ರಾಂಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ, ಇಂದು ಮೈದಾನದಲ್ಲಿ ಇಬ್ಬರೂ ಆಟಗಾರರು ಕಳೆದ ಕ್ಷಣವನ್ನ ಗಮನಿಸಿದ್ರೆ ಆ ಮಾತುಗಳು ಸುಳ್ಳು ಎಂದು ಸಾಬೀತು ಮಾಡಿದ್ದಾರೆ.
-
Happiness is watching them laugh together.! ❤❤
— Jayesh😎 (@jayeshvk16) October 21, 2019 " class="align-text-top noRightClick twitterSection" data="
Love, pure love 😍 pic.twitter.com/LXiNM8bjJf
">Happiness is watching them laugh together.! ❤❤
— Jayesh😎 (@jayeshvk16) October 21, 2019
Love, pure love 😍 pic.twitter.com/LXiNM8bjJfHappiness is watching them laugh together.! ❤❤
— Jayesh😎 (@jayeshvk16) October 21, 2019
Love, pure love 😍 pic.twitter.com/LXiNM8bjJf
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ವೇಲೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೈದಾನದಲ್ಲಿ ನಗು ನಗುತ್ತಾ ಕಾಲ ಕಳೆದ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಬ್ಬರು ಆಟಗಾರರು ಸ್ಲಿಪ್ನಲ್ಲಿ ಕ್ಷೇತ್ರ ರಕ್ಷಣೆಗೆ ನಿಂತುಕೊಂಡಿರುವ ಸಮಯದಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಮಾತನಾಡಿದ್ದಾರೆ. ಯಾವುದೋ ವಿಚಾರದ ಬಗ್ಗೆ ಇಬ್ಬರು ಆಟಗಾರರು ತಮಾಷೆ ಮಾಡುತ್ತ ಕಾಲ ಕಳೆದಿದ್ದಾರೆ.
ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಬಿದ್ದು ಇಬ್ಬರೂ ಟೀ ಇಂಡಿಯಾದ ಉತ್ತಮ ಆಟಗಾರರು. ಸಾದಾ ಹೀಗೆ ಒಟ್ಟಿಗೆ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈ ಹಿಂದ ವಿಶ್ವಕಪ್ ಟೂರ್ನಿ ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಮಾತು ಕೇಳಿಬಂದಿತ್ತು. ನಮ್ಮಿಬ್ಬರ ನಡುವೇ ಯಾವುದೇ ವೈಮನಸ್ಸಿಲ್ಲ ಎಂದು ಕೊಹ್ಲಿ ಕೂಡ ಸ್ಪಷ್ಟನೆ ನೀಡಿದ್ದರು. ಆದರೆ, ಇಂದು ಮೈದಾನದಲ್ಲಿ ಈ ಇಬ್ಬರು ಆಟಗಾರರು ಒಟ್ಟಿಗೆ ನಗುತ್ತ ಕಾಲ ಕಳೆದ ದೃಶ್ಯ ಕಂಡ ಮೇಲೆ ಎಲ್ಲವೂ ಸರಿ ಎಲ್ಲ ಎನ್ನುತ್ತಿದ್ದವರು ಬಾಯಿ ಮುಚ್ಚಿಕೊಂಡಿದ್ದಾರೆ.