ಜೈಪುರ : 2021ರ ಐಪಿಎಲ್ಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಸೋಮವಾರ ನೂತನ ಜರ್ಸಿಯನ್ನ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಲೈವ್ ಶೋ ಮೂಲಕ ಬಿಡುಗಡೆ ಮಾಡಿದೆ.
ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಲೈಟ್ ಶೋ ಮತ್ತು 3ಡಿ ಪ್ರೊಜೆಕ್ಷನ್ ಮೂಲಕ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಮತ್ತು ಮುಂಬೈನಲ್ಲಿ ಬಯೋ ಬಬಲ್ನಲ್ಲಿರುವ ಅರ್ಆರ್ ತಂಡದ ಸದಸ್ಯರಿಗೆ ನೇರಪ್ರಸಾರವಾಯಿತು.
-
Pink. Blue. Royal. 🔥😍
— Rajasthan Royals (@rajasthanroyals) April 4, 2021 " class="align-text-top noRightClick twitterSection" data="
Our #IPL2021 jersey is here.#HallaBol | #RoyalsFamily | #IPL2021 | @redbull pic.twitter.com/UAO1FFo4g3
">Pink. Blue. Royal. 🔥😍
— Rajasthan Royals (@rajasthanroyals) April 4, 2021
Our #IPL2021 jersey is here.#HallaBol | #RoyalsFamily | #IPL2021 | @redbull pic.twitter.com/UAO1FFo4g3Pink. Blue. Royal. 🔥😍
— Rajasthan Royals (@rajasthanroyals) April 4, 2021
Our #IPL2021 jersey is here.#HallaBol | #RoyalsFamily | #IPL2021 | @redbull pic.twitter.com/UAO1FFo4g3
"ಕ್ರೀಡಾಂಗಣ, ಜೈಪುರ ನಗರ, ರಾಜಸ್ಥಾನಿ ಸಂಸ್ಕೃತಿಯ ಬಗ್ಗೆ ರಾಯಲ್ಸ್ ಅಭಿಮಾನಿಗಳು ತಮ್ಮ ಹೃದಯದಲ್ಲಿ ಹೊಂದಿರುವ ಪ್ರೀತಿಗಾಗಿ ಈ ಪ್ರದರ್ಶನ. ಹಾಗೆಯೇ ರೆಡ್ ಬುಲ್‌ನೊಂದಿಗಿನ ಫ್ರ್ಯಾಂಚೈಸಿಯ ಒಡನಾಟ ಮತ್ತು ಅವರು ತ್ವರಿತ ಗತಿಯಲ್ಲಿ ಮುಂದುವರಿಯಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಪ್ರತಿಬಿಂಬವಾಗಿದೆ. ಹೊಸ ಆಲೋಚನೆಗಳನ್ನು ಹೊರತರುತ್ತಿದ್ದು, ಇದು ತಂಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ" ಎಂದು ಅರ್ಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದುರ್ಬಲ ತಂಡ ಎನಿಸಿದ್ದರೂ ಶೇನ್ ವಾರ್ನ್ ನಾಯಕತ್ವದಲ್ಲಿ ಮೊದಲ ಆವೃತ್ತಿಯ ಐಪಿಎಲ್ ಗೆದ್ದು ಬೀಗಿದ್ದ ರಾಜಸ್ಥಾನ್, ನಂತರದ ಆವೃತ್ತಿಗಳಲ್ಲಿ ಫೈನಲ್ ತಲುಪಲೂ ವಿಫಲವಾಗಿದೆ. ಆದರೆ, ಈ ಬಾರಿ ದುಬಾರಿ ಬೆಲೆ ನೀಡಿ ಕ್ರಿಸ್ ಮೋರಿಸ್ರನ್ನು ಖರೀದಿಸಿ ದುರ್ಬಲವಾಗಿದ್ದ ಬೌಲಿಂಗ್ ವಿಭಾಗ ಬಲಪಡಿಸಿಕೊಂಡಿದೆ.
ಅಲ್ಲದೆ ಇಂಗ್ಲೆಂಡ್ನ ಸ್ಟಾರ್ ಆಟಗಾರರಾದ ಬಟ್ಲರ್, ಬೆನ್ಸ್ಟೋಕ್ಸ್, ಲಿವಿಂಗ್ಸ್ಟೋನ್ರಂತಹ ಸ್ಟಾರ್ ಆಟಗಾರರ ಜೊತೆಗೆ ಸ್ಯಾಮ್ಸನ್, ತೆವಾಟಿಯಾರಂತಹ ದೇಸಿಯ ಆಟಗಾರರ ಬಲವನ್ನು ಆರ್ಆರ್ ಹೊಂದಿದ್ದು, ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ.
ಇದನ್ನು ಓದಿ:ಪೃಥ್ವಿ ಶಾ ಅದೊಂದು ಕೆಟ್ಟ ಸಿದ್ಧಾಂತ ಬದಲಾಯಿಸಿಕೊಂಡ್ರೆ ಭಾರತದ ಸೂಪರ್ ಸ್ಟಾರ್ ಆಗ್ತಾರೆ : ಪಾಂಟಿಂಗ್ ಭವಿಷ್ಯ