ಲಾಹೋರ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಪಾಕಿಸ್ತಾನ ತಂಡದಲ್ಲಿ ಅವಕಾಶ ಸಿಕ್ಕರೆ ಹಿರಿಯ ವೇಗಿ ವಹಾಬ್ ರಿಯಾಜ್ ತಾವೂ ಮತ್ತೆ ಟೆಸ್ಟ್ ತಂಡಕ್ಕೆ ಮರಳುವುದಾಗಿ ಹೇಳಿಕೊಂಡಿದ್ದಾರೆ.
ಏಕದಿನ ಹಾಗೂ ಟಿ- 20 ಕ್ರಿಕೆಟ್ನಲ್ಲಿ ಹೆಚ್ಚಿನ ಗಮನ ನೀಡುವುದಕ್ಕಾಗಿ ಟೆಸ್ಟ್ ಕ್ರಿಕೆಟ್ಗೆ 2019ರ ಸೆಪ್ಟೆಂಬರ್ನಲ್ಲಿ ನಿವೃತ್ತಿ ಘೋಷಿಸಿದ್ದರು. ಇದೀಗ 3 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಟಿ-20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ 29 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಈ ಸರಣಿ ಜುಲೈ 30 ರಿಂದ ಆರಂಭವಾಗಲಿದೆ.
‘ಇಂಗ್ಲೆಂಡ್ ಪ್ರವಾಸದ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮಗೆ ತಿಳಿದಿರುವಂತೆ ಈ ಪ್ರವಾಸ ಅಸಾಮಾನ್ಯ ಸಂದರ್ಭದಲ್ಲಿ ನಡೆಸಲಾಗುತ್ತಿದೆ. ಬದಲಿ ಆಧಾರದ ಮೇಲೆ ತಂಡದಲ್ಲಿ ಅವಕಾಶ ಲಭಿಸಿದೆ. ತಂಡದಲ್ಲಿ ಆಡುವುದಕ್ಕೆ ಒಪ್ಪಿಗೆ ಇದಿಯೇ ಎಂದು ಪಿಸಿಬಿ ಕೇಳಿದ್ದಕ್ಕೆ, ನಾನು ನೇರವಾಗಿ ‘ಹೌದು’ ಎಂದಿದ್ದೇನೆ. ಏಕೆಂದರೆ ನನ್ನ ಆದ್ಯತೆ ಪಾಕಿಸ್ತಾನ ತಂಡದ ಪರ ಆಡುವುದು ಎಂದು ವಹಾಬ್ ವಿಡಿಯೋ ಕಾನ್ಫರೆನ್ಸ್ನಲ್ಲಿ ಹೇಳಿದ್ದಾರೆ.
34 ವರ್ಷದ ವೇಗಿ 2008 ರಿಂದ ರಾಷ್ಟ್ರೀಯ ತಂಡದಲ್ಲಿದ್ದರೂ ಪಾಕಿಸ್ತಾನ ತಂಡದಲ್ಲಿ ಸ್ಥಿರ ಪ್ರದರ್ಶನ ತೋರಿಸಿರಲಿಲ್ಲ. ಹೆಚ್ಚಿನ ವೇಗದಲ್ಲಿ ರಿವರ್ಸ್ಸ್ವಿಂಗ್ ಮಾಡುವ ಸಾಮರ್ಥ್ಯ ಇರುವುದರಿಂದ ಅವರನ್ನು ಪರಿಸ್ಥಿತಿಗಳನ್ನು ಅವಲೋಕಿಸಿ ಅವಕಾಶ ನೀಡಲಾಗುತ್ತಿತ್ತು.
2016 ಮತ್ತು 2019ರಲ್ಲಿ ನಾನು ಹಲವು ಟೂರ್ನಿಗಳಲ್ಲಿ ಆಡಿದ್ದೇನೆ. ಆದರೆ, ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ನನಗೆ ಮುಂದಿನ ಸರಣಿಯಲ್ಲಿ ಆಡಲು ಅವಕಾಶ ನೀಡಲಿಲ್ಲ, ಆಸ್ಟ್ರೇಲಿಯಾ ವಿರುದ್ಧ ಸರಣಿಯ ವೇಳೆ ಮತ್ತೆ ಕರೆಸಲಾಯಿತು. ಆಗಿನ ಆಡಳಿತ ಮಂಡಳಿ ನನ್ನನ್ನು ವಾಪಸ್ ಕಳುಹಿಸಿತು. ಈ ಘಟನೆ ನಾನು ಟೆಸ್ಟ್ ಕ್ರಿಕೆಟ್ ಆಡುವಷ್ಟು ಗುಣಮಟ್ಟವನ್ನು ಹೊಂದಿಲ್ಲ ಎನ್ನವಂತೆ ಮಾಡಿತು ಎಂದು ರಿಯಾಜ್ ರಾವೂ ಟೆಸ್ಟ್ ಕ್ರಿಕೆಟ್ಗೆ ರಾಜಿನಾಮೆ ನೀಡಿದ್ದೇಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಈಗಾಗಲೆ ಪಾಕಿಸ್ತಾನ ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ರಿಯಾಜ್ 27 ಟೆಸ್ಟ್ , 89 ಏಕದಿನ ಹಾಗೂ 31 ಟಿ -20 ಪಂದ್ಯಗಳನ್ನಾಡಲಿದೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಜುಲೈ 30-34, ಆಗಸ್ಟ್ 7-11 ಹಾಗೂ ಆಗಸ್ಟ್ 20-24ರವರೆಗೆ ಕ್ರಮವಾಗಿ ಲಂಡನ್, ಮ್ಯಾಂಚೆಸ್ಟರ್ ಹಾಗೂ ನಾಟಿಂಗ್ಹ್ಯಾಮ್ನಲ್ಲಿ ಟೆಸ್ಟ್ ಪಂದ್ಯಗಳನ್ನಾಡಲಿದೆ. ಆಗಸ್ಟ್ 29,31 ಹಾಗೂ ಸೆಪ್ಟೆಂಬರ್ 2ರಂದು ಮೂರು ಪಂದ್ಯಗಳ ಟಿ -20 ಸರಣಿಯನ್ನಾಡಲಿದೆ.