ETV Bharat / sports

ಪಿಚ್​ ಬಗ್ಗೆ ನರಳಾಟ ಬಿಡಿ, ನಿಮ್ಮ ಆಟದ ಗುಣಮಟ್ಟ ಹೆಚ್ಚಿಸಿ: ವಿವಿಯನ್ ರಿಚರ್ಡ್ಸ್​

4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇನ್ನೊಂದು ಟೆಸ್ಟ್​ ಪಂದ್ಯ ಬಾಕಿಯುಳಿದಿದ್ದು, ಅಹ್ಮದಾಬಾದ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕೇವಲ 5 ಸೆಷನ್​ಗಳಲ್ಲಿ 30 ವಿಕೆಟ್​ ಉರುಳಿದ್ದವು. ಭಾರತ ತಂಡ 10 ವಿಕೆಟ್​ಗಳಿಂದ ಅಹರ್ನಿಶಿ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಪಂದ್ಯದ ನಂತರ ಪಿಚ್​ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದರು. ಇದಕ್ಕೆ ರಿಚರ್ಡ್ಸ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದಲ್ಲಿ ಯಾವಾಗಲೂ ಸ್ಪಿನ್​ ಬೌಲಿಂಗ್​ ನೆರವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​
ವಿವಿಯನ್ ರಿಚರ್ಡ್ಸ್​
author img

By

Published : Mar 1, 2021, 3:21 PM IST

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ ಪಂದ್ಯ ಎರಡೇ ದಿನಕ್ಕೆ ಮುಗಿದ ನಂತರ ಹಲವಾರು ಮಾಜಿ ಕ್ರಿಕೆಟಿಗರು ಪಿಚ್​ ಬಗ್ಗೆ ವಿಭಿನ್ನ ರೀತಿಯ ಮಾತುಗಳನ್ನಾಡಿದ್ದಾರೆ. ಇದೀಗ ಆ ಚರ್ಚೆಗೆ ವೆಸ್ಟ್​ ಇಂಡೀಸ್ ಮಾಜಿ ಕ್ಯಾಪ್ಟನ್ ವಿವಿಯನ್ ರಿಚರ್ಡ್ಸ್​ ಕೂಡ ಸೇರಿದ್ದು, ಪಿಚ್​ ಪರವಾಗಿ ಮಾತನಾಡಿರುವ ಅವರು ಜನರು ಮಾತನಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇನ್ನೊಂದು ಟೆಸ್ಟ್​ ಪಂದ್ಯ ಬಾಕಿಯುಳಿದಿದ್ದು, ಅಹ್ಮದಾಬಾದ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕೇವಲ 5 ಸೆಷನ್​ಗಳಲ್ಲಿ 30 ವಿಕೆಟ್​ ಉರುಳಿದ್ದವು. ಭಾರತ ತಂಡ 10 ವಿಕೆಟ್​ಗಳಿಂದ ಅಹರ್ನಿಶಿ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಪಂದ್ಯದ ನಂತರ ಪಿಚ್​ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದರು. ಇದಕ್ಕೆ ರಿಚರ್ಡ್ಸ್​​​ ಕಿಡಿ ಕಾರಿದ್ದು, ಭಾರತದಲ್ಲಿ ಯಾವಾಗಲೂ ಸ್ಪಿನ್​ ಬೌಲಿಂಗ್​ ನೆರವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದಿದ್ದಾರೆ.

  • " class="align-text-top noRightClick twitterSection" data="">

"ಭಾರತದಲ್ಲಿ ಆಡಿದ ಟೆಸ್ಟ್ ಪಂದ್ಯದ ಬಗ್ಗೆ ನನಗೆ ಇತ್ತೀಚೆಗೆ ಕೆಲವು ಪ್ರಶ್ನೆಗಳನ್ನು ಕೇಳಲ್ಪಟ್ಟಿದ್ದೇನೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳ ಬಗ್ಗೆ ಕೇಳುತ್ತಿರುವ ಕೆಲವು ಪ್ರಶ್ನೆಗಳ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಾಗಿದ್ದೇನೆ. ಏಕೆಂದರೆ ಅವರು ಆಡುತ್ತಿರುವ ಅಲ್ಲಿನ ಪಿಚ್​ ಬಗ್ಗೆ ಸಾಕಷ್ಟು ನರಳಾಡುತ್ತಿದ್ದಾರೆ. ನನ್ನ ಪ್ರಕಾರ ಪಿಚ್​ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಿರುವವರು ಬಹುಶಃ ಸೀಮಿಂಗ್ ಟ್ರ್ಯಾಕ್ ಪಡೆಯಲು ಬಯಸುತ್ತಿದ್ದಾರೆ. ಅದರ ಬದಲು ಬ್ಯಾಟ್ಸ್​ಮನ್​ಗಳು ಸಹ ಕೆಲವೊಮ್ಮೆ ಎಲ್ಲಾ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಬೇಕು. ಇದರ ಜೊತೆಗೆ ಇಂಗ್ಲೆಂಡ್‌ನ ಮಾಜಿ ಆಟಗಾರರು ನರಳುವಿಕೆಯನ್ನು ನಿಲ್ಲಿಸಿ ಪ್ರವಾಸಿ ತಂಡದ ಆಟಗಾರರ ಆಟದಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು." ಎಂದು ಹೇಳಿದ್ದಾರೆ.

ನಾಲ್ಕನೇ ಪಂದ್ಯ ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ನಡೆಯುತ್ತಿದೆ. ಆದರೆ ನಾನೇನಾದರೂ ಭಾರತ ಅಥವಾ ಪಿಚ್​ ನಿರ್ಣಯಿಸುವ ಅವಕಾಶವಿದ್ದಿದ್ದರೆ ನಾನು ಮೂರನೇ ಪಂದ್ಯದ ಮಾದರಿಯಲ್ಲಿಯೇ ನಾಲ್ಕನೇ ಪಂದ್ಯಕ್ಕೆ ಪಿಚ್ ತಯಾರಿಸಬೇಕು ಎಂದು ಹೇಳುತ್ತಿದ್ದೆ ಎಂದು ರಿಚರ್ಡ್ಸ್ ಸಲಹೆ ನೀಡಿದ್ದಾರೆ.

ಇದನ್ನು ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.