ETV Bharat / sports

'ಪಿಂಕ್​ ಬಾಲ್​ನಲ್ಲಾಡುವುದು ಸುಲಭದ ಮಾತಲ್ಲ': ಅಹರ್ನಿಶಿ ಟೆಸ್ಟ್​ ಕುರಿತು ಕೊಹ್ಲಿ ಹೇಳಿದ್ದೇನು?​ - ವಿರಾಟ್​ ಕೊಹ್ಲಿ-ಪಿಂಕ್​ ಬಾಲ್

ಯಾವುದೇ ಎದುರಾಳಿ ತಂಡದ ಬ್ಯಾಟ್ಸ್​ಮನ್ ಹಾಗೂ ಬೌಲರ್​ಗಳನ್ನು ಹಗುರವಾಗಿ ಕಾಣುವುದಿಲ್ಲ. ಬಾಂಗ್ಲಾದೇಶ ಕೂಡ ಉತ್ತಮ ಕೌಶಲ್ಯವುಳ್ಳ ತಂಡವಾಗಿದೆ, ಅವರಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೇವೆ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Virat Kohli news
author img

By

Published : Nov 13, 2019, 4:07 PM IST

Updated : Nov 13, 2019, 6:16 PM IST

ಇಂದೋರ್​: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ನಂತರ ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ತಂಡಕ್ಕೆ ವಾಪಾಸ್​ ಆಗಿದ್ದು, ಇಂದೋರ್​ನಲ್ಲಿ ಇತರ ಆಟಗಾರರ ಜೊತೆ ಅಭ್ಯಾಸ ನಡೆಸಿದ್ದಾರೆ.

ಭಾರತ ತಂಡಕ್ಕೆ ಹಿಂತಿರುಗಿರುವ ಕೊಹ್ಲಿ ಪಿಂಕ್​ ಬಾಲ್​ ಟೆಸ್ಟ್​ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಇಷ್ಟು ದಿನಗಳ ಕಾಲ ರೆಡ್​ ಬಾಲ್​ನಲ್ಲಿ ಆಡಿ ಅಭ್ಯಾಸವಿರುವುದರಿಂದ ಏಕಾಏಕಿ ಪಿಂಕ್​ಬಾಲ್​ಗೆ ಹೊಂದಿಕೊಳ್ಳುವುದು ಕಷ್ಟ. ಪಿಂಕ್​ಬಾಲ್​ನಲ್ಲಿ ಆಡಲು ಹೆಚ್ಚಿನ ಏಕಾಗ್ರತೆ ಅಗತ್ಯವಾಗಿದೆ. ನಾನು ನಿನ್ನೆ ಪಿಂಕ್​ ಬಾಲಿನಲ್ಲಿ ಅಭ್ಯಾಸ ಮಾಡಿದ್ದೆ. ರೆಡ್​ ಬಾಲ್​ಗೆ ಹೋಲಿಸಿದರೆ ಪಿಂಕ್​ ಬಾಲ್​ ಹೆಚ್ಚು ಸ್ವಿಂಗ್​ ಆಗುತ್ತದೆ, ಅಲ್ಲದೆ ರೆಡ್ ಬಾಲ್​ನಷ್ಟು ವೇಗ ಹೊಂದಿಲ್ಲ. ಇದು ಬೌಲರ್​ ಸ್ನೇಹಿಯಾಗಿದ್ದು, ಪಿಚ್​ ಬೌಲರ್​ಗಳಿಗಾಗಿ ತಯಾರಿಸಿದರೆ ಪಂದ್ಯವನ್ನು ಬೌಲರ್​ಗಳು ಗೆಲ್ಲಿಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇಂದೋರ್​ನಲ್ಲಿ ಟೀಮ್​ ಇಂಡಿಯಾ ನಾಯಕ ಕೊಹ್ಲಿ

ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಭಾರತಕ್ಕೆ ಸವಾಲೆಸೆಯಬಲ್ಲದೇ ಎಂಬ ವಿಚಾರ ಕುರಿತು ಮಾತನಾಡಿರುವ ಕೊಹ್ಲಿ ."ನಾವು ನಮ್ಮ ಯಾವುದೇ ಎದುರಾಳಿ ತಂಡ, ಬ್ಯಾಟ್ಸ್​ಮನ್ ಹಾಗೂ ಬೌಲರ್​ಗಳನ್ನು ಹಗುರವಾಗಿ ಕಾಣುವುದಿಲ್ಲ. ಬಾಂಗ್ಲಾದೇಶ ಕೂಡ ಉತ್ತಮ ಕೌಶಲ್ಯವುಳ್ಳ ತಂಡವಾಗಿದೆ, ಅವರಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಿದ್ದೇವೆ ಎಂದಿದ್ದಾರೆ.

ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡಿರುವ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು 240 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Intro:Body:Conclusion:
Last Updated : Nov 13, 2019, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.