ಅನಂತ್‌ನಾಗ್: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಜಮ್ಮು ಕಾಶ್ಮೀರ ಆಡಳಿತ ಮಂಡಳಿಯ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಡೆಯುತ್ತಿರುವ ‘ಡೂರು ಅಂಡರ್ 19 ಟಿ-20‘ ಟೂರ್ನಮೆಂಟ್ನ ಫೈನಲ್ ಪಂದ್ಯ ನಡೆಯುತ್ತಿರುವ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟಿಗ ಸುರೇಶ್ ರೈನಾ ಭೇಟಿ ನೀಡಿ, ಸ್ಥಳೀಯ ಆಟಗಾರರನ್ನು ಹುರಿದುಂಬಿಸಿದರು.
ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಯುವ ಕ್ರಿಕೆಟಿಗರೊಂದಿಗೆ ಕೆಲವು ಸಂತೋಷದಾಯಕ ಕ್ಷಣಗಳನ್ನು ಹಂಚಿಕೊಂಡರು. ಹಾಗೂ ಫೈನಲ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಂಜು ಮತ್ತು ಸಗಮ್ ಅಂಡರ್ 19 ತಂಡಗಳ ಆಟಗಾರರೊಂದಿಗೆ ಸಂವಾದ ನಡೆಸಿದರು. ಫೈನಲ್ ಪಂದ್ಯದಲ್ಲಿ ಅಂಡರ್ ಸಗಮ್ ಅಂಡರ್ 19 ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಟೂರ್ನಿಯ ಸಂಘಟಕರು ಮತ್ತು ಕ್ರಿಕೆಟ್ ಆಟಗಾರರು, ತಮ್ಮ ಪ್ರತಿಭೆ ಪ್ರದರ್ಶಿಸಲು ಅಗತ್ಯವಿರುವ ಎಲ್ಲ ಸೌಲಭ್ಯವುಳ್ಳ ಕ್ರಿಕೆಟ್ ಮೈದಾನವನ್ನು ಉನ್ನತೀಕರಣ ಮತ್ತು ಅಭಿವೃದ್ಧಿಗೊಳಿಸಬೇಕೆಂದು ರೈನಾ ಸಮ್ಮುಖದಲ್ಲಿ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಸಿ ರಮೇಶ್, ಸುರೇಶ್ ರೈನಾ ಅವರು ಸ್ವತಃ ಒಬ್ಬ ಕಾಶ್ಮೀರಿ ಹಾಗೂ ಈ ಮಣ್ಣಿನ ಮಗನಾಗಿದ್ದಾರೆ. ಅವರು ಯೂನಿಯನ್ ಟೆರಿಟೋರಿಯಲ್ಲಿ ಕ್ರಿಕೆಟ್ ಅಭಿವೃದ್ಧಿಗೊಳಿಸಲು ಸಂಪೂರ್ಣ ಬದ್ಧರಾಗಿದ್ದಾರೆ ಎಂದು ಹೇಳಿದರು.
ಟಿಕ್ಬಾಗ್ ಮಟ್ಟನ್ ಮತ್ತು ಡೂರುಗಳಲ್ಲಿ ಕ್ರಿಕೆಟ್ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಕ್ರಿಕೆಟ್ಗಳನ್ನು ಸಹ ನೀಡಲಾಗುವುದು ಎಂದು ಯುವ ಕ್ರಿಕೆಟಿಗರಿಗೆ ಭರವಸೆ ನೀಡಿದರು.
ಈ ಸಂದರ್ಭದದಲ್ಲಿ ರೈನಾ ಅವರೊಂದಿಗೆ ಅನಂತ್ನಾಗ್ನ ಡಿಡಿಸಿ ಕೆ.ಕೆ. ಸಿದ್ಧ, ಎಸ್‌ಎಸ್‌ಪಿ ಸಂದೀಪ್ ಚೌಧರಿ, ಡಿವೈಎಸ್‌ಎಸ್‌ಒ ಮತ್ತು ಜಿಲ್ಲಾಡಳಿತದ ಇತರ ಅಧಿಕಾರಿಗಳು ಹಾಗೂ ಅನೇಕ ಯುವ ಕ್ರಿಕೆಟ್ ಉತ್ಸಾಹಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ಈ ಕ್ರಿಕೆಟ್ ಪಂದ್ಯಾವಳಿಯ ಸಂಘಟಕರು ಉಪಸ್ಥಿತರಿದ್ದರು.