತಿಕವಾಗಿ ಕುಳಿತು ಮಾತನಾಡುವೆ. ಆದರೆ ಅವರು ತಮ್ಮ ತಂದೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ. ಆದಾಗ್ಯೂ ಡಿಡಿಸಿಎ ಸೋಮವಾರ ಗೃಹ ಸಚಿವ ಅಮಿತ್​ ಶಾ ಸಮ್ಮುಖದಲ್ಲಿ ಅರುಣ್ ಜೇಟ್ಲಿ ಪ್ರತಿಮೆಯನ್ನು ಅನಾವರಣ ಮಾಡಿದೆ.

ಇದನ್ನು ಓದಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿ. ಅರುಣ್ ಜೇಟ್ಲಿ ಪ್ರತಿಮೆ ಅನಾವರಣ

ಬೇಡಿ ಜೀಯವರು ಡೆಲ್ಲಿ ಕ್ರಿಕೆಟ್​ನ ಭೀಷ್ಮ ಪಿತಾಮಹ ಇದ್ದಂತೆ. ಮೀಸಲಾತಿ ವಿಷಯದ ಬಗ್ಗೆ ಅವರಿಗೆ ಏನಾದರು ಸಮಸ್ಯೆಗಳಿದ್ದರೆ ಅದರ ಬಗ್ಗೆ ಚರ್ಚಿಸಲು ಹಲವಾರು ಮಾರ್ಗಗಳಿವೆ. ನಾನಿನ್ನು ಯುವಕ. ಹಿರಿಯರ ಮಾರ್ಗದರ್ಶನಗಳ ಅಗತ್ಯವಿದೆ. ಅವರ ಹೆಸರು ಕೋಟ್ಲಾ ಸ್ಟೇಡಿಯಂನಲ್ಲಿರುವುದು ಅವರಿಗೆ ನೀಡಿರುವ ದೊಡ್ಡ ಗೌರವ ಎಂದಿದ್ದಾರೆ.

ಅಲ್ಲದೆ ಈ ವಿಷಯ ಅಪೆಕ್ಸ್​ ಕೌನ್ಸಿಲ್​ನಲ್ಲಿ ತೀರ್ಮಾನವಾಗಬೇಕಿದೆ. ಇದು ನನ್ನ ವ್ಯಾಪ್ತಿಯಲ್ಲಿಲ್ಲ. ಯಾರ ಹೆಸರನ್ನು ತೆಗೆಯುವ ಅಧಿಕಾರವೂ ನನಗಿಲ್ಲ. ನಾವು ಈ ಕುರಿತು ಡಿಡಿಸಿಎ ಸಭೆಯಲ್ಲಿ ಚರ್ಚಿಸಲಿದ್ದೇವೆ. ಜೊತೆಗೆ ನಾವು ಅವರ ಬೇಡಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ. ಡಿಡಿಸಿಎ ಮತ್ತು ಬೇಡಿ ನಡುವಿನ ಸಂಬಂಧ ತುಂಬಾ ದೀರ್ಘವಾದದ್ದಾಗಿದೆ ಎಂದು ರೋಹನ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.