ETV Bharat / sports

ಹಗಲು-ರಾತ್ರಿ ಟೆಸ್ಟ್​ನಲ್ಲಿ ಸೋಲಿಲ್ಲದ ಸರದಾರನಾಗಿರುವ ಆಸೀಸ್​ ತಂಡಕ್ಕೆ ಕೊಹ್ಲಿ ಪಡೆ ಸವಾಲು? - ಭಾರತ- ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ

ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ ಪಡೆ ಹಗಲು-ರಾತ್ರಿ ಪಂದ್ಯ ಆಡುವ ಸಾಧ್ಯತೆ ಇದೆ ಬಿಸಿಸಿಐ ಮೂಲಗಳು ತಿಳಿಸಿವೆ.

Day-Night Test
Day-Night Test
author img

By

Published : Feb 16, 2020, 7:22 PM IST

Updated : Feb 16, 2020, 7:54 PM IST

ಮುಂಬೈ: ಬಾಂಗ್ಲಾದೇಶದ ವಿರುದ್ಧ ಚೊಚ್ಚಲ ಅಹರ್ನಿಶಿ ಟೆಸ್ಟ್​ ಪಂದ್ಯವಾಡಿ ಗೆದ್ದ ನಂತರ ಭಾರತ ತಂಡ ವಿದೇಶದಲ್ಲೂ ಪಿಂಕ್​ ಬಾಲ್​ನಲ್ಲಿ ಆಡುವ ಉತ್ಸಾಹ ತೋರಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ತಿಂಗಳ ಹಿಂದೆಯಷ್ಟೇ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಭಾರತ ವಿಶ್ವದ ಯಾವುದೇ ದೇಶದಲ್ಲಾದರೂ ಪಿಂಕ್​ ಬಾಲ್​ ಟೆಸ್ಟ್​ ಆಡಲು ಸಿದ್ಧವಿದೆ. ಈ ಮೊದಲು ತಾವೇ ತಿರಸ್ಕರಿಸಿದ್ದ ಆಸ್ಟ್ರೇಲಿಯಾದಲ್ಲೂ ಕೂಡ ಎಲ್ಲಿ ಬೇಕಾದರೂ ಹಗಲುರಾತ್ರಿ ಪಂದ್ಯವಾಡಲು ನಾವು ಸಿದ್ಧ ಎಂದಿದ್ದರು.

ಇದೀಗ ಬಿಸಿಸಿಐ ಕೂಡ ಕೊಹ್ಲಿ ಮಾತನ್ನು ಎತ್ತಿ ಹಿಡಿದಿದ್ದು, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಹಗಲು-ರಾತ್ರಿ ಪಂದ್ಯ ಆಡುವ ಸಾಧ್ಯತೆ ಇದೆ ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ತಂಡ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಐತಿಹಾಸಿಕ ಅಹರ್ನಿಶಿ ಪಂದ್ಯವಾಡಿತ್ತು. ಇನ್ನಿಂಗ್ಸ್​ ಹಾಗೂ 36 ರನ್​ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿತ್ತು.

ಭಾರತ ತಂಡ 2018-19ರಲ್ಲಿ ಅನುಭವದ ಕೊರತೆಯಿಂದ ಅಡಿಲೇಡ್​ನಲ್ಲಿ ಹಗಲು-ರಾತ್ರಿ ಪಂದ್ಯವಾಡಲು ಹಿಂದೇಟು ಹಾಕಿತ್ತು. ಆದರೆ ಇಂದು ಅಡಿಲೇಡ್​ನಲ್ಲಾದರು ಸರಿ, ಗಬ್ಬ, ಪರ್ತ್​ ಎಲ್ಲಾದರೂ ನಾವು ಸಿದ್ಧವಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದರು.

ಈ ಕುರಿತು ಕ್ರಿಕೆಟ್​ ಆಸ್ಟ್ರೇಲಿಯಾ ಅಧಿಕಾರಿಗಳು ಕೂಡ ಜನವರಿಯಲ್ಲಿ ಬಿಸಿಸಿಐ ಭೇಟಿ ಮಾಡಿ ಹಗಲು-ರಾತ್ರಿ​ ಟೆಸ್ಟ್​ ಆಡಲು ಕೇಳಿಕೊಂಡಿದ್ದರು. ಆಸ್ಟ್ರೇಲಿಯಾ ತನ್ನ ತವರಿನಲ್ಲಿ 6 ಅಹರ್ನಿಶಿ ಪಂದ್ಯಗಳನ್ನಾಡಿದ್ದು, ಆರರಲ್ಲೂ ಗೆಲುವು ಸಾಧಿಸಿದೆ.

Last Updated : Feb 16, 2020, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.