ಹೈದರಾಬಾದ್ : ಐಪಿಎಲ್ 12ನೇ ಆವೃತ್ತಿ ನಡೀತಿದೆ. ಎಲ್ಲೆಡೆ ಕ್ರಿಕೆಟ್ ಕ್ರೇಜ್. ಎಂಟೂ ತಂಡ ಕಪ್ ನಮ್ದೇ ಅಂತಾ ಗೆಲ್ಲಲು ಎಫರ್ಟ್ ಹಾಕ್ತಿವೆ. ತಮ್ಮಿಷ್ಟದ ತಂಡ ಇಲ್ಲ ಆಟಗಾರರನ್ನ ನೋಡಲು ಕ್ರಿಕೆಟ್ ಪ್ರೇಮಿಗಳೂ ಟಿವಿ ಮುಂದೆ ಪಟ್ಟಂಗಾ ಕೂರುತ್ತಿದ್ದಾರೆ. ಆದರೆ, ಮಾಡೋ ಕೆಲಸ ಬಿಟ್ಟು ಎಲ್ಲ ಪಂದ್ಯ ನೋಡೋಕಾಗುತ್ತಾ.. ಸಾಧ್ಯವಿಲ್ಲ. ಅದಕ್ಕಾಗಿ ಈಗ ಒಂದು ಐಡಿಯಾ ಮಾಡಿದ್ದಾರೆ ಟ್ಯಾಕ್ಸಿ ಡ್ರೈವರ್.
-
When cricket is life 😄❤
— ICC (@ICC) April 7, 2019 " class="align-text-top noRightClick twitterSection" data="
(via r/india) pic.twitter.com/ZZLSCkmXmV
">When cricket is life 😄❤
— ICC (@ICC) April 7, 2019
(via r/india) pic.twitter.com/ZZLSCkmXmVWhen cricket is life 😄❤
— ICC (@ICC) April 7, 2019
(via r/india) pic.twitter.com/ZZLSCkmXmV
ಕ್ರಿಕೆಟ್ ಪಂದ್ಯ ನಡೀತಿದೆ. ಆದರೆ, ಕೆಲಸಕ್ಕೋ, ಓದೋದಕ್ಕೋ ಇಲ್ಲ ಎಲೆಕ್ಷನ್ ಕ್ಯಾಂಪೇನ್‌ಗಾದರೂ ಹೋಗಲೇಬೇಕು. ಇದರ ಮಧ್ಯೆಯೂ ಸ್ಕೋರ್ ಏನಾಯ್ತು ಅಂತಾ ಕೇಳೋರಿದ್ದಾರೆ. ಲೈವ್ ಸ್ಕೋರ್ ನೋಡೋಕೆ ಮೊಬೈಲ್ ಇದ್ರೂ ಸಾಕು. ಆದರೆ, ಅದಲ್ಲಿದವರು ಏನ್‌ಮಾಡಬೇಕು.? ಲೈವ್ ಸ್ಕೋರ್ ಕೂಡ ಕ್ರಿಕೆಟ್ ಫ್ಯಾನ್ಸ್‌ಗೆ ಮಿಸ್ ಆಗ್ಬಾರದು ಅನ್ನೋ ಕಾರಣಕ್ಕೆ ತೆಲಂಗಾಣದ ಹೈದರಾಬಾದ್‌ನಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಐಪಿಲ್ ಲೈವ್ ಸ್ಕೋರ್‌ನ ತನ್ನ ಟ್ಯಾಕ್ಸಿ ಮೇಲೆ ಹಾಕುತ್ತಿದ್ದಾನೆ. ಬಾಲ್ ಟು ಬಾಲ್ ಬಿಡದೇ ಲೈವ್ ಸ್ಕೋರ್‌ನ ತನ್ನ ರೂಫ್‌ಟಾಪ್ ಮೇಲೆ ಹಾಕಿದ್ರಿಂದ ಕ್ರಿಕೆಟ್ ಫ್ಯಾನ್ಸ್‌ಗೆ ಹೆಲ್ಪಾಗಲಿ ಅನ್ನೋ ಉದ್ದೇಶ ಚಾಲಕನದು. ಏಪ್ರಿಲ್ 3ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಚ್‌ನ ಲೈವ್ ಸ್ಕೋರ್‌ನ ತನ್ನ ಕಾರಿನ ಮೇಲೆ ಹಾಕಿದ್ದ. ಇದೇ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗಿದೆ.
ಭಾರತದಲ್ಲಿ ಕ್ರಿಕೆಟ್ ಒಂದು ರೀತಿಯಲ್ಲಿ ಧರ್ಮವಿದ್ದಂತೆ. ಭಾರತೀಯರ ಐಪಿಎಲ್ ಕ್ರಿಕೆಟ್ ಕ್ರೇಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೂ ಇಂಪ್ರೆಸ್ ಮಾಡಿದೆ. 'ಕ್ರಿಕೆಟ್ ಜೀವನವಾಗ್ಬಿಟ್ರೇ..' ಅಂತಾ ಕ್ಯಾಪ್ಷನ್ ಕೊಟ್ಟು ಇದೇ ಪೋಟೋ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.