ಬ್ರಿಸ್ಬೇನ್: ಆ್ಯಶಸ್ ಸರಣಿಯಲ್ಲಿ ಕಳಪೆ ಫಾರ್ಮ್ನಿಂದ ಸುದ್ದಿಯಾಗಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮೊದಲ ದರ್ಜೆ ಕ್ರಿಕೆಟ್ನಲ್ಲಿ ಆಕರ್ಷಕ ಶತಕ ಸಿಡಿಸಿ ಫಾರ್ಮ್ಗೆ ಮರಳಿದ್ದಾರೆ.
ನ್ಯೂ ಸೌತ್ ವೇಲ್ಸ್ ಹಾಗೂ ಕ್ವೀನ್ಸ್ಲ್ಯಾಂಡ್ ಮುಖಾಮುಖಿಯಲ್ಲಿ ನ್ಯೂ ಸೌತ್ ವೇಲ್ಸ್ ಪರ ಕಾಣಿಸಿಕೊಂಡ ವಾರ್ನರ್ 221 ಎಸೆತದಲ್ಲಿ 125 ರನ್ ಸಿಡಿಸಿದ್ದಾರೆ. ವಾರ್ನರ್ ಶತಕದಲ್ಲಿ 19 ಬೌಂಡರಿಗಳಿದ್ದವು. ಸಿಕ್ಸರ್ಗಳಿಲ್ಲದೆ ಶತಕ ಪೂರೈಸಿದ್ದು ವಿಶೇಷ. ಈ ಮೂಲಕ ಮೊದಲ ದರ್ಜೆ ಕ್ರಿಕೆಟ್ನಲ್ಲಿ ವಾರ್ನರ್ ಶತಕದ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ತಂಡದ ಶೇ.62ರಷ್ಟು ರನ್ ವಾರ್ನರ್ ಬಾರಿಸಿದ್ದು ಇನ್ನೊಂದು ವಿಶೇಷ.
-
🔹 125 runs
— ICC (@ICC) October 11, 2019 " class="align-text-top noRightClick twitterSection" data="
🔹 221 balls
🔹 19 fours
David Warner was on 🔥 in the Sheffield Shield today!https://t.co/irD7vrntWb
">🔹 125 runs
— ICC (@ICC) October 11, 2019
🔹 221 balls
🔹 19 fours
David Warner was on 🔥 in the Sheffield Shield today!https://t.co/irD7vrntWb🔹 125 runs
— ICC (@ICC) October 11, 2019
🔹 221 balls
🔹 19 fours
David Warner was on 🔥 in the Sheffield Shield today!https://t.co/irD7vrntWb
ಕ್ವೀನ್ಸ್ಲ್ಯಾಂಡ್ 153 ರನ್ನಿಗೆ ಸರ್ವಪತನವಾಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ನ್ಯೂ ಸೌತ್ ವೇಲ್ಸ್ ವಾರ್ನರ್ ಶತಕದ ನೆರವಿನಿಂದ ಎರಡನೇ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದೆ. ಮಳೆಯಿಂದ ಪಂದ್ಯ ಅವಧಿಗೂ ಮುನ್ನವೇ ಸ್ಥಗಿತವಾಗಿದೆ.
ಫ್ಲಾಪ್ ಶೋ..! ಆ್ಯಶಸ್ನಲ್ಲಿ ಬೌಲರ್ಗಿಂತ ಕಳಪೆ ಆಟವಾಡಿದ ವಾರ್ನರ್..!
ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದ ವಾರ್ನರ್ ಟೀಕೆಗೂ ಗುರಿಯಾಗಿದ್ದರು. ಐದು ಪಂದ್ಯಗಳಿಂದ 9.5ರ ಸರಾಸರಿಯಲ್ಲಿ ಕೇವಲ 95 ರನ್ ಮಾತ್ರ ಕಲೆ ಹಾಕಲು ಶಕ್ತರಾಗಿದ್ದರು. ಈ ಕಳಪೆ ಫಾರ್ಮ್ ವಾರ್ನರ್ ಕ್ರಿಕೆಟ್ ಭವಿಷ್ಯದ ಮೇಲೆ ಪ್ರಶ್ನೆಯನ್ನೂ ಮೂಡಿಸಿತ್ತು.