ETV Bharat / sports

ಭಾರತ ತಂಡಕ್ಕೆ ದೊಡ್ಡ ತಲೆನೋವಾದ ಕೊಹ್ಲಿಯ ಸತತ ಡಕ್​ ಔಟ್ಸ್​ - ಅಹ್ಮದಾಬಾದ್​ ಟಿ20 ಪಂದ್ಯ

ಕೊಹ್ಲಿ ಇಂಗ್ಲೆಂಡ್​ ವಿರುದ್ಧ 4ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಡಕ್​ ಔಟ್ ಆಗಿದ್ದರು. ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ಗೆ ವಿಕೆಟ್​ ಒಪ್ಪಿಸಿದ್ದರು. 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಮೊಯೀನ್ ಅಲಿಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಅವರು 2ನೇ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ 62 ಹಾಗೂ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಕೇವಲ 27 ರನ್​​ಗಳಿಸಿದ್ದರು.

ಭಾರತ vs ಇಂಗ್ಲೆಂಡ್ ಟಿ20
ವಿರಾಟ್​ ಕೊಹ್ಲಿ ಡಕ್​ಔಟ್​
author img

By

Published : Mar 13, 2021, 3:43 PM IST

ಅಹ್ಮದಾಬಾದ್​: ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನಿನ್ನೆಯ ಮೊದಲ ಟಿ20 ಪಂದ್ಯ ಸೇರಿದಂತೆ ಕಳೆದ 5 ಇನ್ನಿಂಗ್ಸ್​ಗಳಲ್ಲಿ 3 ಬಾರಿ ಡಕ್​ ಔಟ್​ ಆಗಿದ್ದಾರೆ. ರನ್​ ಮಷಿನ್​ ಎಂದೇ ಕರೆಸಿಕೊಳ್ಳುತ್ತಿದ್ದ ಕೊಹ್ಲಿಯ ಈ ವೈಫಲ್ಯ ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್​ನಲ್ಲಿ ತಡಬಡಾಯಿಸಿದರು. 5 ಎಸೆತಗಳಲ್ಲಿ ಖಾತೆ ತೆರೆಯದೇ ಆದಿಲ್​ ರಶೀದ್​ ಬೌಲಿಂಗ್​ನಲ್ಲಿ ಕ್ರಿಸ್​ ಜೋರ್ಡಾನ್​ಗೆ ಕ್ಯಾಚ್​ ನೀಡಿ ಔಟಾದರು.

ಕೊಹ್ಲಿ ಇಂಗ್ಲೆಂಡ್​ ವಿರುದ್ಧ 4ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಡಕ್​ ಔಟ್ ಆಗಿದ್ದರು. ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ಗೆ ವಿಕೆಟ್​ ಒಪ್ಪಿಸಿದ್ದರು. 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಮೊಯೀನ್ ಅಲಿಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಅವರು 2ನೇ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ 62 ಹಾಗೂ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಕೇವಲ 27 ರನ್​​ಗಳಿಸಿದ್ದರು.

5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2ರನ್​​ಗೆ 1 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಬಂದ ಕೊಹ್ಲಿ 5 ಎಸೆತಗಳನ್ನೆದುರಿಸಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರಿಂದ ಭಾರತ ತಂಡ ಸಂಕಷ್ಟಕ್ಕೀಡಾಯಿತು.

ಇದನ್ನು ಓದಿ:ನಮ್ಮ ದೋಷಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಾಗಿದೆ : ವಿರಾಟ್ ಕೊಹ್ಲಿ

ಕಳೆದ ಕೆಲವು ಇನ್ನಿಂಗ್ಸ್​ಗಳಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿರುವುದರ ಕುರಿತು ಮಾತನಾಡಿದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ ಇದು ಒಂದು ಭಾಗ. ನಾವು ದೀರ್ಘಕಾಲದವರೆಗೆ ಆಡಿದಾಗ, ಏರಿಳಿತಗಳು ಇದ್ದೇ ಇರುತ್ತವೆ, ಅದನ್ನು ಬ್ಯಾಟ್ಸ್​ಮನ್ ಆಗಿ ಸ್ವೀಕರಿಸಬೇಕು ಎಂದು ಕೊಹ್ಲಿ ತಿಳಿಸಿದ್ದಾರೆ.

32 ವರ್ಷದ ಕೊಹ್ಲಿ ತಮ್ಮ ಉದ್ದೇಶ ಮತ್ತು ಯೋಜನೆಗಳಿಗೆ ಅಂಟಿಕೊಂಡು ಬ್ಯಾಟಿಂಗ್​​ ಮಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ನಿಮ್ಮ ದಿನವಾದರೆ ನೀವು ಖಂಡಿತ ದೊಡ್ಡ ಸ್ಕೋರ್​ ಗಳಿಸುತ್ತೀರಿ. ಪ್ರಮುಖ ವಿಷಯವೆಂದರೆ ಎದುರಾಳಿ ಬೌಲರ್​ಗಳು ಅವರ ಯೋಜನೆಗಳನ್ನು ತುಂಬಾ ಚೆನ್ನಾಗಿ ಜಾರಿಗೆ ತಂದರೂ ಎಂಬುದನ್ನು ನೀವು ಬ್ಯಾಟ್ಸ್​ಮನ್​ ಆಗಿ ಸ್ವೀಕರಿಸಬೇಕು. ಅವರು ನಿಮ್ಮ ಯೋಜನೆಗಳಿಗಿಂತ ಉತ್ತಮ ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯಶಸ್ವಿಯಾದರು ಎಂದು ಕೊಹ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯ ಭಾನುವಾರ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.