ಹೈದರಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಮೂರು ವರ್ಷ ಕಳೆದಿದೆ. ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಫೋಟೋ ಹಂಚಿಕೊಂಡಿರುವ ವಿರಾಟ್, "3 ವರ್ಷ ಜೊತೆಯಾಗಿ ಕಳೆದಿದ್ದೇವೆ. ಬದುಕಿನುದ್ದಕ್ಕೂ ಜೊತೆಯಾಗಿರಲಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದು, "ನಾವು ಜೊತೆಯಾಗಿ 3 ವರ್ಷ ಕಳೆದಿದ್ದು, ಶೀಘ್ರದಲ್ಲೇ ನಾವು ಮೂವರಾಗಲಿದ್ದೇವೆ" ಎಂದಿದ್ದಾರೆ.
ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್, ಏಕದಿನ ಸರಣಿ ಸೋಲಿನ ಬಳಿಕ ಟಿ-20 ಸರಣಿ ಗೆದ್ದಿದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ವಿರಾಟ್, ಅಡಿಲೇಡ್ ಟೆಸ್ಟ್ ನಂತರ ತವರಿಗೆ ವಾಪಸ್ ಆಗಲಿದ್ದಾರೆ.
2017ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದ ಈ ಜೋಡಿ, ಭಾರತದಲ್ಲಿ ಅದ್ಧೂರಿಯಾಗಿ ಅರತಕ್ಷತೆ ನಡೆಸಿತ್ತು. ಪ್ರಧಾನಿ ಮೋದಿ, ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.