ಬೆಂಗಳೂರು: ಭಾರತದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಭವಿಷ್ಯದ ಸ್ಟಾರ್ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಕಿವೀಸ್ ಪ್ರವಾಸಕ್ಕೂ ಮುನ್ನ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ.
2019ರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಆಗಿರುವ ಮಯಾಂಕ್ ನೂಜಿಲ್ಯಾಂಡ್ ಎ ವಿರುದ್ಧ ನಡೆಯುವ 3 ಏಕದಿನ ಹಾಗೂ 2 ಅನಧಿಕೃತ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಆದೇಶದ ಮೇರೆಗೆ ರಣಜಿ ತಂಡದಿಂದ ಹೊರಬಂದಿರುವ ಮಯಾಂಕ್ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಮೊರೆಹೋಗಿದ್ದಾರೆ. ಬುಧವಾರ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ವಿಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಅಮೇರಿಕಾದ ಖ್ಯಾತ ಕಿಟಾರ್ ವಾದಕ ಫೋರ್ಟ್ ಮಿನರ್ ಅವರ ಟ್ಯೂನ್ ಹಾಕಿಕೊಂಡು ಮಯಾಂಕ್ ಜಿಮ್ನಲ್ಲಿ ಕಾಲ ಕಳೆದಿದ್ದಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳನ್ನು ಕೂಡ ನಿಮ್ಮ ವರ್ಕೌಟ್ ಸಾಂಗ್ ಯಾವುದು? ಎಂದು ಕೇಳಿದ್ದಾರೆ.
-
Working out to the tune of Remember the Name by Fort Minor. 🏋🏻♂
— Mayank Agarwal (@mayankcricket) January 8, 2020 " '="" class="align-text-top noRightClick twitterSection" data="
What’s your favourite workout song? pic.twitter.com/yah9EmiCqE
">Working out to the tune of Remember the Name by Fort Minor. 🏋🏻♂
— Mayank Agarwal (@mayankcricket) January 8, 2020
What’s your favourite workout song? pic.twitter.com/yah9EmiCqEWorking out to the tune of Remember the Name by Fort Minor. 🏋🏻♂
— Mayank Agarwal (@mayankcricket) January 8, 2020
What’s your favourite workout song? pic.twitter.com/yah9EmiCqE
ಟೆಸ್ಟ್ನಲ್ಲಿ ಆರಂಭಿಕನಾಗಿರುವ ಮಯಾಂಕ್ ಕಳೆದ ವಿಂಡೀಸ್ ವಿರುದ್ಧ ಏಕದಿನ ತಂಡಕ್ಕೆ ಗಾಯಾಳು ಧವನ್ ಬದಲು ಆಯ್ಕೆಯಾದರು. ಆದರೆ ಒಂದೂ ಪಂದ್ಯದಲ್ಲೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಇನ್ನು ಕೊಹ್ಲಿ ಬಳಗದ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯನಾಗಿರುವ ಮಯಾಂಕ್ ಇಂಡಿಯಾ ಎ ಟೂರ್ನಿಯ ನಂತರ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡಲಿದ್ದಾರೆ.