ETV Bharat / sports

watch: ಧೋನಿಯಿಂದ ನೆಟ್​ ಸೆಷನ್​ನಲ್ಲಿ ಸಿಕ್ಸರ್​ಗಳ ಸುರಿಮಳೆ​

ಪವರ್​ ಹಿಟ್ಟರ್​ಗೆ ಹೆಸರಾಗಿರುವ ಎಂ ಎಸ್ ಧೋನಿ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಭಾರತೀಯ ಆಟಗಾರನಾಗಿದ್ದಾರೆ. ಎಂ ಎಸ್​ ಡಿ 204 ಪಂದ್ಯಗಳಲ್ಲಿ 216 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಕ್ರಿಸ್​ ಗೇಲ್ 349 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಎಂಎಸ್ ಧೋನಿ ಸಿಕ್ಸರ್​
ಎಂಎಸ್ ಧೋನಿ ಸಿಕ್ಸರ್​
author img

By

Published : Apr 5, 2021, 10:41 PM IST

ಮುಂಬೈ: ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 14ನೇ ಆವೃತ್ತಿಗೂ ಮುನ್ನ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದು, ನೆಟ್​ ಸೆಷನ್ ವೇಳೆ ಮೈದಾನದ ಸುತ್ತೆಲ್ಲಾ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದಾರೆ.

ಕಳೆದ ಐಪಿಎಲ್​ನ ವೈಫಲ್ಯದಿಂದ ಹೊರಬರಲೆತ್ನಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಉಳಿದ ತಂಡಗಳಿಗಿಂತಲೂ ಮುಂಚಿತವಾಗಿಯೇ ತರಬೇತಿ ಆರಂಭಿಸಿದೆ. ಪೂಜಾರ, ರೈನಾ, ಮೋಯಿನ್ ಅಲಿ ಸೇರಿದಂತೆ ಎಲ್ಲಾ ಆಟಗಾರರು ಚೆನ್ನೈಗೆ ಕಳೆದುಕೊಂಡಿರುವ ವೈಭವವನ್ನು ಮತ್ತೆ ತಂದುಕೊಡಲು ಉತ್ಸುಕರಾಗಿ ಕಾಯುತ್ತಿದ್ದಾರೆ. ಇದಕ್ಕೆ ಧೋನಿ ಕೂಡ ಹೊರತಾಗಿಲ್ಲ, ಅವರು ನೆಟ್ಸ್‌ನಲ್ಲಿ ಸತತವಾಗಿ ಬೆವರಿಳಿಸುತ್ತಿದ್ದಾರೆ.

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಎಂ ಎಸ್ ಧೋನಿ ನೆಟ್ಸ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸುತ್ತಿರುವುದು ಕಂಡುಬಂದಿದೆ. " ತಲಾ ಸಂಪೂರ್ಣವಾಗಿ ಲೋಡ್​ ಆಗಿದ್ದಾರೆ " ಎಂದು ಸಿಎಸ್​ಕೆ ಬರೆದುಕೊಂಡಿದೆ.

ಪವರ್​ ಹಿಟ್ಟರ್​ಗೆ ಹೆಸರಾಗಿರುವ ಎಂ ಎಸ್ ಧೋನಿ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಭಾರತೀಯ ಆಟಗಾರನಾಗಿದ್ದಾರೆ. ಎಂಎಸ್​ಡಿ​ 204 ಪಂದ್ಯಗಳಲ್ಲಿ 216 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಕ್ರಿಸ್​ ಗೇಲ್ 349 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.