ದುಬೈ: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಮಾಹಿತಿ ಹೊರಹಾಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 10 ವರ್ಷಗಳ ಕಾಲ ಮೂರು ಫ್ರಾಂಚೈಸಿಗಳಲ್ಲಿ ವ್ಯಾಟ್ಸನ್ ಆಡಿದ್ದು, 2008ರಲ್ಲಿ ಆರ್ಆರ್ ಹಾಗೂ 2018ರಲ್ಲಿ ಸಿಎಸ್ಕೆ ಟ್ರೋಫಿ ಗೆದ್ದಾಗ ಆ ತಂಡಗಳ ಭಾಗವಾಗಿದ್ದರು.
ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶೇನ್ ವ್ಯಾಟ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವುದಿಲ್ಲ ಎಂದು ಸಿಎಸ್ಕೆ ತಿಳಿಸಿದ್ದು, ಈ ಮೂಲಕ ಅವರು ನಿವೃತ್ತಿ ಪಡೆದುಕೊಳ್ಳುವುದನ್ನು ಖಚಿತಪಡಿಸಿದೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ವ್ಯಾಟ್ಸನ್ ಅವರಿಂದ ಮೂಡಿ ಬಂದಿಲ್ಲ. ಅಕ್ಟೋಬರ್ 29ರಂದು ಕೆಕೆಆರ್ ವಿರುದ್ಧ ಇವರು ಕೊನೆಯ ಪಂದ್ಯವನ್ನಾಡಿದ್ದರು.
ಈ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನಾಡಿರುವ ವ್ಯಾಟ್ಸನ್ ಎರಡು ಅರ್ಧಶತಕ ಸೇರಿದಂತೆ 299 ರನ್ ಗಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಸ್ಕೆ ತಂಡದ ಮ್ಯಾನೇಜ್ಮೆಂಟ್, ಈಗಾಗಲೇ ಡ್ರೆಸ್ಸಿಂಗ್ ರೂಂನಲ್ಲಿ ವ್ಯಾಟ್ಸನ್ ಇದರ ಬಗ್ಗೆ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾಗೆ ಹೋದ ತಕ್ಷಣ ನಿವೃತ್ತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದಿದೆ.