ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿಡಿ ವಿಲಿಯರ್ಸ್ ಇಂಡೋ- ಆಫ್ರಿಕನ್ ತಂಡವನ್ನು ಆಯ್ಕೆ ಮಾಡಿದ್ದು ಎಂಎಸ್ ಧೋನಿಯನ್ನು ನಾಯಕನನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಲೈವ್ ಸಂವಾದದಲ್ಲಿ ಎಬಿಡಿ-ವಿರಾಟ್ ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಅತ್ಯುತ್ತಮ ಕ್ರಿಕೆಟಿಗರನ್ನು ಸೇರಿಸಿ ಒಂದು ತಂಡವನ್ನು ಕಟ್ಟಿದ್ದಾರೆ. ಇದರಲ್ಲಿ ಇಬ್ಬರ ಸಮ್ಮತಿಯ ಮೇರೆಗೆ ಭಾರತ ತಂಡಕ್ಕೆ 2 ವಿಶ್ವಕಪ್ ಸಹಿತ ಮೂರು ಐಸಿಸಿ ಟೂರ್ನಿಗಳನ್ನು ತಂದಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನನ್ನಾಗಿ ನೇಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾಗಿರುವ ಇವರಿಬ್ಬರು ಲೈವ್ ವೇಳೆ ಕ್ರಿಕೆಟ್ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು ಧೋನಿಯನ್ನು ನಾಯಕನನನ್ನಾಗಿ ನೇಮಕ ಮಾಡಿದರು. ಇನ್ನಳಿದಂತೆ ಭಾರತದಿಂದ 7 ದಕ್ಷಿಣ ಆಫ್ರಿಕಾ ತಂಡದಿಂದ 4 ಆಟಗಾರರನ್ನು ಈ ಜೋಡಿ ನೇಮಿಸಿದೆ.
ನಾನು ಯಾವಾಗಲೂ ಆತನನ್ನು ಗೌರವಿಸುತ್ತೇನೆ, ಅವರು ಯಾವಾಗಲೂ ತಾಳ್ಮೆ ಮತ್ತು ಆಟವನ್ನು ಹೇಗೆ ಆಡಿಸಬೇಕೆಂದು ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಎಬಿಡಿ ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ವಿವರಣೆ ನೀಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ, ನನಗೆ ಎಂಎಸ್, ಅವರು ಬಾಗಶಃ ನಾಯಕ ಸ್ಥಾನಕ್ಕೆ ಸಮತೋಲನ ಹೊಂದಿರುವ ಆಟಗಾರ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ-ಎಬಿ ಡಿ ವಿಲಿಯರ್ಸ್ ನೆಚ್ಚಿನ ಇಂಡೊ-ಆಫ್ರಿಕನ್ ತಂಡ
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ, ಜಾಕ್ ಕಾಲೀಸ್, ಕಗಿಸೋ ರಬಾಡಾ, ಎಬಿ ಡಿ ವಿಲಿಯರ್ಸ್, ಡೇಲ್ ಸ್ಟೈನ್