ETV Bharat / sports

ಸ್ಮಿತ್​, ವೇಡ್​ ಆರ್ಭಟ: ಭಾರತಕ್ಕೆ 195ರನ್​ಗಳ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ - ಟಿ ನಟರಾಜನ್

ಮ್ಯಾಥ್ಯೂ ವೇಡ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 194 ರನ್​ಗಳಿಸಿದೆ.

ಭಾರತಕ್ಕೆ 195ರನ್​ಗಳ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

author img

By

Published : Dec 6, 2020, 3:27 PM IST

ಸಿಡ್ನಿ: ಮ್ಯಾಥ್ಯೂ ವೇಡ್ ಅರ್ಧಶತಕ ಹಾಗೂ ಸ್ಟಿವ್​ ಸ್ಮಿತ್​ ಅವರು 46 ರನ್​ಗಳ ನೆರವಿನಿಂದ ಆಸ್ಟ್ರೇಲಿಯಾ ಭಾರತದ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 195 ರನ್​ಗಳ ಸ್ಪರ್ಧಾತ್ಮ ಟಾರ್ಗೆಟ್​ ನೀಡಿದೆ.

ಸರಣಿಯನ್ನು ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್​ ಸೋತರು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ವೇಡ್​ ಅದ್ಭುತ ಆರಂಭ ಒದಗಿಸಿಕೊಟ್ಟರು. ವೇಡ್​ ಕೇವಲ 32 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 58 ರನ್​ಗಳಿಸಿದರು. ಆದರೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಶಾರ್ಟ್​ 9 ರನ್​ಗಳಿಸಿ ನಟರಾಜನ್​ಗೆ ವಿಕೆಟ್​ ಒಪ್ಪಿಸಿದರು.

ಮ್ಯಾಕ್ಸ್​ವೆಲ್ 13 ಎಸೆತಗಳಲ್ಲಿ 2 ಸಿಕ್ಸರ್​ ಸಹಿತ 22, ಸ್ಮಿತ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 46, ಹೆನ್ರಿಕ್ಸ್​ 26 ರನ್​ಗಳಿಸಿದರು.

ಭಾರತದ ಪರ ಎನ್​. ನಟರಾಜನ್​ 4 ಓವರ್​ಗಳಲ್ಲಿ 20 ರನ್​ ನೀಡಿ 2 ವಿಕೆಟ್​ ಪಡೆದರು. ಶಾರ್ದುಲ್ ಠಾಕೂರ್​ 39ಕ್ಕೆ 1, ಚಹಾಲ್​ 51ಕ್ಕೆ1 ವಿಕೆಟ್ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.