ETV Bharat / sports

ವಿಂಡೀಸ್​ ವಿರುದ್ಧ ಮೊದಲ ಟೆಸ್ಟ್​: ಆರಂಭಿಕರಾದ ರಾಹುಲ್​-ಮಯಾಂಕ್​ ಮೇಲೆ ನಿರೀಕ್ಷೆಯ ಭಾರ

ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಕನ್ನಡಿಗರಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್​ ರಾಹುಲ್​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.

author img

By

Published : Aug 22, 2019, 5:16 PM IST

Virat Kohli

ಆ್ಯಂಟಿಗುವಾ: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಇಂದಿನಿಂದ ಮೊದಲ ಟೆಸ್ಟ್​ ಆರಂಭವಾಗಲಿದೆ. ಕನ್ನಡಿಗರಾದ ಮಯಾಂಕ್​ ಅಗರ್​ವಾಲ್​ ಹಾಗೂ ಕೆ.ಎಲ್​ ರಾಹುಲ್​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಪಂದ್ಯದಲ್ಲಿ ಭಾರತ ಮೊದಲಿಗೆ ವಿಂಡೀಸ್​ ಸವಾಲು ಎದುರಿಸಲಿದೆ. ಭಾರತ ತಂಡದ ಆರಂಭಿಕರಾದ ಪೃಥ್ವಿ ಷಾ ಹಾಗೂ ಶಿಖರ್​ ಧವನ್​ ತಂಡದಲ್ಲಿಲ್ಲವಾದ್ದರಿಂದ ಮಯಾಂಕ್​ ಹಾಗೂ ರಾಹುಲ್​ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.

ಶಿಖರ್​,ವಿಜಯ್​ ಹಾಗೂ ಪೃಥ್ವಿ ಶಾ ಸ್ಥಾನವನ್ನು ರಾಹುಲ್​ ಹಾಗೂ ಮಯಾಂಕ್ ತುಂಬಲಿದ್ದು ಉತ್ತಮ ರನ್​ಗಳಿಸುವ ಮೂಲಕ ಅವಕಾಶಗಳನ್ನು​ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಕೊಹ್ಲಿ ಕಿವಿ ಮಾತು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಆರಂಭಿಕನಾಗಿ ಪದಾರ್ಪಣೆ ಮಾಡಿದ್ದ ಮಯಾಂಕ್​. ಸ್ಟಾರ್ಕ್​, ಹೆಜಲ್​ವುಡ್​, ಕಮ್ಮಿನ್ಸ್​ ಹಾಗೂ ನಥನ್​ ಲಿಯಾನ್​ ರಂತಹ ಅನುಭವಿ ಬೌಲರ್‌ಗಳ ವಿರುದ್ಧ ಅದ್ಭುತ ಬ್ಯಾಟಿಂಗ್​ ಮಾಡಿದ್ದರು. ಪಂದ್ಯದ ಎರಡು ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಹುಲ್​ ತಮ್ಮ ಬ್ಯಾಟಿಂಗ್​ ಪ್ರತಿಭೆಯನ್ನು ಈ ಹಿಂದೆ ನಡೆದ ಪಂದ್ಯಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಕೊಹ್ಲಿ ಉತ್ತಮ ಆರಂಭದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಂಕಿ ಅಂಶಗಳೇನು ಹೇಳುತ್ತವೆ?

ಮಯಾಂಕ್​ ಏನೋ ಅದ್ಭುತವಾಗಿ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಕಳೆದ 24 ಇನ್ನಿಂಗ್ಸ್​ಗಳಲ್ಲಿ ರಾಹುಲ್​ 12 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದ್ದಾರೆ. ಅದರಲ್ಲೂ 17 ಬಾರಿ 20 ಕ್ಕಿಂತ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 2017ರಿಂದ 21ರ ಸರಾಸರಿಯಲ್ಲಿ 480 ರನ್​ಗಳಿಸಿದ್ದಾರೆ. ರಾಹುಲ್​ ಈ ಎರಡು ವರ್ಷದಲ್ಲಿ ಒಂದು ಪಂದ್ಯದಲ್ಲಿ ಸರಾಸರಿ 35 ಎಸೆತಗಳನ್ನು ಮಾತ್ರ ಎದುರಿಸಿದ್ದಾರೆ.

ರಾಹುಲ್​ ಉತ್ತಮ ಫಾರ್ಮ್​ನಲ್ಲಿಲ್ಲವಾದ್ರೂ, ಕೊಹ್ಲಿ ಮಾತ್ರ ರಾಹುಲ್​ ಹಾಗೂ ಮಯಾಂಕ್​ ವಿಂಡೀಸ್​ ವಿರುದ್ಧ ಉತ್ತಮವಾಗಿ ಆಡಲಿದ್ದಾರೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಇದೇ ಕಾರಣದಿಂದ ಬ್ಯಾಕ್​ ಅಪ್​ ಓಪನರ್​ಗಳನ್ನು ಕೂಡ ಆಯ್ಕೆ ಮಾಡಿಕೊಂಡಿಲ್ಲ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.