ಮುಂಬೈ: ಭಾರತ ತಂಡದ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕೊರೊನಾ ಲಾಕ್ಡೌನ್ ಹಿನ್ನೆಲೆ ಮನೆಯಲ್ಲಿ ಕಾಲಕಳೆಯುತ್ತಿದ್ದರೂ ಸಾಮಾಜಿಕ ಜಾಲಾತಾಣದಲ್ಲಿ ತಮ್ಮಲ್ಲಿರುವ ಮ್ಯಾಜಿಕ್ ಟ್ಯಾಲೆಂಟ್ ಅನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿ ಕೊಟ್ಟಿದ್ದಾರೆ.
ಭಾರತ ತಂಡದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಖಾಯಂ ಸದಸ್ಯನಾಗಿರುವ ಶ್ರೇಯಸ್ ಕೆಲವು ದಿನಗಳ ಹಿಂದೆ ಇಸ್ಪೀಟ್ ಕಾರ್ಡ್ ಬಳಸಿ ಮ್ಯಾಜಿಕ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದರು. ಇದೀಗ ವಿಭಿನ್ನ ರೀತಿಯಲ್ಲಿ ವಿಡಿಯೋವೊಂದನ್ನು ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ,ಇದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
-
Batting practice done right 🎯 pic.twitter.com/GD5NithMO4
— Shreyas Iyer (@ShreyasIyer15) May 30, 2020 " class="align-text-top noRightClick twitterSection" data="
">Batting practice done right 🎯 pic.twitter.com/GD5NithMO4
— Shreyas Iyer (@ShreyasIyer15) May 30, 2020Batting practice done right 🎯 pic.twitter.com/GD5NithMO4
— Shreyas Iyer (@ShreyasIyer15) May 30, 2020
ಮನೆಯಲ್ಲಿ ಟೆನ್ನಿಸ್ ಬಾಲ್ ಪ್ರಯೋಗಿಸಿ ವಿಡಿಯೋ ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಟೆನ್ನಿಸ್ ಬಾಲ್ಗೆ ಶ್ರೇಯಸ್ ಹೊಡೆದಿದ್ದಾರೆ. ಈ ಚೆಂಡನ್ನು ಅವರ ಮನೆಯ ಗೋಡೆ, ನಾಯಿಗೆ ತಗುಲಿ ನಂತರ ಅವರ ಮನೆಯ ಸದಸ್ಯರನ್ನು ಬಳಸಿಕೊಂಡು , ನಾಲ್ಕೈದು ವಸ್ತುಗಳಿಗೆ ತಗುಲಿ ಡಬ್ಬದಲ್ಲಿ ಹೋಗಿ ಬೀಳುತ್ತದೆ.
-
Trust our in-house magician @ShreyasIyer15 to keep us entertained when we are all indoors 😉👌🎩
— BCCI (@BCCI) March 21, 2020 " class="align-text-top noRightClick twitterSection" data="
Thanks for bringing smiles champ! #TeamIndia 😎 pic.twitter.com/wqusOQm68D
">Trust our in-house magician @ShreyasIyer15 to keep us entertained when we are all indoors 😉👌🎩
— BCCI (@BCCI) March 21, 2020
Thanks for bringing smiles champ! #TeamIndia 😎 pic.twitter.com/wqusOQm68DTrust our in-house magician @ShreyasIyer15 to keep us entertained when we are all indoors 😉👌🎩
— BCCI (@BCCI) March 21, 2020
Thanks for bringing smiles champ! #TeamIndia 😎 pic.twitter.com/wqusOQm68D
ಈ ವಿಡಿಯೋದಲ್ಲಿ ಇದು ಮ್ಯಾಜಿಕ್ ಅಥವಾ ನಿಜನಾ? ಎಂದು ಪ್ರಶ್ನಿಸಿರುವ ಶ್ರೇಯಸ್, ಬ್ಯಾಟಿಂಗ್ ಅಭ್ಯಾಸ ಮುಗಿಯಿತು, ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸುಮಾರು 25 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ.