ETV Bharat / sports

ವಿಶ್ವಕಪ್​​ಗೆ ರಿಷಭ್​ ಕನ್ಫರ್ಮ್​ ಎಂದಿದ್ದ ಬಿಸಿಸಿಐ, ಅದೊಂದೇ ಕಾರಣದಿಂದ ಉಲ್ಟಾ ಹೊಡೆಯಿತಾ!?

ವಿಶ್ವಕಪ್​​ನಿಂದ ರಿಷಭ್​ ಪಂತ್​​ ಹೊರಗುಳಿದಿದ್ದಕ್ಕೆ ಅನೇಕ ಟೀಕೆಗಳು ಕೇಳಿ ಬಂದಿದ್ದು, ಈ ಹಿಂದೆ ವಿಶ್ವಕಪ್​​ನಲ್ಲಿ ರಿಷಭ್​ ಆಡಲಿದ್ದಾರೆ ಎಂದು ಹೇಳಿದ್ದ ಆಯ್ಕೆ ಸಮಿತಿ, ಇದೀಗ ಈ ರೀತಿಯ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.

ರಿಷಭ್​ ಪಂತ್​
author img

By

Published : Apr 16, 2019, 11:39 AM IST

ಮುಂಬೈ: ಇಂಗ್ಲೆಂಡ್​​​ನಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ಉದಯೋನ್ಮುಖ ಆಟಗಾರ ರಿಷಭ್​ ಪಂತ್​​ ಆಡುವುದು ಕನ್ಫರ್ಮ್​ ಎಂದಿದ್ದ ಆಯ್ಕೆ ಸಮಿತಿ,ಇದೀಗ ದಿಢೀರನೇ ಉಲ್ಟಾ ಹೊಡೆಯಲು ಅದೊಂದೇ ವಿಷಯ ಕಾರಣವಾಯ್ತಾ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದೆ.

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂತ್​, ತದನಂತರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈ ವೇಳೆ, ಖುದ್ದಾಗಿ ಸ್ಪಷ್ಟನೆ ನೀಡಿದ್ದ ಎಂಎಸ್​ಕೆ ಪ್ರಸಾದ್​, ರಿಷಭ್​ ಪಂತ್​ ಖಂಡಿತವಾಗಿ 2019ರ ವಿಶ್ವಕಪ್​ನ ನಮ್ಮ ಯೋಜನೆಯ ತಂಡದ ಭಾಗವಾಗಿದ್ದು,ಅವರಿಗೆ ವಿಶ್ರಾಂತಿ ಅಗತ್ಯವಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದರು.

ಇನ್ನು ಅವರ ಪರ ಅನೇಕ ಕ್ರಿಕೆಟ್​ ದಿಗ್ಗಜರು ಸಹ ಬ್ಯಾಟ್​ ಮಾಡಿ, ರಿಷಭ್​ ಪಂತ್​ ವಿಶ್ವಕಪ್​​ನಲ್ಲಿ ಆಡಬೇಕು ಎಂದಿದ್ದರು. ಆದರೆ ಇದೀಗ ಅವರ ಜಾಗಕ್ಕೆ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್​ಗೆ ಅವಕಾಶ ನೀಡಿ, ರಿಷಭ್​ಗೆ ಕೈಬಿಡಲಾಗಿದೆ. ಇದು ಅನೇಕ ಟೀಕೆಗಳಿಗೆ ಕಾರಣವಾಗಿದೆ.

ಕೈಬಿಡಲು ಈ ವಿಷಯ ಕಾರಣವಾಯ್ತಾ!?
ನಿನ್ನೆ ತಂಡದ ಆಯ್ಕೆ ನಂತರ ಮಾತನಾಡಿರುವ ಎಂಎಸ್​ಕೆ, ವಿಶ್ವಕಪ್​​​ನಲ್ಲಿ ಧೋನಿ ಗಾಯಗೊಂಡರೆ ಮಾತ್ರ ದ್ವಿತೀಯ ವಿಕೆಟ್ ಕೀಪರ್ ಆಡಲಿದ್ದಾರೆ. ಈ ವೇಳೆ ವಿಕೆಟ್​​ ಕೀಪಿಂಗ್​​ ಮಹತ್ವ ಪಡೆದುಕೊಳ್ಳುವ ಕಾರಣ, ಒಂದು ವೇಳೆ ತಂಡ ಕ್ವಾರ್ಟರ್​ ಅಥವಾ ಸೆಮಿಫೈನಲ್​​ನಲ್ಲಿ ಆಡುತ್ತಿದ್ದರೆ ತಂಡಕ್ಕೆ ವಿಕೆಟ್​ ಕೀಪಿಂಗ್​ ಬಹಳ ಅವಶ್ಯಕತೆ ಇದೆ. ಅನುಭವದ ಆಧಾರದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಅವರಿಗೆ ಮಹತ್ವದ ಪಂದ್ಯಗಳಲ್ಲಿ ಆಡಿದ ಅನುಭವವಿದೆ ಎಂದಿರುವ ಅವರು, ರಿಷಭ್​ ಬಳಿ ಕೂಡ ಉತ್ತಮ ಸಾಮರ್ಥ್ಯವಿದೆ ಎಂದಿದ್ದಾರೆ. ಆಯ್ಕೆ ಸಮಿತಿ ಈ ನಿರ್ಧಾರದಿಂದ ಸುನಿಲ್​ ಗವಾಸ್ಕರ್​ ಸೇರಿದಂತೆ ಅನೇಕ ಕ್ರಿಕೆಟ್​ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಂಎಸ್​ಕೆ ಹೇಳುವ ಪ್ರಕಾರ, ರಿಷಭ್​ ಪಂತ್​ ಇನ್ನು ವಿಕೆಟ್​ ಕೀಪಿಂಗ್​ನಲ್ಲಿ ಬಹಳಷ್ಟು ಕಲಿಯಬೇಕಾಗಿರುವ ಕಾರಣ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅವರ ಮಾತಿನ ಮರ್ಮವಾಗಿದೆ.

