ETV Bharat / sports

ಐಪಿಎಲ್​ನ ಭಾಗವಾಗುದು ನನಗೆ ಹೆಮ್ಮೆ : ಕೇನ್​ ವಿಲಿಯಮ್ಸನ್​ - IPL in UAE

ಐಪಿಎಲ್​ನಲ್ಲಿ ಆಡುವುದು ಯಾವಾಗಲೂ ಅದ್ಭುತವೆನಿಸುತ್ತದೆ. ಖಂಡಿತವಾಗಿಯೂ ಅದೊಂದು ಮಹತ್ವದ ಟೂರ್ನಿ. ಅದರಲ್ಲಿ ಆಡುವುದಕ್ಕೆ ಹಾಗೂ ಅದರ ಒಂದು ಭಾಗವಾಗುವುದು ಉತ್ತಮವೆನಿಸುತ್ತದೆ..

ಕೇನ್​ ವಿಲಿಯಮ್ಸನ್​
ಕೇನ್​ ವಿಲಿಯಮ್ಸನ್​
author img

By

Published : Jul 22, 2020, 4:15 PM IST

ಮೌಂಟ್​ ಮೌಂಗನುಯ್​ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಆಡುವುದಕ್ಕೆ ಹೆಮ್ಮೆಯನ್ನಿಸುತ್ತದೆ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬುಧವಾರ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ಗಣನೀಯವಾಗಿ ತಡೆಯುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದ್ದರಿಂದ ವಿಲಿಯಮ್ಸನ್ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ಮತ್ತೆ ತರಬೇತಿ ಪ್ರಾರಂಭಿಸಿದ್ದಾರೆ. ಇವರಷ್ಟೇ ಅಲ್ಲ, ಬಹುಪಾಲು ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಈಗಾಗಲೇ ತರಬೇತಿ ಆರಂಭಿಸಿದ್ದಾರೆ.

ಐಪಿಎಲ್​ನಲ್ಲಿ ಆಡುವುದು ಯಾವಾಗಲೂ ಅದ್ಭುತವೆನಿಸುತ್ತದೆ. ಖಂಡಿತವಾಗಿಯೂ ಅದೊಂದು ಮಹತ್ವದ ಟೂರ್ನಿ. ಅದರಲ್ಲಿ ಆಡುವುದಕ್ಕೆ ಹಾಗೂ ಅದರ ಒಂದು ಭಾಗವಾಗುವುದು ಉತ್ತಮವೆನಿಸುತ್ತದೆ ಎಂದಿದ್ದಾರೆ. ಎರಡು ದಿನಗಳ ಹಿಂದೆ ಟಿ20 ವಿಶ್ವಕಪ್​ ಮುಂದೂಡಲಾಗಿದೆ.

ಇನ್ನು, ಟೂರ್ನಿ ಆಯೋಜನೆ ಮಾಡಲು ಸಾಕಷ್ಟು ಸಂಘಟನೆ ಅಗತ್ಯವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಆಟಗಾರರಿಗೂ ಮಾಹಿತಿ ನೀಡುವ ಮೊದಲು ಅವರು ಕೆಲವು ಯೋಜನೆಗಳ ಬಗ್ಗೆ ಖಚಿತಪಡಿಸಿಕೊಳ್ಳಲು ಬಯಸಿರಬಹುದು ಎಂದು ಸನ್​ ರೈಸರ್ಸ್​ ಹೈದರಾಬಾದ್​ ಮಾಜಿ ನಾಯಕ ವಿಲಿಯಮ್ಸನ್​ ಹೇಳಿದ್ದಾರೆ.

ಐಪಿಎಲ್​ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಯುಎಇಯಲ್ಲಿ ಟೂರ್ನಿ ನಡೆಯುತ್ತದೆ ಎಂಬುದನ್ನು ಈಗಾಗಲೇ ಖಚಿತಪಡಿಸಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಲಿಯಮ್ಸನ್​ 41 ಐಪಿಎಲ್​ ಪಂದ್ಯಗಳನ್ನಾಡಿದ್ದಾರೆ. 38.29ರ ಸರಾಸರಿಯಲ್ಲಿ1302ರನ್​ ಗಳಿಸಿದ್ದಾರೆ. 2018ರಲ್ಲಿ ವಾರ್ನರ್​ ಅನುಪಸ್ಥಿತಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.