ETV Bharat / sports

ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ವಿಲಿಯಮ್ಸನ್​ಗೆ ವಿಶ್ರಾಂತಿ, ಟಿಮ್​ ಸೌಥಿಗೆ ನಾಯಕ ಪಟ್ಟ.. - ಶ್ರೀಲಂಕಾ- ನ್ಯೂಜಿಲ್ಯಾಂಡ್​

ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಕಿವೀಸ್​ ಖಾಯಂ ನಾಯಕ ವಿಲಿಯಮ್ಸನ್​ಗೆ ವಿಶ್ರಾಂತಿ ನೀಡಲಾಗಿದ್ದು, ವೇಗಿ ಟಿಮ್​ ಸೌಥಿಗೆ ನಾಯಕತ್ವ ನೀಡಲಾಗಿದೆ.

Tim Southee
author img

By

Published : Aug 20, 2019, 10:52 PM IST

ವೆಲ್ಲಿಂಗ್ಟನ್​: ವಿಶ್ವಕಪ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಅತ್ಯುತ್ತಮವಾಗಿ ನಡೆಸಿ ಫೈನಲ್​ಗೆ ತೆಗೆದುಕೊಂಡು ಹೋಗಿದ್ದ ಕೇನ್​ ವಿಲಿಯಮ್ಸನ್​ಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿಶ್ರಾಂತಿ ನೀಡಿದೆ.

ಎಲ್ಲಾ ವಿಭಾಗಗಳ ಕಿವೀಸ್​ ತಂಡದ ನಾಯಕನಾಗಿರುವ ಕೇನ್​ ವಿಲಿಯಮ್ಸನ್​ ಹಾಗೂ ಟ್ರೆಂಟ್​ ಬೌಲ್ಟ್​ಗೆ ವಿಶ್ರಾಂತಿ ನೀಡಲಾಗಿದೆ. ತಂಡದ ಹಿರಿಯ ವೇಗಿ ಟಿಮ್ ಸೌಥಿಗೆ ನಾಯಕತ್ವ ನೀಡಿದ್ದು, ರಾಸ್​ ಟೇಲರ್​ ಹಾಗೂ ಗಪ್ಟಿಲ್​ರಂತಹ ಅನುಭವಿಗಳ ಜೊತೆಗೆ ಕೆಲವು ಯುವ ಆಟಗಾರರಿಗೆ ಕಿವೀಸ್​ ಆಯ್ಕೆ ಸಮಿತಿ ಮಣೆ ಹಾಕಿದೆ.

ಇಶ್​ ಸೋಧಿ, ಮಿಚೆಲ್​ ಸ್ಯಾಂಟ್ನರ್​ ಹಾಗೂ ಟಾಡ್​ ಆಸ್ಟಲ್​ ಸ್ಪಿನ್​ ವಿಭಾಗದಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಇನ್ನು ಕಿವೀಸ್​ ಆಯ್ಕೆ ಸಮಿತಿ ಸೆರಾನ್ಸ್​, ಟಾಮ್​ ಬ್ರಸ್​ ಡೇರಿಲ್​ ಮಿಚೆಲ್​ರಂತಹ ಹೊಸ ಮುಖಗಳಿಗೂ ಅವಕಾಶ ನೀಡಿದೆ. ಉಳಿದಂತೆ ಗ್ರಾಂಡ್​ಹೋಮ್​, ಟಿಮ್​ ಸೀಫೆರ್ಟ್​,ಲೂಕಿ ಫರ್ಗ್ಯೂಶನ್​, ಸ್ಕಾಟ್‌ ಕುಗ್ಗೆಲೀಜ್ನ್‌,ಕಾಲಿನ್​ ಮನ್ರೋ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.