ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ಕ್ರಿಕೆಟ್ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದ್ದ ಸಾಧನೆಗೀಗ 12 ವರ್ಷಗಳ ಸಂಭ್ರಮ. ಅಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿದ್ದ ಫೈನಲ್ ಪಂದ್ಯ ಇಂದಿಗೂ ನಮ್ಮ ಕಣ್ಣುಮುಂದಿದೆ.
ಚೊಚ್ಚಲ ಟಿ20 ವಿಶ್ವಕಪ್ಗೆ ಸಚಿನ್, ದ್ರಾವಿಡ್, ಗಂಗೂಲಿ ಅನಿಲ್ ಕುಂಬ್ಳೆಯಂತಹ ಹಿರಿಯ ಆಟಗಾರರ ಅನುಪಸ್ಥತಿಯಲ್ಲಿ ವಿಕೆಟ್ ಕೀಪರ್ ಧೋನಿ ನೇತೃತ್ವದಲ್ಲಿ ಯುವ ತಂಡವನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ ತಂಡದಿಂದ ಚಾಂಪಿಯನ್ ಪಟ್ಟವಿರಲಿ ಲೀಗ್ನಲ್ಲಿ ಹೊರಬರದಿದ್ದರೆ ಸಾಕು ಎನ್ನುವಂತ ಪರಿಸ್ಥಿತಿ ಇತ್ತು. ಏಕೆಂದರೆ ಅದಾಗಲೇ ಏಕದಿನ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಟೀಂ ಇಂಡಿಯಾ ಹೊರಬಿದ್ದಿತ್ತು.
ಆದರೆ ಭಾರತದ ಯುವ ಪಡೆ ಇಡೀ ವಿಶ್ವವನ್ನೇ ಬೆರಗುಗೊಳಿಸುವಂತಹ ಪ್ರದರ್ಶನ ನೀಡಿತ್ತು. ಸ್ಕಾಟ್ಲೆಂಡ್ ವಿರುದ್ಧ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. 2ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೈ ಸಾಧಿಸಿ ಬಾಲ್ ಔಟ್ನಲ್ಲಿ ಜಯಗಳಿಸುವ ಮೂಲಕ ಸೂಪರ್ 8 ಪ್ರವೇಶಿಸಿತ್ತು. ನಂತರ ಸೂಪರ್ 8 ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 10 ರನ್ಗಳಿಂದ ಸೋತಿದ್ದ ಟೀಂ ಇಂಡಿಯಾ ನಂತರದ ಪಂದ್ಯದಲ್ಲಿ ಯುವರಾಜ್ ಸಿಂಗ್(6 ಬಾಲಿಗೆ 6 ಸಿಕ್ಸರ್) ಅಬ್ಬರದ ನೆರವಿನಿಂದ ಇಂಗ್ಲೆಂಡ್ ವಿರುದ್ಧ 18 ರನ್ಗಳಿಂದ, ದಕ್ಷಿಣ ಆಫ್ರಿಕಾ ವಿರುದ್ಧ 37 ರನ್ಗಳಿಂದ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿತ್ತು.
ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ನಡೆಸಿ 189 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನೆತ್ತಿದ್ದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಗಿ 15 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 70 ರನ್ ಗಳಿಸಿದ್ದ ಯುವರಾಜ್ ಸಿಂಗ್ ಭಾರತದ ಗೆಲುವಿಗೆ ಕಾರಣರಾಗಿದ್ದರು.
