ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಪೊಲಾರ್ಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕೆಲವು ಮಹತ್ತರ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರನ್ನು ಹೊರಗಿಟ್ಟು ಶಿವಂ ದುಬೆಗೆ ಅವಕಾಶ ನೀಡಿದೆ. ಕುಲ್ದೀಪ್ ಯಾದವ್ ಹಾಗೂ ಜಡೇಜಾ ತಂಡದ ಪ್ರಮುಖ ಸ್ಪಿನ್ನರ್ಗಳಾಗಿ ಅವಕಾಶಗಿಟ್ಟಿಸಿಕೊಂಡಿದ್ದಾರೆ. ದೀಪಕ್ ಚಹಾರ್ ಕೂಡ ಏಕದಿನ ಕ್ರಿಕೆಟ್ಗೆ ಮರಳಿದ್ದು ಮೊಹಮ್ಮದ್ ಶಮಿ ಜೊತೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ಕೇದಾರ್ ಜಾದವ್ ಹಾಗೂ ಶಿವಂ ದುಬೆ ಇದ್ದಾರೆ.
ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ರೋಹಿತ್ ಶರ್ಮಾರೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಕೊಹ್ಲಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
-
West Indies have won the toss and will bowl first in the 1st ODI. #INDvWI #TeamIndia pic.twitter.com/TE8GKqy4T4
— BCCI (@BCCI) December 15, 2019 " class="align-text-top noRightClick twitterSection" data="
">West Indies have won the toss and will bowl first in the 1st ODI. #INDvWI #TeamIndia pic.twitter.com/TE8GKqy4T4
— BCCI (@BCCI) December 15, 2019West Indies have won the toss and will bowl first in the 1st ODI. #INDvWI #TeamIndia pic.twitter.com/TE8GKqy4T4
— BCCI (@BCCI) December 15, 2019
ವಿಂಡೀಸ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಇವಿನ್ ಲೆವಿಸ್ ಗಾಯಕ್ಕೊಳಗಾಗಿರುವುದರಿಂದ ಸುನಿಲ್ ಆ್ಯಂಬ್ರಿಸ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉ.ನಾ) ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ, ಕೆದಾರ್ ಜಾದವ್,ರವೀಂದ್ರ ಜಡೇಜಾ, ಕುಲ್ದೀಪ್ ಚಹಲ್, ದೀಪಕ್ ಚಹಾರ್, ಮೊಹಮ್ಮದ್ ಶಮಿ
ವೆಸ್ಟ್ ಇಂಡೀಸ್: ಶಾಯ್ ಹೋಪ್, ಸುನಿಲ್ ಆ್ಯಂಬ್ರಿಸ್, ಶಿಮ್ರಾನ್ ಹೆಟ್ಮಯರ್,ರಾಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಹೇಡನ್ ವಾಲ್ಶ್, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಪ್, ಕೀಮೋ ಪಾಲ್.