ಬ್ರಿಸ್ಬೇನ್: ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯಗಳಿಸಿದ ನಂತರ ಭಾರತವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಫೈನಲ್ ಹಂತಕ್ಕೆ ಸಮೀಪಿಸುತ್ತಿದೆ.
ನ್ಯೂಜಿಲ್ಯಾಂಡ್ ತಂಡ ಶೇಕಡಾ 70 ರಷ್ಟು ಗೆಲುವಿನ ಸರಾಸರಿ ಹೊಂದಿದ್ದು, 420 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ ಶೇಕಡಾ 69.2 ರಷ್ಟು ಗೆಲುವಿನ ಸರಾಸರಿ ಹೊಂದಿದ್ದು, 332 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಜೂನ್‌ನಲ್ಲಿ ಇಂಗ್ಲೆಂಡ್ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯಕ್ಕೆ ಅಗ್ರ ಎರಡು ತಂಡಗಳು ಅರ್ಹತೆ ಪಡೆಯಲಿವೆ.
ಭಾರತವು ಈಗ ಶೇಕಡಾ 71.7 ರಷ್ಟು ಗೆಲುವಿನ ಸರಾಸರಿ ಹೊಂದಿದ್ದು, 430 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೋವಿಡ್ -19 ಕಾರಣದಿಂದಾಗಿ ಪಾಯಿಂಟ್ ವ್ಯವಸ್ಥೆಯಲ್ಲಿನ ಬದಲಾವಣೆಯ ನಂತರ ಗೆದ್ದ ಒಟ್ಟು ಅಂಕಗಳಿಗಿಂತ ಶೇಕಡಾವಾರು ಅಂಕಗಳು ಅಂತಿಮ ಸ್ಥಾನಗಳನ್ನು ನಿರ್ಧರಿಸುತ್ತವೆ.
ಫೈನಲ್ ಹಂತಕ್ಕೇರಲು ಫೆಬ್ರವರಿ 5 ರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲಬೇಕಾಗಿದೆ. ಆಂಗ್ಲರ ವಿರುದ್ಧ 2-0 ಅಂತರದಿಂದ ಸರಣಿ ಗೆದ್ದರೆ ಭಾರತದ ಫೈನಲ್ ಹಾದಿ ಸುಗಮವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯ ಸೋತರೆ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.
ಇತ್ತ ನ್ಯೂಜಿಲ್ಯಾಂಡ್ಗೆ ಜೂನ್ ವರೆಗೆ ಯಾವುದೇ ಸರಣಿ ನಿಗದಿಯಾಗಿಲ್ಲ. ಆದರೆ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡುವ ಸಾಧ್ಯತೆ ಇದ್ದು ಇಲ್ಲಿಯವರೆಗೂ ದೃಢವಾಗಿಲ್ಲ. ಒಂದು ವೇಳೆ ಹರಿಣಗಳ ವಿರುದ್ಧ ಟೆಸ್ಟ್ ಸರಣಿ ಆಡುವುದು ಕನ್ಫರ್ಮ್ ಆದ್ರೆ, ಕಾಂಗರೂಗಳು ಆ ಸರಣಿಯನ್ನು ಗೆಲ್ಲಬೇಕಿದೆ. ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲು ಆಸ್ಟ್ರೇಲಿಯಾಕ್ಕೆ 89 ಅಂಕಗಳ ಅಗತ್ಯವಿದೆ. ಹೀಗಾಗಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು, ಮೂರನೆಯದನ್ನು ಡ್ರಾ ಮಾಡಿದರೆ ಮಾತ್ರ ಅದು 93 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೇರಲಿದ್ದಾರೆ.
ಟಿಮ್ ಪೇನ್ ನೇತೃತ್ವದ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2-0 ಅಂತರದಿಂದ ಗೆಲ್ಲುತ್ತಾರೆ ಅಥವಾ ಭಾರತ, ಇಂಗ್ಲೆಂಡ್ ವಿರುದ್ಧ ಕೆಲವು ಅಂಕಗಳನ್ನು ಕಳೆದುಕೊಂಡರೆ. ಶುಕ್ರವಾರದಿಂದ ಆರಂಭವಾಗುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆಂಗ್ಲರು ಗೆಲ್ಲಬೇಕು, ನಂತರ ಭಾರತದ ವಿರುದ್ಧ 3-0ದಿಂದ ಸರಣಿ ಗೆಲ್ಲಬೇಕು. 2-2 ರಿಂದ ಸರಣಿಯಲ್ಲಿ ಡ್ರಾ ಸಾಧಿಸಿದ್ರೂ ಇಂಗ್ಲೆಂಡ್‌ಗೆ ಭಾರತವನ್ನು ಹಿಂದಿಕ್ಕಿ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಗಳಿಸಲು ಸಾಕಾಗುವುದಿಲ್ಲ.