ಮುಂಬೈ: ಭಾರತದ ಸೆಲೆಬ್ರೆಟಿ ಜೋಡಿಗಳಲ್ಲಿ ನಂಬರ್ ಒನ್ ಆಗಿರುವ ವಿರುಷ್ಕಾ ಜೋಡಿ ನಿನ್ನೆ 2ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಕೊಹ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್ಅನ್ನು ಅನುಷ್ಕಾಗೆ ಅರ್ಪಿಸಿದ್ದಾರೆ.
ವಿಂಡೀಸ್ ವಿರುದ್ಧ ಸರಣಿ ಗೆಲ್ಲಲು ನಿರ್ಣಾಯಕ ಪಂದ್ಯವಾಗಿದ್ದ ಕೊನೆಯ ಪಂದ್ಯದಲ್ಲಿ ಭಾರತ ತಂಡಕ್ಕೆ ಬೇಡವಾದರೂ ಮೊದಲು ಬ್ಯಾಟಿಂಗ್ ಲಭಿಸಿತ್ತು. ಆದ್ರೂ ಧೃತಿಗೆಡೆದ ಭಾರತದ ಆರಂಭಿಕ ಜೋಡಿಗಳಾದ ರಾಹುಲ್ (91) ಹಾಗೂ ರೋಹಿತ್(71) ರನ್ ಗಳಿಸಿದರೆ, ಇವರಿಗೆ ಸಾಥ್ ನೀಡಿದ ಕೊಹ್ಲಿ ಕೇವಲ 29 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಸಿಡಿಸಿ 70 ರನ್ ಗಳಿಸಿದ್ದರು. ಈ ಮೂವರು ಬ್ಯಾಟ್ಸ್ಮನ್ಗಳ ನೆರವಿನಿಂದ ಭಾರತ 240 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. 241 ರನ್ಗಳ ಟಾರ್ಗೆಟ್ ಪಡೆದಿದ್ದ ವಿಂಡೀಸ್ 8 ವಿಕೆಟ್ ಕಳೆದುಕೊಂಡು178 ರನ್ ಗಳಿಸಲಷ್ಟೇ ಶಕ್ತವಾಗಿ 67 ರನ್ಗಳಿಂದ ಸೋಲು ಕಂಡಿತು.
-
In reality there is only love and nothing else. And when god blesses you with the person who makes you realise that everyday, you have just one feeling, gratitude❤️ pic.twitter.com/uVnCA66xa4
— Virat Kohli (@imVkohli) December 11, 2019 " class="align-text-top noRightClick twitterSection" data="
">In reality there is only love and nothing else. And when god blesses you with the person who makes you realise that everyday, you have just one feeling, gratitude❤️ pic.twitter.com/uVnCA66xa4
— Virat Kohli (@imVkohli) December 11, 2019In reality there is only love and nothing else. And when god blesses you with the person who makes you realise that everyday, you have just one feeling, gratitude❤️ pic.twitter.com/uVnCA66xa4
— Virat Kohli (@imVkohli) December 11, 2019
ಇನ್ನು ಸರಣಿ ಗೆದ್ದ ಖುಷಿಯಲ್ಲಿದ್ದ ವಿರಾಟ್ ಕೊಹ್ಲಿಗೆ ನಿನ್ನೆ ವಿಶೇಷ ದಿನವಾಗಿತ್ತು. ವಿರಾಟ್ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರನ್ನು ಮದುವೆಯಾಗಿ 2 ವರ್ಷವಾಗಿದ್ದು, ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆಯಾಗಿ ತಮ್ಮ ಉತ್ತಮ ಇನ್ನಿಂಗ್ಸ್ಅನ್ನು ಪತ್ನಿಗೆ ಅರ್ಪಿಸುವುದಾಗಿ ಕೊಹ್ಲಿ ಸರಣಿ ಟ್ರೋಫಿ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿಕೊಂಡರು.
'ಇದೊಂದು ವಿಶೇಷವಾದ ರಾತ್ರಿ ಹಾಗೂ ನನ್ನ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್' ಎಂದು ಕೊಹ್ಲಿ ಉಲ್ಲೇಖಿಸಿದರು. ವಿರಾಟ್ ಹಾಗೂ ಅನುಷ್ಕಾ ಡಿಸೆಂಬರ್ 11, 2017ರಲ್ಲಿ ಇಟಲಿಯಲ್ಲಿ ಗುಟ್ಟಾಗಿ ವಿವಾಹವಾಗಿ ಕೋಟ್ಯಂತರ ಭಾರತೀಯರಿಗೆ ಆಶ್ಚರ್ಯ ಉಂಟುಮಾಡಿದ್ದರು.
ಇನ್ನು ವಿರಾಟ್ ಕೊಹ್ಲಿ ನಿನ್ನೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇದು ಅವರ 6ನೇ ಟಿ-20 ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದೆ.
-
"To love another person is to see the face of God" -Victor Hugo
— Anushka Sharma (@AnushkaSharma) December 11, 2019 " class="align-text-top noRightClick twitterSection" data="
The thing about love is that it's not just a feeling , it's much more than that . It's a guide , a propeller, a path to the absolute truth . And I am blessed , truly , wholly blessed, to have found it ❤ 🙏 pic.twitter.com/FGgarCdlm6
">"To love another person is to see the face of God" -Victor Hugo
— Anushka Sharma (@AnushkaSharma) December 11, 2019
The thing about love is that it's not just a feeling , it's much more than that . It's a guide , a propeller, a path to the absolute truth . And I am blessed , truly , wholly blessed, to have found it ❤ 🙏 pic.twitter.com/FGgarCdlm6"To love another person is to see the face of God" -Victor Hugo
— Anushka Sharma (@AnushkaSharma) December 11, 2019
The thing about love is that it's not just a feeling , it's much more than that . It's a guide , a propeller, a path to the absolute truth . And I am blessed , truly , wholly blessed, to have found it ❤ 🙏 pic.twitter.com/FGgarCdlm6