ಫೈನಲ್ನಲ್ಲಿ ಪಾಕ್-ಭಾರತ ಮುಖಾಮುಖಿ
50 ಓವರ್ಗಳ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಎರಡು ತಂಡಗಳು ಫೈನಲ್ ಪ್ರವೇಶಿಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಗಂಭೀರ್ ಅವರ 75 ರನ್ಗಳ ನೆರವಿನಿಂದ 157 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ 152 ರನ್ಗಳಿಗೆ ಆಲೌಟ್ ಆಗುವ ಮೂಲಕ 5 ರನ್ಗಳಿಂದ ಸೋಲನ್ನಪ್ಪಿತ್ತು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
-
This day, in 2⃣0⃣0⃣7⃣#TeamIndia were crowned World T20 Champions 😎🇮🇳 pic.twitter.com/o7gUrTF8XN
— BCCI (@BCCI) September 24, 2019 " class="align-text-top noRightClick twitterSection" data="
">This day, in 2⃣0⃣0⃣7⃣#TeamIndia were crowned World T20 Champions 😎🇮🇳 pic.twitter.com/o7gUrTF8XN
— BCCI (@BCCI) September 24, 2019This day, in 2⃣0⃣0⃣7⃣#TeamIndia were crowned World T20 Champions 😎🇮🇳 pic.twitter.com/o7gUrTF8XN
— BCCI (@BCCI) September 24, 2019
ಕೊನೆಯ ಓವರ್ನಲ್ಲಿ ಮಿಸ್ಬಾ ಎಡವಟ್ಟು, ಭಾರತಕ್ಕೆ ವಿಶ್ವಕಪ್
ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ 13 ರನ್ಗಳ ಅವಶ್ಯಕತೆಯಿತ್ತು. ಮಿಸ್ಬಾ ಉಲ್ ಹಕ್ 37 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಧೋನಿ ಅನಾನುಭವಿ ಜೋಗಿಂದರ್ ಶರ್ಮಾಗೆ ಚೆಂಡು ನೀಡಿದ್ದರು. ಶರ್ಮಾ ಮೊದಲ ಎಸೆತವನ್ನು ವೈಡ್ ಮಾಡಿದ್ದರಿಂದ ಗೆಲ್ಲಲು 12 ರನ್ ಅಗತ್ಯವಿತ್ತು, ಮೊದಲ ಎಸೆತವನ್ನು ಡಾಟ್ ಮಾಡಿದ್ದ ಮಿಸ್ಬಾ ಎರಡನೇ ಎಸೆತವನ್ನು ಸಿಕ್ಸರ್ಗೆಗಟ್ಟಿದ್ದರು. ಆಗ ಪಾಕ್ಗೆ ಗೆಲ್ಲಲು 4 ಎಸೆತಗಳಲ್ಲಿ 6 ರನ್ಗಳ ಅಗತ್ಯವಿತ್ತು. ಆದರೆ ಮಿಸ್ಬಾ ಫೈನ್ಲೆಗ್ನಲ್ಲಿ ಸ್ಕೂಪ್ ಶಾಟ್ ಮೂಲಕ ಎಡವಟ್ಟು ಮಾಡಿಕೊಂಡರು. ಆ ಚೆಂಡು ಬೌಂಡರಿ ಸೇರುವ ಬದಲು ಶ್ರೀಶಾಂತ್ ಕೈಸೇರಿತ್ತು. ಈ ಮೂಲಕ ಪಾಕಿಸ್ತಾನ ಸೇರಬೇಕಿದ್ದ ಚೊಚ್ಚಲ ಟಿ20 ವಿಶ್ವಕಪ್ ಭಾರತೀಯರ ಕೈಸೇರಿತ್ತು.
ಈ ವಿಶ್ವಕಪ್ ಭಾರತಕ್ಕೆ ಕೇವಲ ವಿಶ್ವಕಪ್ ಮಾತ್ರ ತಂದುಕೊಡಲಿಲ್ಲ, ಭಾರತ ತಂಡಕ್ಕೆ ಧೋನಿಯಂತ ಚಾಣಾಕ್ಷ ನಾಯಕನನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿತು. ಮುಂದೆ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ವಿಶ್ವದ ಬಲಿಷ್ಠ ತಂಡವಾಗಿ ಬೆಳೆಯಲು ನಾಂದಿಹಾಡಿತು.