ಮುಂಬೈ: ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ಫಾರೂಕ್ ಎಂಜಿನಿಯರ್ ಆಯ್ಕೆ ಸಮಿತಿ ವಿರುದ್ಧ ವಿವಾದಿತ ಹೇಳಿಕೆ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಈ ಹೇಳಿಕೆ ಸಂಬಂಧ ಅನುಷ್ಕಾ ಶರ್ಮಾ ಟ್ವಿಟರ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಫಾರೂಕ್ ಹೇಳಿದ್ದೇನು?
ಲಂಡನ್ನಲ್ಲಿ ನಡೆದ 2019ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೇಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರೊಬ್ಬರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕುಡಿದಿಟ್ಟ ಟೀ ಕಪ್ ಎತ್ತಿಡುತ್ತಿದ್ದರು. ಹಾಗಾಗಿ, ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹತೆಯಿಂದ ಕೂಡಿದೆ ಎಂದು ಫಾರೂಕ್ ಎಂಜಿನಿಯರ್ ಪ್ರಶ್ನೆ ಮಾಡಿದ್ದಾರೆ.
![Farokh Engineer](https://etvbharatimages.akamaized.net/etvbharat/prod-images/4920837_thwdfdfdf.jpg)
ವಿಶ್ವಕಪ್ ಕ್ರಿಕೆಟ್ ಸರಣಿ ವೇಳೆ ನಾನು ಓರ್ವ ಆಯ್ಕೆಗಾರರೊಂದಿಗೆ ಮಾತುಕತೆ ನಡೆಸಿದ್ದೆ. ಅವರು ಹಾಕಿಕೊಂಡಿದ್ದ ಬ್ಯಾಡ್ಜ್ ನೋಡಿ ನೀವು ಯಾರೆಂದು ಪ್ರಶ್ನಿಸಿದೆ. ಈ ವೇಳೆ ಅವರು ತಾವು ಟೀಂ ಇಂಡಿಯಾ ಆಯ್ಕೆ ಸಮಿತಿಯ ಸದಸ್ಯರು ಎಂದು ಹೇಳಿದ್ರು. ಆದರೆ ಅವರೇ ಅನುಷ್ಕಾ ಶರ್ಮಾ ಕುಡಿದಿಟ್ಟ ಟೀ ಕಪ್ ಎತ್ತಿಡುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡುವ ಸದಸ್ಯರಿಗೆ ಹೆಚ್ಚಿನ ಅನುಭವವಿಲ್ಲ. ಅಬ್ಬಬ್ಬಾ ಅಂದ್ರೆ, 10-12 ಟೆಸ್ಟ್ ಪಂದ್ಯಗಳಲ್ಲಿ ಅವರು ಭಾಗಿಯಾಗಿರುತ್ತಾರೆ. ಆಯ್ಕೆ ಸಮಿತಿ ಸದಸ್ಯರ ಮೇಲೆ ವಿರಾಟ್ ಕೊಹ್ಲಿ ಪ್ರಭಾವ ಹಾಗೂ ಒತ್ತಡವಿರುವ ಕಾರಣ ಈ ರೀತಿಯ ಕೆಲಸ ಮಾಡಬೇಕಾಗುತ್ತದೆ. ನನ್ನ ಪ್ರಕಾರ, ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ದಿಲೀಪ್ ವೆಂಗ್ ಸರ್ಕಾರ್ ಇರಬೇಕು. ಆದ್ರೆ ಸದ್ಯದ ಸಮಿತಿ ಸದಸ್ಯರಲ್ಲಿ ಯಾವುದೇ ರೀತಿಯ ಅರ್ಹತೆ ಇರುವವರು ಇಲ್ಲ ಎಂದು ಫಾರೂಕ್ ಕಟುವಾಗಿ ಟೀಕಿಸಿದ್ದಾರೆ.
ಅನುಷ್ಕಾ ಶರ್ಮಾ ತಿರುಗೇಟು
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅನುಷ್ಕಾ, ವಿಶ್ವಕಪ್ ವೇಳೆ ನಾನು ಕೇವಲ ಒಂದು ಪಂದ್ಯ ವೀಕ್ಷಿಸಲು ಹೋಗಿದ್ದೆ. ಫ್ಯಾಮಿಲಿ ಬಾಕ್ಸ್ನಲ್ಲಿ ಕುಳಿತುಕೊಂಡು ಪಂದ್ಯ ನೋಡಿದ್ದೆ. ಆಯ್ಕೆ ಸಮಿತಿ ಬಾಕ್ಸ್ನಲ್ಲಿ ನಾನು ಕುಳಿತಿಲ್ಲ. ನೀವು ಆಯ್ಕೆ ಸಮಿತಿ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ನನ್ನ ಹೆಸರು ಎಳೆದು ತರುವ ಅವಶ್ಯಕತೆ ಇಲ್ಲಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
- — Anushka Sharma (@AnushkaSharma) October 31, 2019 " class="align-text-top noRightClick twitterSection" data="
— Anushka Sharma (@AnushkaSharma) October 31, 2019
">— Anushka Sharma (@AnushkaSharma) October 31, 2019