ಇನ್ನು ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ರಿಷಭ್​ ಪಂತ್​, ದಿನೇಶ್​ ಕಾರ್ತಿಕ್​ಗಿಂತಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಪಂತ್​ 245ರನ್​ಗಳಿಕೆ ಮಾಡಿದ್ದರೆ, ಕಾರ್ತಿಕ್​​ 111ರನ್​ ಗಳಿಕೆ ಮಾಡಿದ್ದಾರೆ.

Intro:Body:

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂತ್​, ತದನಂತರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈ ವೇಳೆ ಖುದ್ದಾಗಿ ಸ್ಪಷ್ಟನೆ ನೀಡಿದ್ದ ಎಂಎಸ್​ಕೆ ಪ್ರಸಾದ್​, ರಿಷಭ್​ ಪಂತ್​ ಖಂಡಿತವಾಗಿ 2019ರ ವಿಶ್ವಕಪ್​ನ ನಮ್ಮ ಯೋಜನೆಯ ತಂಡದ ಭಾಗವಾಗಿದ್ದು,ಅವರಿಗೆ ವಿಶ್ರಾಂತಿ ಅಗತ್ಯವಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದರು. 

ಇನ್ನು ಅವರ ಪರ ಅನೇಕ ಕ್ರಿಕೆಟ್​ ದಿಗ್ಗಜರು ಸಹ ಬ್ಯಾಟ್​ ಮಾಡಿ, ರಿಷಭ್​ ಪಂತ್​ ವಿಶ್ವಕಪ್​​ನಲ್ಲಿ ಆಡಬೇಕು ಎಂದಿದ್ದರು. ಆದರೆ ಇದೀಗ ಅವರ ಜಾಗಕ್ಕೆ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್​ಗೆ ಅವಕಾಶ ನೀಡಿ, ರಿಷಭ್​ಗೆ ಕೈಬಿಡಲಾಗಿದೆ. 

ಕೈಬಿಡಲು ಈ ವಿಷಯ ಕಾರಣವಾಯ್ತಾ!?

ನಿನ್ನೆ ತಂಡದ ಆಯ್ಕೆ ನಂತರ ಮಾತನಾಡಿರುವ ಎಂಎಸ್​ಕೆ, ವಿಶ್ವಕಪ್​​​ನಲ್ಲಿ ಧೋನಿ ಗಾಯಗೊಂಡರೆ ಮಾತ್ರ ದ್ವಿತೀಯ ವಿಕೆಟ್ ಕೀಪರ್ ಆಡಲಿದ್ದಾರೆ. ಈ ವೇಳೆ ವಿಕೆಟ್​​ ಕೀಪಿಂಗ್​​ ಮಹತ್ವ ಪಡೆದುಕೊಳ್ಳುವ ಕಾರಣ, ಒಂದು ವೇಳೆ ತಂಡ ಕ್ವಾರ್ಟರ್​ ಅಥವಾ ಸೆಮಿಫೈನಲ್​​ನಲ್ಲಿ ಆಡುತ್ತಿದ್ದರೆ ತಂಡಕ್ಕೆ ವಿಕೆಟ್​ ಕೀಪಿಂಗ್​ ಬಹಳ ಅವಶ್ಯಕತೆ ಇದೆ. ಅನುಭವದ ಆಧಾರದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಅವರಿಗೆ ಮಹತ್ವದ ಪಂದ್ಯಗಳಲ್ಲಿ ಆಡಿದ ಅನುಭವವಿದೆ ಎಂದಿರುವ ಅವರು, ರಿಷಭ್​ ಬಳಿ ಕೂಡ ಉತ್ತಮ ಸಾಮರ್ಥ್ಯವಿದೆ ಎಂದಿದ್ದಾರೆ.ಆಯ್ಕೆ ಸಮಿತಿ ಈ ನಿರ್ಧಾರದಿಂದ ಸುನಿಲ್​ ಗವಾಸ್ಕರ್​ ಸೇರಿದಂತೆ ಅನೇಕ ಕ್ರಿಕೆಟ್​ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಂಎಸ್​ಕೆ ಹೇಳುವ ಪ್ರಕಾರ, ರಿಷಭ್​ ಪಂತ್​ ಇನ್ನು ವಿಕೆಟ್​ ಕೀಪಿಂಗ್​ನಲ್ಲಿ ಬಹಳಷ್ಟು ಕಲೆಯಬೇಕಾಗಿರುವ ಕಾರಣ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅವರ ಮಾತಿನ ಮರ್ಮವಾಗಿದೆ. 

ಇನ್ನು ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ರಿಷಭ್​ ಪಂತ್​, ದಿನೇಶ್​ ಕಾರ್ತಿಕ್​ಗಿಂತಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಪಂತ್​ 245ರನ್​ಗಳಿಕೆ ಮಾಡಿದ್ದರೆ, ಕಾರ್ತಿಕ್​​ 111ರನ್​ ಗಳಿಕೆ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.