ETV Bharat / sports

2011ರ ವಿಶ್ವಕಪ್​ ಫಿಕ್ಸಿಂಗ್​ ಆರೋಪ.. 20 ಎಸೆತಕ್ಕೆ 2 ರನ್​ಗಳಿಸಿದ್ದ ಉಪುಲ್​ ತರಂಗ ವಿಚಾರಣೆ - ಅರವಿಂದ ಡಿ ಸಿಲ್ವಾ

ಕಳೆದ ವಾರವಷ್ಟೇ ಅಲುತ್​ಗಮಾ, ಭಾರತದ ವಾಂಖೆಡೆಯಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು. ಶ್ರೀಲಂಕಾ ತಂಡ ಭಾರತಕ್ಕೆ ವಿಶ್ವಕಪ್​ ಮಾರಾಟ ಮಾಡಿತ್ತು ಎಂದು ಎಂದು ಆರೋಪಿಸಿದ್ದರು. ಅಲ್ಲದೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಯಾವುದೇ ಚರ್ಚೆಗೆ ಸಿದ್ಧನೆಂದು ಅವರು ಆರೋಪಿಸಿದ್ದರು..

2011 World Cup final
ಉಪುಲ್​ ತರಂಗ ವಿಚಾರಣೆ
author img

By

Published : Jul 1, 2020, 7:04 PM IST

ಕೊಲಂಬೊ : ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್​ಗಮಾಗೆ ಮಾಡಿರುವ 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಲಂಕಾ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಆರಂಭಿಕ ಬ್ಯಾಟ್ಸ್​ಮನ್​ ಉಪುಲ್​ ತರಂಗ ಅವರನ್ನು ಬುಧವಾರ ವಿಚಾರಣೆ ನಡೆಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

2011ರ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ತರಂಗ ಜಹೀರ್​ ಖಾನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸುವ ಮುನ್ನ ಬರೋಬ್ಬರಿ 20 ಎಸೆತಗಳನ್ನು ಎದುರಿಸಿ ಕೇವಲ 2 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಈ ಕಾರಣದಿಂದ ಇಂದು ವಿಚಾರಣೆ ಎದುರಿಸಿದ್ದಾರೆ.

ತರಂಗ ಅವರಲ್ಲದೆ ’ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಅಂದಿನ ಮುಖ್ಯ ಆಯ್ಕೆಗಾರ ಅರವಿಂದ ಡಿ ಸಿಲ್ವಾ ಅವರನ್ನು ಮಂಗಳವಾರು ವಿಶೇಷ ತನಿಖಾ ತಂಡ ಸುಮಾರು 6 ಗಂಟೆಗಳ ಕಾಲ ಫಿಕ್ಸಿಂಗ್​ ವಿಚಾರವಾಗಿ ಪ್ರಶ್ನಿಸಿದೆ ಎಂದು ತಿಳಿದು ಬಂದಿದೆ.

2011 World Cup final
2011ರ ವಿಶ್ವಕಪ್​ ವಿಜೇತ ಭಾರತ ತಂಡ

ಕಳೆದ ವಾರವಷ್ಟೇ ಅಲುತ್​ಗಮಾ, ಭಾರತದ ವಾಂಖೆಡೆಯಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು. ಶ್ರೀಲಂಕಾ ತಂಡ ಭಾರತಕ್ಕೆ ವಿಶ್ವಕಪ್​ ಮಾರಾಟ ಮಾಡಿತ್ತು ಎಂದು ಎಂದು ಆರೋಪಿಸಿದ್ದರು. ಅಲ್ಲದೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಯಾವುದೇ ಚರ್ಚೆಗೆ ಸಿದ್ಧನೆಂದು ಅವರು ಆರೋಪಿಸಿದ್ದರು.

ಈ ಹೇಳಿಕೆಯನ್ನು ಅಲ್ಲಗಳೆದಿದ್ದ ಅಂದಿನ ಲಂಕಾ ತಂಡದ ನಾಯಕ ಕುಮಾರ್​ ಸಂಗಾಕ್ಕರ ಈ ಆರೋಪಕ್ಕೆ ಸಾಕ್ಷ್ಯಗಳಿದ್ದರೆ ನೀಡುವಂತೆ ಸವಾಲ್​ ಹಾಕಿದ್ದರು. ಮತ್ತೊಬ್ಬ ಲೆಜೆಂಡ್​ ಜಯವರ್ದನೆ ಇದೆಲ್ಲಾ ಚುನಾವಣೆ ಗಿಮಿಕ್​ ಎಂದು ಕಿಡಿಕಾರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.