ETV Bharat / sports

ಹೊಗಳಿಕೆ-ತೆಗಳಿಕೆಗಳನ್ನು ಗಂಭೀರವಾಗಿ ಪರಿಗಣಿಸಲ್ಲ: ಬುಮ್ರಾ

ಏಕದಿನ ಕ್ರಿಕೆಟ್​ನ ನಂಬರ್​ ಒನ್​ ಬೌಲರ್​ ಆಗಿರುವ ಭಾರತ ತಂಡದ ಯಾರ್ಕರ್​ ಕಿಂಗ್​ ಬುಮ್ರಾ ತಮ್ಮ ಪ್ರದರ್ಶನದ ಬಗ್ಗೆ ಬೇರೊಬ್ಬರು ನೀಡುವ ಹೊಗಳಿಕೆ ಹಾಗೂ ತೆಗಳಿಕೆಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

author img

By

Published : Jul 7, 2019, 8:11 PM IST

ಬುಮ್​

ಲೀಡ್ಸ್​: ಏಕದಿನ ಕ್ರಿಕೆಟ್​ನ ನಂಬರ್​ ಒನ್​ ಬೌಲರ್​ ಆಗಿರುವ ಭಾರತ ತಂಡದ ಯಾರ್ಕರ್​ ಕಿಂಗ್​ ಬುಮ್ರಾ ತಮ್ಮ ಪ್ರದರ್ಶನದ ಬಗ್ಗೆ ಬೇರೊಬ್ಬರು ನೀಡುವ ಹೊಗಳಿಕೆ ಹಾಗೂ ತೆಗಳಿಕೆಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್​ ಕೊನೆಯ ಲೀಗ್ ಪಂದ್ಯದಲ್ಲಿ 3 ವಿಕೆಟ್​ ಪಡೆಯುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 100 ವಿಕೆಟ್​ ಪಡೆದ ದಾಖಲೆಗೆ ಪಾತ್ರರಾದ ಬುಮ್ರಾ "ತಮ್ಮ ಪ್ರದರ್ಶನವನ್ನು ಕುರಿತು ಇತರರು ನೀಡುವ ಹೊಗಳಿಕೆ ಅಥವಾ ತೆಗೆಗಳಿಕೆಗಾಗಲಿ ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ತಂಡಕ್ಕೆ ಒಳಿತಾಗುವುದರ ಕಡೆ ಮಾತ್ರ ಗಮನ ಹರಿಸುತ್ತೇನೆಂದು" ಎಂದಿದ್ದಾರೆ.

ಜಸ್ಪ್ರೀತ್​ ಬುಮ್ರಾ

ತಂಡದ ಇತರೆ ಬೌಲರ್​ಗಳಾದ ಪಾಂಡ್ಯ, ಶಮಿ ಜೊತೆಗೆ ತಾವು ಸ್ಪರ್ಧೆಯಲ್ಲಿದ್ದು, ಯಾರೇ ಆದರೂ ವಿಕೆಟ್​ ಪಡೆದರೆ ನಾವೂ ಧನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಅವರನ್ನು ನಾನು, ನನ್ನನ್ನು ಅವರು ಬೆಂಬಲಿಸುವುದು ಸಾಮಾನ್ಯವಾಗಿದೆ. ಒಟ್ಟಿನಲ್ಲಿ ನಾವೆಲ್ಲರು ತಂಡಕ್ಕೆ ನಮ್ಮ ಕೈಯಲ್ಲಿ ಏನಾಗುವುದೋ ಅದನ್ನು ಶೇ. 100ರಷ್ಟು ನೀಡುತ್ತೇವೆ. ನಾವಷ್ಟೇ ಅಲ್ಲದೆ, ಇಡೀ ಟೂರ್ನಿಯಲ್ಲಿ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಡೀ ಟೂರ್ನಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿರುವುದು ಸಂತೋಷ ತಂದಿದೆ ಎಂದು ಬುಮ್ರಾ ಹೇಳಿದ್ದಾರೆ.

ಇನ್ನು ಬೌಲಿಂಗ್​ ವಿಭಾದಲ್ಲಿ ತೀವ್ರ ಸ್ಪರ್ಧೆ ಏರ್ಪಡುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, ತಂಡದಲ್ಲಿ ಒಂದು ಬೌಲಿಂಗ್​ ಸ್ಥಾನಕ್ಕೆ ಪ್ರಬಲ ಪೈಪೋಟಿಯಿದೆ. ಎಲ್ಲಾ ಬೌಲರ್​ಗಳೂ ಉತ್ತಮ ಪ್ರದರ್ಶನ ನೀಡಿದಾಗ ಆಯ್ಕೆಯಲ್ಲಿ ಇಂತಹ ತಲೆನೋವುಗಳು ಬರುವುದುಂಟು. ಅದರಲ್ಲೂ ಸೆಮಿಫೈನಲ್​ನಲ್ಲಿ ಆಯ್ಕೆಯ ಸಮಸ್ಯೆ ತೀವ್ರವಾಗಬಹುದು. ಆದರೆ ಆಯ್ಕೆಯಾದ ಬೌಲರ್​ಗಳು ತಂಡದ ಯಶಸ್ಸಿಗೆ ಯಾವುದೇ ರೀತಿಯ ಸವಾಲು ಹಾಗೂ ಜವಾಬ್ದಾರಿ ಪಡೆಯಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.