ETV Bharat / sports

"ಚಾನ್ಸ್​​ ಸಿಗದಿದ್ದರೆ ಆತ ರನ್​ಗಳಿಸುವುದು ಹೇಗೆ"... ಪಂತ್​ ಕೈಬಿಟ್ಟಿದ್ದಕ್ಕಾಗಿ ಸೆಹ್ವಾಗ್​​ ಸಿಡಿಮಿಡಿ! - ರಿಷಭ್​ ಪಂತ್​

ನ್ಯೂಜಿಲೆಂಡ್​ ವಿರುದ್ಧದ ಟಿ-20 ಸರಣಿಯಲ್ಲಿ ಆಡುವ 11ರ ಬಳಗದಿಂದ ರಿಷಭ್​ ಪಂತ್​ಗೆ ಕೈಬಿಟ್ಟಿದ್ದಕ್ಕಾಗಿ ವಿರೇಂದ್ರ ಸೆಹ್ವಾಗ್​​ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Rishabh Pant
ರಿಷಭ್​ ಪಂತ್​​
author img

By

Published : Jan 31, 2020, 11:44 PM IST

ಮುಂಬೈ: ಬ್ಯಾಟಿಂಗ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಟೀಂ ಇಂಡಿಯಾ ಆಡುವ 11ರ ಬಳಗದಿಂದ ರಿಷಭ್​ ಪಂತ್​ ಹೊರಗುಳಿಯುತ್ತಿದ್ದು, ಇದೀಗ ಅವರ ಪರವಾಗಿ ವಿರೇಂದ್ರ ಸೆಹ್ವಾಗ್​​ ಬ್ಯಾಟ್​ ಬೀಸಿದ್ದಾರೆ.

Virender Sehwag
ವಿರೇಂದ್ರ ಸೆಹ್ವಾಗ್​​

ಮೈದಾನದಲ್ಲಿ ರಿಷಭ್​ ಪಂತ್​​​ ರನ್​ಗಳಿಕೆ ಮಾಡಲು ಪರದಾಡುತ್ತಿದ್ದಾರೆ ಎಂದು ಕೈಬಿಡಲಾಗಿದೆಯೆ? ಈ ಹಿಂದೆ ಅದೇ ರೀತಿ ಸಚಿನ್​ ತೆಂಡೂಲ್ಕರ್​​​ ಅವರನ್ನ ಬೆಂಚ್​ ಕಾಯುವಂತೆ ಮಾಡಿದರೆ ಅವರು ಇಷ್ಟೊಂದು ರನ್​ಗಳಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಅವರು ಪಂದ್ಯ ವಿಜೇತರು ಎಂದು ನೀವು ಭಾವಿಸಿದ್ರೆ, ಏಕೆ ಆಡಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕೊನೆ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರಿಷಭ್​ ಪಂತ್​ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟಿ-20 ಸರಣಿಯಿಂದಲೂ ಹೊರಗುಳಿದಿದ್ದು, ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ 2012ರಲ್ಲಿ ಧೋನಿ ಅಗ್ರ ಮೂವರು(ಸೆಹ್ವಾಗ್​,ಸಚಿನ್​ ಹಾಗೂ ಗಂಭೀರ್​) ಬ್ಯಾಟ್ಸ್​​ಮನ್​ಗಳು ನಿಧಾನಗತಿ ಫೀಲ್ಡರ್​ಗಳು ಎಂದು ಹೇಳಿಕೆ ನೀಡಿದ್ದರು.ಆದರೆ ಇದರ ಬಗ್ಗೆ ನಮ್ಮ ಬಳಿ ಯಾವತ್ತೂ ಅವರು ಕೇಳಲಿಲ್ಲ. ಆದರೆ ನಮಗೆ ಮಾಧ್ಯಮಗಳಿಂದ ಈ ಸುದ್ದಿ ಗೊತ್ತಾಯಿತು. ಪಂತ್​ಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇದೀಗ ಅವರಿಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.