ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದು, ತಾನು ಆಡಿರುವ 10 ಪಂದ್ಯಗಳಿಂದ 7ರಲ್ಲಿ ಗೆಲುವು ಸಾಧಿಸಿ ಸದ್ಯ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಫುಲ್ ಖುಷಿಯಲ್ಲಿರುವ ವಿರಾಟ್ ಕೊಹ್ಲಿ ಸದ್ಯ ಆರ್ಸಿಬಿ ತಂಡದ ನಾಲ್ವರು ಪ್ಲೇಯರ್ಗಳ ಫೋಟೋ ತಮ್ಮ ಟ್ವೀಟರ್ನಲ್ಲಿ ಶೇರ್ ಮಾಡಿದ್ದು, ತಮ್ಮ ಶಾಲಾ ದಿನ ನೆನಪಿಸಿಕೊಂಡಿದ್ದಾರೆ.
-
This pic takes me back to school days. 4 guys from the same class, and AB is the kid who's finished homework and is prepared and the other 3 know they are in trouble 😂 pic.twitter.com/KmJ1XtAUJa
— Virat Kohli (@imVkohli) October 22, 2020 " class="align-text-top noRightClick twitterSection" data="
">This pic takes me back to school days. 4 guys from the same class, and AB is the kid who's finished homework and is prepared and the other 3 know they are in trouble 😂 pic.twitter.com/KmJ1XtAUJa
— Virat Kohli (@imVkohli) October 22, 2020This pic takes me back to school days. 4 guys from the same class, and AB is the kid who's finished homework and is prepared and the other 3 know they are in trouble 😂 pic.twitter.com/KmJ1XtAUJa
— Virat Kohli (@imVkohli) October 22, 2020
ಪೋಟೋದಲ್ಲಿ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಮೊಹಮ್ಮದ್ ಸಿರಾಜ್ ಇದ್ದಾರೆ. ಈ ಪೋಟೋ ನೋಡ್ತಿದ್ದರೆ ನನ್ನ ಶಾಲಾ ದಿನಗಳ ನೆನಪು ಆಗ್ತಿದ್ದು, ನಾಲ್ಕು ಹುಡುಗರು ಒಂದೇ ತರಗತಿಯವರು ಹಾಗೂ ಎಬಿ ಮನೆಯಲ್ಲಿ ಹೋಂ ವರ್ಕ್ ಮಾಡಿಕೊಂಡು ತಯಾರಾಗಿ ಬಂದಿದ್ದಾರೆ. ಉಳಿದ ಮೂವರು ತೊಂದರೆಗೆ ಸಿಲುಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿದ್ದು, ಎದುರಾಳಿ ತಂಡವನ್ನ ಕೇವಲ 84ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಇನ್ನು ಎಬಿಡಿ ಬ್ಯಾಟಿಂಗ್ನಿಂದ ರನ್ ಮಳೆ ಹರಿಯುತ್ತಿರುವುದು ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆ.