ETV Bharat / sports

ಕೊಹ್ಲಿಗೆ ಸೋಲಿನ ಭಯವಿಲ್ಲ, ನಾಯಕತ್ವದ ಯಶಸ್ಸಿಗೆ ಅದೇ ಕಾರಣ: ಗೌತಮ್​ ಗಂಭೀರ್​ - ಕೊಹ್ಲಿ ಅತ್ಯತ್ತಮ ನಾಯಕ

ಕೊಹ್ಲಿ ನಾಯಕತ್ವದ ಯಶಸ್ವಿಗೆ ರೋಹಿತ್​ ಹಾಗೂ ಧೋನಿ ಕಾರಣ. ಅವರಿಲ್ಲದಿದ್ದರೆ ಕೊಹ್ಲಿ ನಾಯಕನಾಗಿ ಏನನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಎನ್ನುತ್ತಿದ್ದ ಗಂಭೀರ್​ ಇದೇ ಮೊದಲ ಬಾರಿಗೆ ಕೊಹ್ಲಿ ಭಾರತ ತಂಡ ಕಂಡ ಅತ್ಯತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.

Gautam Gambhir
author img

By

Published : Oct 14, 2019, 2:06 PM IST

ಮುಂಬೈ: ಭಾರತ ತಂಡದ ಮಾಜಿ ಆಟಗಾರ ಹಾಲಿ ಸಂಸದ ಗೌತಮ್​ ಗಂಭೀರ್​ ಇದೇ ಮೊದಲ ಬಾರಿಗೆ ಕೊಹ್ಲಿ ನಾಯಕತ್ವವನ್ನು ಹೊಗಳಿದ್ದು, ಅವರ ನಾಯಕತ್ವದ ಯಶಸ್ಸಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.

ಭಾರತ ತಂಡ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯನ್ನು ಇನ್ನು ಒಂದು ಪಂದ್ಯವಿರುವಂತೆ ವಶಪಡಿಸಿಕೊಂಡಿದೆ. ನಾಯಕ ಕೊಹ್ಲಿ, ಮಯಾಂಕ್​ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ತಾವೂ ನಂಬರ್​ ಒನ್​ ಟೆಸ್ಟ್​ ತಂಡ ಎಂಬುದನ್ನು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಸದಾ ಕೊಹ್ಲಿಯನ್ನು ತೆಗೆಳುತ್ತಿದ್ದ ಮಾಜಿ ಆಟಗಾರ ಗೌತಮ್​ ಗಂಭೀರ್​ ಇದೀಗ ಹರಿಣಗಳ ವಿರುದ್ಧ ಟೆಸ್ಟ್​ ಸರಣಿ ಗೆಲ್ಲುತ್ತಿದ್ದಂತೆ ಕೊಹ್ಲಿ ನಾಯಕತ್ವವನ್ನು ಕೊಂಡಾಡಿದ್ದಾರೆ. " ನಿಮಗೆ ಸೋಲಿನ ಭಯವಿದ್ದರೆ, ನೀವು ಎಂದಿಗೂ ಗೆಲ್ಲುವುದಿಲ್ಲ, ಆದರೆ ಕೊಹ್ಲಿಯ ದೊಡ್ಡ ಧನಾತ್ಮಕ ಗುಣವೆಂದರೆ ಅವರೂ ಸೋಲಿಗೆ ಭಯಪಡುವುದಿಲ್ಲ" ಎಂದೂ ಕೊಹ್ಲಿಯ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಕೊಹ್ಲಿ ನಾಯಕತ್ವದ ಯಶಸ್ವಿಗೆ ರೋಹಿತ್​ ಹಾಗೂ ಧೋನಿ ಕಾರಣ, ಅವರಿಲ್ಲದಿದ್ದರೆ ಕೊಹ್ಲಿ ನಾಯಕನಾಗಿ ಏನನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಐಪಿಎಲ್​ನಲ್ಲಿ ಆರ್​ಸಿಬಿ ಒಮ್ಮೆಯೂ ಚಾಂಪಿಯನ್​ ಆಗದಿರುವುದೇ ಕಾರಣವೆಂದು ಹೇಳಿಕೆ ನೀಡಿ ಕೊಹ್ಲಿ ಹಾಗೂ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.