ETV Bharat / sports

ಕೊಹ್ಲಿ-ರೋಹಿತ್​ ಮಧ್ಯೆ ಮುನಿಸು ಸತ್ಯ..' ಎಲ್ಲವೂ ಸರಿಯಿದೆ' ಎಂದು ಜನತೆ ಮುಂದೆ ಹೇಳಲೊಪ್ಪದ ಕ್ರಿಕೆಟಿಗರು!

ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ನಡುವೆ ಇರುವ ಒಳಜಗಳದ ರೂಮರ್ಸ್​ ಬಗ್ಗೆ ಬಹಿರಂಗವಾಗಿ ತಮ್ಮ ನಡುವೆ ಏನೂ ಜಗಳವಿಲ್ಲ ಎಂದು ಹೇಳಲು ಮನವಿ ಮಾಡಿದ್ದ ಸಿಒಎ ಸಮಿತಿ ಸಿಇಒ ಮಾತಿಗೆ ಹಿರಿಯ ಆಗಾರರಲ್ಲಿ ಒಬ್ಬರೂ ಒಪ್ಪಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Virat Kohli- Rohit Sharma
author img

By

Published : Jul 28, 2019, 9:38 AM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್​ ಶರ್ಮಾ ನಡುವಿನ ಶೀತಲ ಸಮರ ನಿಜವಾಗಿದೆ. ಅದಕ್ಕೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ವಿಶ್ವಕಪ್​ನಲ್ಲಿ ಭಾರತ ತಂಡ ಸೆಮಿಫೈನಲ್​ನಲ್ಲಿ ಸೋಲನುಭವಿಸಿದ ಮೇಲೆ ಭಾರತ ತಂಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ರೋಹಿತ್​ ಶರ್ಮಾ ಹಾಗೂ ಕೊಹ್ಲಿ ನಡುವೆ ಸಂಬಂಧ ಹದಗೆಟ್ಟಿದೆ ಎಂಬ ಸುದ್ದಿ ಹರಿದಾಡುತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ರೋಹಿತ್​ ಶರ್ಮಾ ಎಲ್ಲಾ ಆಟಗಾರರನ್ನು ಬಿಟ್ಟು ತಮ್ಮ ಪತ್ನಿಯೊಂದಿಗೆ ಇಂಗ್ಲೆಂಡ್​ನಿಂದ ಬಂದಿದ್ದರು. ಇಷ್ಟೇ ಅಲ್ಲದೆ ರೋಹಿತ್​ ಶರ್ಮಾ ಕೊಹ್ಲಿ ಪತ್ನಿಯನ್ನು ಇನ್‌ಸ್ಟಾಗ್ರಾಮ್​ನಿಂದ ಅನ್​ಫಾಲೋ ಮಾಡಿದ್ದು, ಶೀತಲ ಸಮರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರು.

ಇದಾದ ನಂತರ ಬಿಸಿಸಿಐ ಈ ಒಳಜಗಳ ವಿಚಾರವನ್ನು ನಿಲ್ಲಿಸಲು ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾರಲ್ಲಿ ಒಬ್ಬರಿಗೆ(ಯಾರು ಎಂಬ ಮಾಹಿತಿ ಗೌಪ್ಯವಾಗಿದೆ) ಸುಪ್ರಿಂಕೋರ್ಟ್​ನಿಂದ ನೇಮಿತವಾಗಿರುವ ಆಡಳಿತಾತ್ಮಕ ಸಮಿತಿ(ಸಿಒಎ)ಯಿಂದ ಎಲ್ಲವೂ ಸರಿಯಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಎಂದು ಕೇಳಿದ್ದಾರೆ. ಆದರೆ, ಅಧಿಕಾರಿಗಳ ಮನವಿಯನ್ನು ಆ ಹಿರಿಯ ತಿಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕೆ ನಿಜಕ್ಕೂ ತಂಡದಲ್ಲಿ ಒಗ್ಗಟ್ಟಿಲ್ಲ ಎಂಬುದು ಖಾತ್ರಿಯಾಗುತ್ತಿದೆ.

ತಂಡದ ಒಳಜಗಳ ತಾರಕಕ್ಕೇರುವ ಮುನ್ನ ಕೊಹ್ಲಿ ಅಥವಾ ರೋಹಿತ್​ ಶರ್ಮಾ ಇಬ್ಬರಲ್ಲಿ ಒಬ್ಬರು ಬಹಿರಂಗವಾಗಿ ತಂಡದಲ್ಲಿ ಒಗ್ಗಟ್ಟಿದೆ ಎಂದು ತಿಳಿಸದೇ ಇದ್ದರೆ ತಂಡದ ಕ್ರೀಡಾ ಸ್ಪೂರ್ತಿಗೆ ಧಕ್ಕೆಯಾಗಲಿದ್ದು, ಇದರಿಂದ ಖಂಡಿತ ಭಾರತೀಯ ಕ್ರಿಕೆಟ್​ಗೆ ನಷ್ಟವಾಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.