ETV Bharat / sports

ಅಭ್ಯಾಸ ಶುರು ಮಾಡಿದ ಆಸೀಸ್​​​ ಬೌಲರ್​ಗಳನ್ನು ಕಾಡಬಲ್ಲ ಪೂಜಾರ: 2018ರ ದಾಖಲೆ ಹೇಗಿದೆ ನೋಡಿ

ಸುದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ 5840 ರನ್ ಸಿಡಿಸಿರುವ ಚೇತೇಶ್ವರ್​ ಪೂಜಾರ ಅಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಧಾರ ಸ್ಥಂಭ ಎಂದೇ ಹೇಳಬಹುದು. 2018ರ ಪ್ರವಾಸದಲ್ಲಿ ಪೂಜಾರ 7 ಇನ್ನಿಂಗ್ಸ್​ಗಳಲ್ಲಿ 3 ಶತಕದ ಸಹಿತ 521 ರನ್ ​ಗಳಿಸಿದ್ದರು.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
author img

By

Published : Nov 19, 2020, 7:42 PM IST

ಸಿಡ್ನಿ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಕಠಿಣ ಪ್ರೋಟೋಕಾಲ್​ಗಳಿರುವುದರಿಂದ ಬಿಸಿಸಿಐ ಎಲ್ಲಾ ಮಾದರಿಯ ತಂಡವನ್ನು ಒಟ್ಟಿಗೆ ಆಸ್ಟ್ರೇಲಿಯಾಕ್ಕೆ ಕಳುಹಿಸಿದೆ. ಟೆಸ್ಟ್​ ಸರಣಿಗೆ ಇನ್ನೂ ತಿಂಗಳುಗಳ ಕಾಲ ಸಮಯವಿದ್ದರೂ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ಸಿಡ್ನಿಯಲ್ಲಿ ನೆಟ್ಸ್​ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.

ಸುದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ 5840 ರನ್ ಸಿಡಿಸಿರುವ ಚೇತೇಶ್ವರ್​ ಪೂಜಾರ ಅಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಧಾರ ಸ್ಥಂಭ ಎಂದೇ ಹೇಳಬಹುದು. 2018ರ ಪ್ರವಾಸದಲ್ಲಿ ಆಸ್ಟ್ರೇಲಿಯಾ ಬೌಲರ್​ಗಳನ್ನು ಕಾಡಿದ್ದ ಪೂಜಾರ 7 ಇನ್ನಿಂಗ್ಸ್​ಗಳಲ್ಲಿ 3 ಶತಕದ ಸಹಿತ 521 ರನ್​ ಗಳಿಸಿದ್ದರು.

ಭಾರತ ತಂಡ ಮೊದಲಿಗೆ ಸೀಮಿತ ಓವರ್​ಗಳ ಸರಣಿಯನ್ನಾಡಲಿದೆ. ನವೆಂಬರ್​ 27ರಿಂದ ಏಕದಿನ ಸರಣಿ ಆರಂಭವಾಗಲಿದೆ. ಡಿಸೆಂಬರ್​ 8ರಂದು ಕೊನೆಯ ಟಿ-20 ಪಂದ್ಯವನ್ನಾಡಲಿದೆ. ಟೆಸ್ಟ್​ ಸರಣಿಗೆ ಸಾಕಷ್ಟು ದಿನವಿದ್ದರು ಪೂಜಾರ ಇಂದಿನಿಂದಲೇ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಬಿಸಿಸಿಐ ಪೂಜಾರ ಅಭ್ಯಾಸ ಶುರು ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ.

"ಕಾಯುವಿಕೆ ಇಂದಿಗೆ ಮುಗಿದಿದೆ. ಚೇತೇಶ್ವರ್ ಪೂಜಾರ ನೆಟ್ಸ್​ಗೆ ಮರಳಿದ್ದಾರೆ. ಅವರು ಯಾವುದನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೋ ಅದನ್ನು(ಟೆಸ್ಟ್​ ಕ್ರಿಕೆಟ್ ಬ್ಯಾಟಿಂಗ್​) ಮಾಡಲು ಮರಳಿದ್ದಾರೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಡಿಸೆಂಬರ್​ 17ರಂದು ಅಡಿಲೇಡ್​ನಲ್ಲಿ ಮೊದಲ ಟೆಸ್ಟ್​ ಆರಂಭವಾಗಲಿದೆ. 2ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್​ ಡಿ. 26ರಿಂದ 30, 3ನೇ ಟೆಸ್ಟ್​ ಜನವರಿ 7-11, ಕೊನೆಯ ಟೆಸ್ಟ್​ ಜನವರಿ 15-19ರವರೆಗೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.