ಮ್ಯಾಚೆಂಸ್ಟರ್: ವಿಶ್ವಕಪ್ ಕ್ರಿಕೆಟ್ ಫೈನಲ್ ಹಂತಕ್ಕೆ ಬಂದು ನಿಂತಿದ್ದು, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಭಾನುವಾರ ಪ್ರತಿಷ್ಟಿತ ಪ್ರಶಸ್ತಿಗಾಗಿ ಫೈಟ್ ಮಾಡಲಿವೆ.
ಟೂರ್ನಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿರುವ ಭವಿಷ್ಯವೊಂದು ನಿಜವಾಗ್ತಿರುವ ಹಾಗೆ ಕಾಣಿಸುತ್ತಿದೆ. ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಯಾವ ತಂಡ ಟೀಂ ಇಂಡಿಯಾ ಸೋಲಿಸುತ್ತದೆಯೋ ಅದೇ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬ ಭವಿಷ್ಯ ನುಡಿದಿದ್ದರು.
ಅವರು ಹೇಳಿರುವ ಪ್ರಕಾರ ಲೀಗ್ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿದ್ದು, ಇದೀಗ ಫೈನಲ್ಗೆ ಲಗ್ಗೆ ಹಾಕಿದೆ. ನಿನ್ನೆ ನ್ಯೂಜಿಲ್ಯಾಂಡ್ ತಂಡ ಕೂಡ ಭಾರತವನ್ನು 18 ರನ್ಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾರತವನ್ನು ಸೋಲಿಸಿರುವ ತಂಡವೇ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲಿದೆ ಎಂಬುದು ಗಮನಾರ್ಹ.
-
🏆 'Whoever beats India will win the World Cup'
— BBC 5 Live Sport (@5liveSport) June 19, 2019 " class="align-text-top noRightClick twitterSection" data="
🗣️ @MichaelVaughan has had his say on @englandcricket's chances of winning the #CWC19
Listen to the full @bbctms podcast 👇
🏏📲: https://t.co/OomkQWQ3w0#bbccricket pic.twitter.com/WMxQt0bM6G
">🏆 'Whoever beats India will win the World Cup'
— BBC 5 Live Sport (@5liveSport) June 19, 2019
🗣️ @MichaelVaughan has had his say on @englandcricket's chances of winning the #CWC19
Listen to the full @bbctms podcast 👇
🏏📲: https://t.co/OomkQWQ3w0#bbccricket pic.twitter.com/WMxQt0bM6G🏆 'Whoever beats India will win the World Cup'
— BBC 5 Live Sport (@5liveSport) June 19, 2019
🗣️ @MichaelVaughan has had his say on @englandcricket's chances of winning the #CWC19
Listen to the full @bbctms podcast 👇
🏏📲: https://t.co/OomkQWQ3w0#bbccricket pic.twitter.com/WMxQt0bM6G
ಇನ್ನು ಬರೋಬ್ಬರಿ 27 ವರ್ಷದ ಬಳಿಕ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು, 1992ರಲ್ಲಿ ಅದು ಪಾಕಿಸ್ತಾನ ವಿರುದ್ಧ ಸೋತ ಬಳಿಕ ಫೈನಲ್ ಪ್ರವೇಶ ಪಡೆದುಕೊಂಡಿಲ್ಲ. ಅದಕ್ಕೂ ಮುಂಚಿತವಾಗಿ 1979 ಹಾಗೂ 1987ರಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿತು.