ETV Bharat / sports

ದಾದಾ ಕೈಯಲ್ಲಿ ಬಿಸಿಸಿಐ.. ಗಂಗೂಲಿ ಹೇಳಿದ ಪ್ರಮುಖ 10 ಅಂಶಗಳಿವು! - ಗಂಗೂಲಿ ಸುದ್ದಿಗೋಷ್ಠಿ

ಬಿಸಿಸಿಐ ಕಚೇರಿಯಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗಂಗೂಲಿ ಪ್ರಮುಖ ವಿಚಾರಗಳ ಕುರಿತು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ
author img

By

Published : Oct 24, 2019, 12:08 AM IST

Updated : Oct 24, 2019, 12:51 AM IST

ಮುಂಬೈ: ಬಿಸಿಸಿಐ ಅಧ್ಯಕ್ಷಸ್ಥಾನವನ್ನ ಅಲಂಕರಿಸಿರುವ ಸೌರವ್​ ಗಂಗೂಲಿ ಮೇಲೆ ಹಲವು ಜವಾಬ್ದಾರಿಗಳಿವೆ. ಸ್ವತಃ ಟೀಂ ಇಂಡಿಯಾ ನಾಯಕನಾಗಿದ್ದ ಗಂಗೂಲಿ, ಕ್ರಿಕೆಟ್​ ಬೋರ್ಡ್​ನ ಅಧ್ಯಕ್ಷರಾಗಿರೋದು ಅವರ ಜವಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದೆ.

ಇಂದು ಬಿಸಿಸಿಐ ಕಚೇರಿಯಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗಂಗೂಲಿ ತಮ್ಮ ಮುಂದಿನ ಯೋಜನೆಗಳ ಕುರಿತು ಮಾಧ್ಯಮಗಳ ಜೊತೆ ಅವರು ಮುಕ್ತವಾಗಿ ಮಾತನಾಡಿದರು.

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಗಂಗೂಲಿ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

  • ನಾನು ಭಾರತದ ನಾಯಕನಾದಾಗಲೂ ಇದೇ ರೀತಿಯ ಪರಿಸ್ಥಿತಿ ಇತ್ತು; ಹಲವು ಸುಧಾರಣೆಗಳನ್ನು ಮಾಡಬೇಕಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಭಾರಿ ಪ್ರಮಾಣದ ಹಣವನ್ನು ನೀಡಬೇಕಿದೆ. ನಾನು ಬದಲಾವಣೆಯನ್ನು ಮಾಡಬಹುದಾದ ಸ್ಥಾನದಲ್ಲಿದ್ದೇನೆ. ಈ ಬದಲಾವಣೆ ಒಂದು ಸವಾಲು ಕೂಡ ಹೌದು. ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೇ ನನಗೆ ತಿಳಿದಿರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಭಾರತ ತಂಡವನ್ನ ಮುನ್ನಡೆಸಿದ ರೀತಿ ಈ ಸಂಸ್ಥೆಯನ್ನು ಮುಂದೆ ಕೊಂಡೊಯ್ಯುತ್ತೇನೆ.
  • ಈ ಸಂಸ್ಥೆ ಸದಸ್ಯರಿಗೆ ಸೇರಿದೆ. ಕಳೆದ ಮೂರು ವರ್ಷಗಳಿಂದ ಕಾರ್ಯಕಾರಿ ಸಮಿತಿಗಳಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಭಾರತೀಯ ಕ್ರಿಕೆಟ್‌ನ ಸಹಜತೆಯನ್ನು ಮರಳಿ ತರುತ್ತೆವೆ. ಕಳೆದ ಮೂರು ವರ್ಷಗಳಿಂದ ಬಿಸಿಸಿಐನಲ್ಲಿ ತುರ್ತು ಪರಿಸ್ಥಿತಿ ಇತ್ತು, ಇದರಿಂದ ನಾವು ಹೊರಬರಲಿದ್ದೇವೆ.
  • ಮೂಂದಿನ ಮೂರು ವಾರಗಳಲ್ಲಿ ವಾರ್ಷಿಕ ಸಾಮಾನ್ಯ ಸಭೆ ಕರೆದು ಬಿಸಿಸಿಐ ಹಣಕಾಸಿನ ಬಗ್ಗೆ ಚರ್ಚೆ ನಡೆಸುತ್ತೇವೆ. ನಾವು ಸಂಸ್ಥೆಗೆ ಹೊಸಬರಾಗಿದ್ದರಿಂದ ಕಳೆದ ಮೂರು ವರ್ಷದಲ್ಲಿ ಏನಾಗಿದೆ ಎಂದು ತಿಳಿದಿಲ್ಲ. ಹೀಗಾಗಿ ನಾವು ಈ ಮಾರ್ಗ ಅನುಸರಿಸುತ್ತಿದ್ದೇವೆ.
  • ನಾಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಮಾತನಾಡುತ್ತೇನೆ. ಅವರಿಗೆ ಬೇಕಾದ ಬೆಂಬಲ ಒದಗಿಸುತ್ತೇನೆ. ತಂಡದ ದೃಷ್ಟಿಯಿಂದ ಒಳ್ಳೆಯ ತೀರ್ಮಾನ ಕೈಗೊಳ್ಳಲಾಗುತ್ತದೆ. ಟೀಂ ಇಂಡಿಯಾ ಪ್ರಪಂಚದ ಬೆಸ್ಟ್​ ಟೀಂ ಆಗಬೇಕು.
  • ನಾವು ಭಾರತೀಯ ಕ್ರಿಕೆಟ್​ನ ಭವಿಷ್ಯದ ಕುರಿತು ಯೋಚನೆ ಮಾಡಬೇಕಾಗುತ್ತದೆ. ಈ ದೃಷ್ಠಿಯಲ್ಲಿ ವಿರಾಟ್ ಮುಖ್ಯ ವ್ಯಕ್ತಿಯಾಗಿದ್ದಾರೆ, ಅವರು ಹೇಳುವುದನ್ನ ಕೇಳುತ್ತೇವೆ. ಅವರಿಗೆ ನಮ್ಮ ಬೆಂಬಲ ಇದ್ದೇ ಇದೆ. ನಾನು ಕೂಡ ನಾಯಕನಾಗಿದ್ದರಿಂದ ನನಗೆ ಅರ್ಥವಾಗುತ್ತದೆ. ಭಾರತ ತಂಡ ಒಂದು ಉತ್ತಮ ತಂಡ, ವಿಶ್ವಕಪ್ ಗೆಲ್ಲದೇ ಇರಬಹುದು ಆದ್ರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ.
  • ಕೊಹ್ಲಿ ಟೆಸ್ಟ್​ ಪಂದ್ಯಗಳಿಗೆ ಕೇವಲ 5 ಸ್ಥಳಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗೂಲಿ, ನಮ್ಮಲ್ಲಿ ಟೆಸ್ಟ್​ ಪಂದ್ಯಗಳಿಗಾಗಿ ಉತ್ತಮ ಮೈದಾನಗಳಿವೆ. ಈ ಬಗ್ಗೆ ಕೊಹ್ಲಿ ಜೊತೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.
  • ದೇಶೀ ಕ್ರಿಕೆಟ್(ರಣಜಿ) ಒಂದು ಉತ್ತಮ ವೇದಿಕೆ. ಇಲ್ಲಿಂದಲೇ ಟೀಂ ಇಂಡಿಯಾಕ್ಕೆ ಕೊಹ್ಲಿ, ಧೋನಿ, ರಹಾನೆ,ರೋಹಿತ್ ಶರ್ಮಾ ಬಂದಿದ್ದಾರೆ. ಹೀಗಾಗಿ ದೇಶಿ ಕ್ರಿಕೆಟ್​ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ.
  • ಕ್ರಿಕೆಟ್ ಅಡ್ವೈಸರಿ ಕಮಿಟಿ ರಚನೆ ಮಾಡಬೇಕು. ಏಕೆಂದರೆ ಇವರು, ಆಯ್ಕೆಗಾರರು ಸೇರಿದಂತೆ ಬೋರ್ಡ್​ಗೆ ಬೇಕಾಗುವ ಇತರ ಸದಸ್ಯರನ್ನ ನೇಮಕ ಮಾಡಡಲು ಸಹಕಾರಿಯಾಗುತ್ತಾರೆ.
  • ಐಸಿಸಿ ವಿಷಯ ಕೂಡ ಮುಖ್ಯವಾಗುತ್ತದೆ ಏಕೆಂದರೆ ಬಿಸಿಸಿಐ ಪ್ರತಿ 5 ವರ್ಷಕ್ಕೆ ಐಸಿಸಿಯಿಂದ 372 ಮಿಲಿಯನ್ ಡಾಲರ್ ಹಣ ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ 2 ವಿಶ್ವ ಟೂರ್ನಮೆಂಟ್​ಗಳು ನಡೆಯಲಿವೆ.
  • ನಾವು ಇಲ್ಲಿರುವುದು ಆಟಗಾರರು ಉತ್ತಮ ಪ್ರರ್ಶನ ನೀಡಲು ಸಹಾಯ ಮಾಡಲು. ಅದು ಪ್ರಥಮ ದರ್ಜೆ ಆಗಿರಲಿ, ಮಹಿಳಾ ಕ್ರಿಕೆಟ್ ಆಗಿರಲಿ, ಐಪಿಎಲ್ ಆಗಿರಲಿ, ನಮ್ಮ ಗುರಿ ಉತ್ತಮ ಪ್ರದರ್ಶನದ ಮೂಲಕ ಆಟಗಾರರ ಜೀವನ ಸುಲಭಗೊಳಿಸುವುದು ಎಂದು ತಾವು ಭವಿಷ್ಯದಲ್ಲಿ ತೆಗೆದುಕೊಳ್ಳುವ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

Intro:Body:Conclusion:
Last Updated : Oct 24, 2019, 12:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.