ETV Bharat / sports

ಲಾಲಾರಸ ಬಳಕೆ ನಿಷೇಧ ವಿಚಾರ; ಕ್ರಿಕೆಟ್​ ಆಟವನ್ನು ನೀರಸ ಸ್ಥಿತಿಗೆ ತಲುಪಿಸಲಿದೆ: ಮಿಚೆಲ್​ ಸ್ಟಾರ್ಕ್​ ಎಚ್ಚರಿಕೆ - ಆಸ್ಟ್ರೇಲಿಯಾ ವೇಗಿ ಮಿಚೆಲ್​ ಸ್ಟಾರ್ಕ್​

ಕೊರೊನಾ ಹರಡುವ ಭೀತಿಯಿಂದ ಐಸಿಸಿ ಇತ್ತೀಚೆಗೆ ಚೆಂಡಿಗೆ ಹೊಳಪು ನೀಡುವುದಕ್ಕೆ ಎಂಜಲು ದ್ರವವನ್ನು ಬಳಕೆ ಮಾಡುವುದನ್ನು ನಿಷೇಧಿಸಿದೆ.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​
author img

By

Published : May 26, 2020, 3:19 PM IST

ಸಿಡ್ನಿ: ಕೊರೊನಾ ವೈರಸ್​ ಭೀತಿಯಿಂದ ಚೆಂಡನ್ನು ಹೊಳೆಯುವಂತೆ ಮಾಡಲು ಎಂಜಲು ಅಥವಾ ಲಾಲಾರಸ ಬಳಸುವುದನ್ನು ನಿಷೇಧ ಮಾಡಿದರೆ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರಿಕೆಟ್ ಬಹಳ​ ನೀರಸವಾಗುವ ಅಪಾಯವನ್ನು ಎದುರಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಮಂಗಳವಾರ ಎಚ್ಚರಿಸಿದ್ದಾರೆ.

ಮಂಗಳವಾರ ಸಿಡ್ನಿಯಲ್ಲಿ ಆನ್​ಲೈನ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸ್ಟಾರ್ಕ್​ ಐಸಿಸಿ ಲಾಲಾರಸದ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವ ನಿರ್ಧಾರ ತುಂಬಾ ನೀರಸವಾಗಿದೆ. ಇದರಿಂದ ಕ್ರಿಕೆಟ್​ ತುಂಬಾ ಸಂಕಷ್ಟಕ್ಕೀಡಾಗಲಿದೆ ಎಂದು ಹೇಳಿದ್ದಾರೆ.

ಮಿಚೆಲ್​ ಸ್ಟಾರ್ಕ್​

ಐಸಿಸಿ ನಿರ್ಧಾರದಿಂದ ಭವಿಷ್ಯದ ಯುವಕರಿಗೆ ವೇಗದ ಬೌಲರ್​ಗಳಾಗುವ ನಿರ್ಧಾರಕ್ಕೆ ಧಕ್ಕೆಯಾಗಲಿದೆ. ಇನ್ನು ಬಾಲ್​ ಸ್ವಿಂಗ್​ ಆಗುವುದಕ್ಕೂ ಕಷ್ಟವಾಗಲಿದೆ. ಅದಕ್ಕಾಗಿ ಬೇರೆ ಮಾರ್ಗವನ್ನು ಅನುಸರಿಸಬೇಕಾಗಿದೆ ಎಂದು ಆನ್​ಲೈನ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನು ಈ ನಿರ್ಧಾರದಿಂದ ಜನರು ಕೂಡ ಕ್ರಿಕೆಟ್​ ನೋಡಲು ಇಷ್ಟಪಡುವುದಿಲ್ಲ, ಮಕ್ಕಳು ಬೌಲರ್​ಗಳಾಗಲು ಬಯಸುವುದಿಲ್ಲ ಈಗಾಗಲೆ ಆಸ್ಟ್ರೇಲಿಯಾದಲ್ಲಿ ನಾವು ಸಾಕಷ್ಟು ಸಮತಟ್ಟಾದ (ಪಿಚ್​) ವಿಕೆಟ್​ಗಳನ್ನು ಹೊಂದಿದ್ದೇವೆ. ಇದರಿಂದ ಚೆಂಡು ನೇರವಾಗಿ ಹೋದರೆ(ಸ್ವಿಂಗ್​ ಆಗದಿದ್ದರೆ) ಅದು ಬಹಳ ನೀರಸ ಸ್ಪರ್ಧೆಯಾಗಲಿದೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

ಇನ್ನು ಭಾರತದ ವಿರುದ್ಧ ಪಿಂಕ್​ ಬಾಲ್​ ಟೆಸ್ಟ್​ ಆಡುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸ್ಟಾರ್ಕ್​, ಟೆಸ್ಟ್​ ಸರಣಿಯಲ್ಲಿ ಪಿಂಕ್ ಬಾಲ್ ಟೆಸ್ಟ್​ ಪಂದ್ಯ ಒಂದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ಅಭಿಮಾನಿಗಳು ಕೂಡ ಇದನ್ನು ಪ್ರೀತಿಸುತ್ತಾರೆ. ಇದು ಸ್ಪರ್ಧೆಯನ್ನು ವಿಭಿನ್ನ ಅಂಶವನ್ನು ಸೃಷ್ಟಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್​ಗಳನ್ನು ನಡುವೆ ಸಮಾನ ಸ್ಪರ್ಧೆಯಿರುತ್ತದೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.